ಸಾಸಿವೆಗೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ನ್ನು ನಿಯಂತ್ರಿಸುವ ಶಕ್ತಿ ಮಾತ್ರವಲ್ಲದೇ ದೇಹದ ತೂಕವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.
ಒಂದು ಚಮಚ ಸಾಸಿವೆ ಪುಡಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅಲ್ಲದೆ, ಮಲಬದ್ಧತೆ ಸಮಸ್ಯೆಗಳು ಕಡಿಮೆಯಾಗುತ್ತದೆ.
ಸಾಸಿವೆಯನ್ನ ಸೇವಿಸುವುದರಿಂದ ಉಸಿರಾಟದ ತೊಂದರೆಗಳು ಕಡಿಮೆ ಆಗುತ್ತದೆ. ಸಾಸಿವೆ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ.
ಸಾಸಿವೆ ಪುಡಿಯಿಂದ ಕೂದಲನ್ನು ಸ್ವಚ್ಛಗೊಳಿಸುವುದರಿಂದ ಕೂದಲಿನ ಸೌಂದರ್ಯ ಹೆಚ್ಚುತ್ತದೆ. ಕೂದಲು ಉದುರುವುದು, ಶುಷ್ಕತೆ ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತದೆ.
ಸಾಸಿವೆ ಬೀಜಗಳಲ್ಲಿನ ಕಿಣ್ವದ ಚಟುವಟಿಕೆಯು ನರಮಂಡಲದ ಕಾರ್ಯ, ಬೆಳವಣಿಗೆಯ ಮಾರ್ಪಾಡುಗಳ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ.