
ಲೂಸಿಯಾ ಪವನ್ ನಟನೆಯ ‘ಶೋಧ’ ವೆಬ್ ಸರಣಿ ಈ ವಾರ ಒಟಿಟಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಮರೆತಿರುವ ಥ್ರಿಲ್ಲರ್ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ. ಜೀ5ನಲ್ಲಿ ಈ ವೆಬ್ ಸರಣಿ ವೀಕ್ಷಣೆಗೆ ಲಭ್ಯ ಇದೆ.

ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಈ ಸಿನಿಮಾ ಭಾರಿ ನಿರೀಕ್ಷೆ ಹುಟ್ಟಿಸಿತ್ತು. ಸಿನಿಮಾ ಇದೀಗ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಭಾಗ್ಯಶ್ರೀ ಭೋರ್ಸೆ ನಾಯಕಿ.

ಕನ್ನಡದ ಶಾರ್ಟ್ ವಿಡಿಯೋಗಳು, ಶಾರ್ಟ್ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಪಾಯಲ್ ಚೆಂಗಪ್ಪ ನಟಿಸಿರುವ ತೆಲುಗು ಸಿನಿಮಾ ರ್ಯಾಂಬೊ ಇನ್ ಲವ್ ಸಿನಿಮಾ ಈ ವಾರ ಜಿಯೋ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಿದೆ.

ಹೂವು ಮಾಫಿಯಾ ಕತೆಯನ್ನು ಒಳಗೊಂಡಿರುವ ಮಲಯಾಳಂ ಸಿನಿಮಾ 4.5 ಗ್ಯಾಂಗ್ ಈ ವಾರ ಒಟಿಟಿಗೆ ಬಂದಿದೆ. ಸೋನಿ ಲಿವ್ನಲ್ಲಿ ಈ ಸಿನಿಮಾ ಅನ್ನು ವೀಕ್ಷಿಸಬಹುದಾಗಿದೆ. ಸಿನಿಮಾದ ಟ್ರೈಲರ್ ಕುತೂಹಲಭರಿತವಾಗಿದೆ

ಖ್ಯಾತ ಕಾದಂಬರಿ ಆಧರಿತ ಇಂಗ್ಲೀಷ್ ಸಿನಿಮಾ ‘ಥರ್ಸ್ ಡೇ ಮರ್ಡರ್ ಕ್ಲಬ್’ ಈ ವಾರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಹೆಸರೇ ಹೇಳುವಂತೆ ಇದೊಂದು ಮರ್ಡರ್ ಮಿಸ್ಟರಿ ಕತೆಯಾಗಿದೆ.

ಜಾಕಿ ಚಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕರಾಟೆ ಕಿಡ್ಸ್: ದಿ ಲಿಜೆಂಡ್ಸ್’ ಸಿನಿಮಾ ಕೆಲ ವಾರಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಹಿಟ್ ಆಗಿತ್ತು. ಈ ಸಿನಿಮಾ ಇದೀಗ ನೆಟ್ಫ್ಲಿಕ್ಸ್ಗೆ ಬಂದಿದೆ.

ಖ್ಯಾತ ಕಾದಂಬರಿ ಆಧರಿತ ಇಂಗ್ಲೀಷ್ ಸಿನಿಮಾ ‘ಥರ್ಸ್ ಡೇ ಮರ್ಡರ್ ಕ್ಲಬ್’ ಈ ವಾರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಹೆಸರೇ ಹೇಳುವಂತೆ ಇದೊಂದು ಮರ್ಡರ್ ಮಿಸ್ಟರಿ ಕತೆಯಾಗಿದೆ.

ಆದಿತ್ಯ ರಾಯ್ ಕಪೂರ್, ಸಾರಾ ಅಲಿ ಖಾನ್ ಇನ್ನೂ ಹಲವು ಬಾಲಿವುಡ್ ನಟರು ನಟಿಸಿರುವ ‘ಮೆಟ್ರೊ ಇನ್ ದಿನೊ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ನೆಟ್ಫ್ಲಿಕ್ಸ್ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯ ಇದೆ.