
ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ ಸಂತತಿ ಅಳುವಿನಂಚಿನತ್ತ ಸಾಗುತ್ತಿದೆ. ಹುಲಿಗಳ ಸಂಖ್ಯೆಯ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ.

ಹುಲಿ ದಿನಾಚರಣೆ ಹಿನ್ನೆಲೆ ಮೈಸೂರಿನ ಕಲಾವಿದ ಅತ್ಯಬ್ ಅಹಮದ್ ಅವರು ತಮ್ಮ ಕುಂಚದ ಕೈಚಳಕದಿಂದ ಆಕರ್ಷಕ ಹುಲಿಗಳ ಚಿತ್ರಗಳ ಚಿತ್ತಾರ ಮೂಡಿಸಿದ್ದಾರೆ.

ಮೈಸೂರಿನ ಹವ್ಯಾಸಿ ಕಲಾವಿದ ಅತ್ಯಬ್ ಅಹಮದ್ ಬಿಡಿಸಿದ ಚಿತ್ರಗಳು ವೈರಲ್ ಆಗುತ್ತಿವೆ. ಮಳೆಯ ನಡುವೆ ಮರದ ಅಡಿ ಆಶ್ರಯ ಪಡೆದ ಹುಲಿ ಜೋಡಿಯ ಚಿತ್ರ.

ನವಿಲು ಬೇಟೆಗಿಳಿದ ಹುಲಿ ಮೇಲೆ ಹಾರಿದ ನವಿಲುಗಳ ಚಿತ್ರ.

ಜಿಂಕೆ ಬೇಟೆ ಆಡಿ ಮರ ಹತ್ತಿದ ಚಿರತೆ, ಕೆಳಗೆ ಕಾದು ನಿಂತ ಹುಲಿಗಳ ಗುಂಪು. ಹೀಗೆ ಕಲಾವಿದ ಅತ್ಯಬ್ ಅವರು ಬಿಡಿಸಿದ ಹುಲಿಯ ಆಕರ್ಷಕ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.