AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿನ ಈ ಸ್ಥಳಗಳಲ್ಲಿ ಗುರುತ್ವಾಕರ್ಷಣಾ ಶಕ್ತಿಯೇ ಇಲ್ಲವಂತೆ! ಏನಿದು ರಹಸ್ಯ?

ಜಗತ್ತಿನಲ್ಲಿ ಗುರುತ್ವಾಕರ್ಷಣಾ ಶಕ್ತಿಯೇ ಇಲ್ಲದ ಅನೇಕ ಸ್ಥಳಗಳಿವೆ. ಅವುಗಳು ರಹಸ್ಯಗಳಿಂದ ಕೂಡಿದ್ದು, ವಿಜ್ಞಾನಿಗಳು ಸಹ ಆ ರಹಸ್ಯಗಳನ್ನು ಬೇಧಿಸಲು ವಿಫಲರಾಗಿದ್ದಾರೆ. ಗುರುತ್ವಾಕರ್ಷಣೆಯ ಶಕ್ತಿ ಕೆಲಸ ಮಾಡದ ಭೂಮಿಯ ಮೇಲಿನ ಸ್ಥಳಗಳು ಯಾವುವು? ಇಲ್ಲಿದೆ ಮಾಹಿತಿ.

ಗಣಪತಿ ಶರ್ಮಾ
|

Updated on: May 12, 2023 | 8:17 PM

Share
Bizarre news Mysterious places in the world where gravity is zero know here in Kannada

ಮನುಷ್ಯರು ಇಂದು ಚಂದ್ರನನ್ನು ತಲುಪಿದ್ದರೂ ಮತ್ತು ಮಂಗಳ ಗ್ರಹವನ್ನು ತಲುಪಲು ಸಿದ್ಧತೆಗಳು ನಡೆಯುತ್ತಿದ್ದರೂ, ಇನ್ನೂ ನಮ್ಮ ಭೂಮಿಯನ್ನು ಸರಿಯಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ ಎಂದರೆ ನಂಬಲೇಬೇಕು. ಅದರ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಜಗತ್ತಿನಲ್ಲಿ ಇಂತಹ ಅನೇಕ ರಹಸ್ಯಗಳಿವೆ, ವಿಜ್ಞಾನಿಗಳು ಸಹ ಅದನ್ನು ಪರಿಹರಿಸಲು ವಿಫಲರಾಗಿದ್ದಾರೆ. ಗುರುತ್ವಾಕರ್ಷಣೆಯ ಬಲವು ಕಾರ್ಯನಿರ್ವಹಿಸದ ಅಂತಹ ಕೆಲವು ನಿಗೂಢ ಸ್ಥಳಗಳ ಬಗ್ಗೆ ಇಲ್ಲಿದೆ ಮಾಹಿತಿ. ಅಚ್ಚರಿಯ ಸಂಗತಿ ಎಂದರೆ, ಭಾರತದಲ್ಲಿಯೂ ಇಂತಹ ಸ್ಥಳವಿದೆ! (ಪ್ರಾತಿನಿಧಿಕ ಫೋಟೋ: Pixabay)

1 / 5
Bizarre news Mysterious places in the world where gravity is zero know here in Kannada

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಾಂತಾ ಕ್ರೂಜ್ ಎಂಬ ಹೆಸರಿನ ಪ್ರದೇಶವಿದ್ದು, ಅಲ್ಲಿ ‘ಮಿಸ್ಟರಿ ಸ್ಪಾಟ್’ ಇದೆ. ಈ ಸ್ಥಳದಲ್ಲಿ, ಒಬ್ಬ ವ್ಯಕ್ತಿಯು ಓರೆಯಾಗಿಯೂ ಕೆಳ ಬೀಳದೆ ನಿಲ್ಲಬಹುದು. ಗುರುತ್ವಾಕರ್ಷಣೆಯು ಇಲ್ಲಿ ಕೆಲಸ ಮಾಡುವುದಿಲ್ಲ. ವಿಶೇಷವೆಂದರೆ ಈ ಪ್ರದೇಶವು ಕೇವಲ 150 ಚದರ ಅಡಿಗಳಷ್ಟು ವಿಸ್ತಾರವಾಗಿದೆ, ಇದನ್ನು 1939 ರಲ್ಲಿ ಕಂಡುಹಿಡಿಯಲಾಯಿತು. (ಪ್ರಾತಿನಿಧಿಕ ಫೋಟೋ: Pixabay)

2 / 5
Bizarre news Mysterious places in the world where gravity is zero know here in Kannada

ಅಮೆರಿಕದ ಮಿಚಿಗನ್​​ನಲ್ಲಿಯೇ ಗುರುತ್ವಾಕರ್ಷಣೆ ಕೆಲಸ ಮಾಡದ ಇಂತಹ ನಿಗೂಢ ಸ್ಥಳವೊಂದಿದೆ. 1950 ರಲ್ಲಿ ಪತ್ತೆಯಾದ ಈ ಸ್ಥಳವನ್ನು ‘ಸೇಂಟ್ ಇಗ್ನಾಸ್ ಮಿಸ್ಟರಿ ಸ್ಪಾಟ್' ಎಂದು ಕರೆಯಲಾಗುತ್ತದೆ. ಇಲ್ಲಿಯೂ ಎಷ್ಟು ಬಾಗಿ ಬೇಕಿದ್ದರೂ ನಿಲ್ಲಬಹುದು, ಬೀಳುವುದಿಲ್ಲ. ಈ ಪ್ರದೇಶವು 300 ಚದರ ಅಡಿಗಳಷ್ಟು ವಿಸ್ತಾರವಾಗಿದೆ. (ಪ್ರಾತಿನಿಧಿಕ ಫೋಟೋ: Pixabay)

3 / 5
Bizarre news Mysterious places in the world where gravity is zero know here in Kannada

ಅದರಲ್ಲಿ ಗುರುತ್ವಾಕರ್ಷಣೆ ಶೂನ್ಯವಾಗಿರುವ ‘ಕಾಸ್ಮಾಸ್ ಮಿಸ್ಟರಿ ಸ್ಪಾಟ್' ಎಂಬ ಸ್ಥಳವೂ ಒಂದು. ವಿಶೇಷವೆಂದರೆ ಈ ಸ್ಥಳವು ಅಮೆರಿಕದ ದಕ್ಷಿಣ ಡಕೋಟಾದಲ್ಲಿಯೂ ಇದೆ. ಗುರುತ್ವಾಕರ್ಷಣೆ ಇಲ್ಲದ ಕಾರಣ ಇಲ್ಲಿನ ಮರಗಳೂ ವಿಚಿತ್ರ ರೀತಿಯಲ್ಲಿ ಬಾಗಿದಂತಿವೆ. (ಪ್ರಾತಿನಿಧಿಕ ಫೋಟೋ: Pixabay)

4 / 5
Bizarre news Mysterious places in the world where gravity is zero know here in Kannada

ಲೇಹ್-ಲಡಾಖ್‌ನಲ್ಲಿ ಮ್ಯಾಗ್ನೆಟಿಕ್ ಹಿಲ್ ಎಂಬ ಸ್ಥಳವಿದೆ, ಇದನ್ನು ಭಾರತದಲ್ಲಿ ನಿಗೂಢ ಸ್ಥಳವೆಂದು ಪರಿಗಣಿಸಲಾಗಿದೆ. ಇಲ್ಲಿ ನೀವು ವಾಹನಗಳನ್ನು ನಿಲ್ಲಿಸಿ ನಿಲ್ಲಿಸಿದರೂ, ಅವು ಸ್ವಯಂಚಾಲಿತವಾಗಿ ಮೇಲಕ್ಕೆ ಏರಲು ಪ್ರಾರಂಭಿಸುತ್ತವೆ ಮತ್ತು ಅದು ಕೂಡ ಗಂಟೆಗೆ 20 ಕಿ.ಮೀ ವೇಗದಲ್ಲಿ! ಈ ಸ್ಥಳವು ವಿಶ್ವದ ಅತ್ಯಂತ ನಿಗೂಢ ಸ್ಥಳಗಳಲ್ಲಿ ಒಂದಾಗಿದೆ. (ಪ್ರಾತಿನಿಧಿಕ ಫೋಟೋ: Pixabay)

5 / 5
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್