
ಗದಗ ನಗರದ ವಿವೇಕಾನಂದ ಬಡಾವಣೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ನಾಯಿ ಮರಿಯನ್ನು ಕೋತಿ ಎತ್ತಿಕೊಂಡು ಮುದ್ದಾಡಿದೆ.

ಇತ್ತೀಚಿನ ದಿನಗಳಲ್ಲಿ ಮನಕುಲಗಳಲ್ಲೇ ಜಾತಿ ಜಾತಿ ಅಂತ ಗುದ್ದಾಡುವ ಸಂದರ್ಭದಲ್ಲಿ ಈ ಕೋತಿ ನಾಯಿ ಮರಿಯನ್ನು ಎರಡು ದಿನಗಳಿಂದ ಮುದ್ದಿನಿಂದ ನೋಡಿಕೊಳ್ತಾಯಿದೆ.

ಆ ನಾಯಿ ಮರಿ ಕೂಡ ಕೋತಿಯನ್ನು ಬಿಟ್ಟು ಅಲುಗಾಡುತ್ತಿಲ್ಲ. ಕೋತಿ ನಾಯಿ ಮರಿಯ ಪ್ರೀತಿಯ ಆಟ ನೋಡಿ ಜನ್ರು ಫುಲ್ ಖುಷ್ ಆಗಿದ್ದಾರೆ.

ಕೋತಿ ನಾಯಿ ಮರಿಯ ಅಪರೂಪದ ಘಟನೆ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.

ಕೋತಿ ಅಮ್ಮನಂತೆ ತನ್ನ ಮಡಿಲಲ್ಲಿ ನಾಯಿ ಮರಿಯನ್ನು ಇಟ್ಟುಕೊಂಡು ಪಾರಾಡುತ್ತಿದೆ.