
ಬಾಲಿವುಡ್ ಹಾಗೂ ಹಿಂದಿ ಕಿರುತೆರೆ ಬೆಡಗಿ ಮೌನಿ ರಾಯ್ ಸದ್ಯ ಕಾಶ್ಮೀರಕ್ಕೆ ಹನಿಮೂನ್ಗಾಗಿ ತೆರಳಿದ್ದಾರೆ.

ಸೂರಜ್ ನಂಬಿಯಾರ್ ಹಾಗೂ ಮೌನಿ ರಾಯ್ ಜತೆಯಾಗಿ ಫೋಟೋಗಳಿಗೆ ಭರ್ಜರಿ ಪೋಸ್ ನೀಡಿದ್ದಾರೆ.

ಸದ್ಯ ಮೌನಿ ಇನ್ಸ್ಟಾಗ್ರಾಂ ತುಂಬಾ ಕಾಶ್ಮೀರ ಪ್ರವಾಸದ ಚಿತ್ರಗಳೇ ತುಂಬಿಕೊಂಡಿವೆ. ಹೊಸ ಹೊಸ ಕ್ಯಾಪ್ಶನ್ ಮೂಲಕ ಮೌನಿ ಚಿತ್ರಗಳನ್ನು ಶೇರ್ ಮಾಡುತ್ತಿದ್ದಾರೆ.

ಅಡ್ವೆಂಚರ್ ಕ್ರೀಡೆಗಳಲ್ಲೂ ಭಾಗವಹಿಸುತ್ತಿರುವ ಮೌನಿ ಹಾಗೂ ಸೂರಜ್ ನಂಬಿಯಾರ್.

ಮೌನಿ ಹಾಗೂ ಸೂರಜ್ 2022ರ ಜನವರಿ 27ರಂದು ವಿವಾಹವಾಗಿದ್ದರು.

ಗೋವಾ ಕಡಲ ತೀರದಲ್ಲಿ ಅದ್ದೂರಿಯಾಗಿ ಮೌನಿ ಹಾಗೂ ಸೂರಜ್ ವಿವಾಹ ನೆರವೇರಿತ್ತು.

ಬಾಲಿವುಡ್ ಹಾಗೂ ಕಿರುತೆರೆ ತಾರೆಯರು ಆಗಮಿಸಿ ಮೌನಿಗೆ ಶುಭಾಶಯ ಕೋರಿದ್ದರು.