ಚಾಮುಂಡಿ ಬೆಟ್ಟದಲ್ಲಿ ತಾಯಿಗೆ ಮೊದಲ ಆಷಾಢ ಶುಕ್ರವಾರದ ಪೂಜೆ ಹೇಗಿತ್ತು? ಅಮ್ಮನ ಅಲಂಕಾರವನ್ನು ಒಮ್ಮೆ ಕಣ್ತುಂಬಿಕೊಳ್ಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 12, 2024 | 11:11 PM

ಎಲ್ಲೆಲ್ಲೂ ಜನಸಾಗರ. ಭಕ್ತಿಯ ಪರಾಕಾಷ್ಠೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಾರಣ ಆಷಾಡಮಾಸದ ಶುಕ್ರವಾರದ ಪೂಜೆ. ಹೀಗಾಗಿ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿತ್ತು. ಭಕ್ತರು ಆಷಾಡ ಶುಕ್ರವಾರ ಪೂಜೆಯಲ್ಲಿ ಭಾಗವಹಿಸಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಪುನೀತರಾದರು.

1 / 6
ಆಷಾಢಮಾಸ ಶುಕ್ರವಾರ ಹಿನ್ನೆಲೆ ಇಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಬೆಟ್ಟದಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

2 / 6
ಆಷಾಡ ಶುಕ್ರವಾರದ ಪ್ರಯುಕ್ತ ಬೆಳಗಿನ ಜಾವ 3.30ಕ್ಕೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳು ಆರಂಭವಾದವು. ನಾಡ ದೇವತೆ ಚಾಮುಂಡಿಗೆ ಅಭಿಷೇಕ ಅರ್ಚನೆ, ಅಷ್ಟೋತ್ತರ ಪೂಜೆಗಳನ್ನು ದೇವಸ್ಥಾನದ ಅರ್ಚಕರು ನೆರವೇರಿಸಿದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ಅಧಿದೇವತೆಯ ದರ್ಶನ ಪಡೆದರು.

3 / 6
ಆಷಾಡ ಮಾಸದ ಮೊದಲನೇ ಶುಕ್ರವಾರದಂದು ತಾಯಿ ಚಾಮುಂಡಿ ದೇವಿಯ ದರ್ಶನ ಪಡೆದರೆ ಒಳಿತಾಗುವುದು ಎಂಬ ನಂಬಿಕೆ ಭಕ್ತರದು. ಹೀಗಾಗಿ ಚಾಮುಂಡಿ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿತ್ತು. ಆ ಮೂಲಕ ದೇವಿಯ ದರ್ಶನ ಪಡೆದು ಪುನೀತರಾದರು.

4 / 6
ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಂಡ ಭಕ್ತರ ಮೊಗದಲ್ಲಿ ಧನ್ಯತಾ ಭಾವ ಮನೆ ಮಾಡಿತ್ತು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಹಾ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ.

5 / 6
ಇನ್ನು ಸರತಿ ಸಾಲಿನಲ್ಲಿ ನಿಂತು ಚಾಮುಂಡೇಶ್ವರಿಯನ್ನು ಭಕ್ತರ ಮೊಗದಲ್ಲಿ ಧನ್ಯತಾ ಭಾವ ಮನೆ ಮಾಡಿತ್ತು.

6 / 6
ಕಳೆದ ವರ್ಷದಂತೆಯೇ ಈ ವರ್ಷವೂ ಬೆಟ್ಟಕ್ಕೆ ಸಾರ್ವಜನಿಕರ ಖಾಸಗಿ ವಾಹನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಬೆಟ್ಟದ ತಪ್ಪಲಿನಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಪೊಲೀಸ್ ಬಿಗಿ ಬಂದೋಬಸ್ತ್, ಬ್ಯಾರಿಕೇಡ್ ಕುಡಿಯುವ ನೀರಿನ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು.