AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ಮನೆಯ ಅಂಗಳವು ಪಾಚಿ ಕಟ್ಟಿದರೆ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಟಿಪ್ಸ್

ಮಳೆಗಾಲದಲ್ಲಿ ಜೋರಾಗಿ ಸುರಿಯುವ ಮಳೆಗೆ ಎಲ್ಲೆಂದರಲ್ಲಿ ನೀರು ನಿಂತುಕೊಂಡರೆ ಆ ಜಾಗದಲ್ಲಿ ಪಾಚಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಮನೆಯಂಗಳ, ಕಾಂಪೌಂಡ್, ಬಾಲ್ಕನಿ ಸೇರಿದಂತೆ ಎಲ್ಲೆಂದರಲ್ಲಿ ಹಾವಸೆಯು ಕಾಣಿಸಿಕೊಳ್ಳುತ್ತದೆ. ಇದನ್ನು ಸ್ವಚ್ಛಗೊಳಿಸಿದರೆ ಹೋದಲ್ಲಿ, ಇದರ ಮೇಲೆ ಕಾಲಿಟ್ಟು ಬೀಳುವ ಸಾಧ್ಯತೆಯೇ ಹೆಚ್ಚು.ಈ ಸಲಹೆಯನ್ನು ಅನುಸರಿಸಿದರೆ ಮಳೆಗಾಲದಲ್ಲಿ ಎಲ್ಲೆಂದರರಲ್ಲಿ ಕಾಣಿಸಿಕೊಳ್ಳುವ ಪಾಚಿಯನ್ನು ಸುಲಭವಾಗಿ ತೊಡೆದು ಹಾಕಬಹುದು.

ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 12, 2024 | 5:56 PM

Share
ಪಾಚಿಗಟ್ಟಿದ ನೆಲೆವನ್ನು ಸ್ವಚ್ಛಗೊಳಿಸಲು ನೀರು ಹಾಗೂ ಬ್ಲೀಚಿಂಗ್ ಪೌಡರ್ ಅನ್ನು ಬಳಸಬಹುದು. ಈ ಬ್ಲೀಚಿಂಗ್ ಪೌಡರ್ ಅನ್ನು ಪಾಚಿ ಇರುವ ಸ್ಥಳದಲ್ಲಿ ಸಿಂಪಡಿಸಿ, ಸ್ವಲ್ಪ ಸಮಯದ ಬಳಿಕ ನೀರಿನಿಂದ ತೊಳೆದರೆ ಸ್ವಚ್ಛವಾಗುತ್ತದೆ.

1 / 5
ಕಾಂಪೌಂಡ್ ಅಥವಾ ಅಂಗಳವು ಪಾಚಿಗಟ್ಟಿದ್ದರೆ  ನೀರಿನ ಜೊತೆಗೆ ವಿನೆಗರ್ ಬೆರೆಸಿ, ಈ ದ್ರಾವಣವನ್ನು ಪಾಚಿ ಇರುವಲ್ಲಿಗೆ ಸ್ಪ್ರೇ ಮಾಡಿ,  ಸ್ವಲ್ಪ ಸಮಯದ ಬಿಟ್ಟು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಬಹುದು.

2 / 5
ನಿಮ್ಮ ಮನೆಯ ಸುತ್ತಮುತ್ತ ಬಹಳ ಪಾಚಿ ಕಟ್ಟಿದ್ದರೆ, ಸುಣ್ಣದ ಚಿಪ್ಪನ್ನು ಒಂದು ಕಬ್ಬಿಣದ ಬಕೆಟ್‌ನಲ್ಲಿ ಸುರಿದು, ನೀರನ್ನು ಬೆರೆಸಿದರೆ ಕುದಿಯಲು ಪ್ರಾರಂಭಿಸುತ್ತದೆ. ಇದನ್ನು ಪಾಚಿ ಕಚ್ಚಿದ ಜಾಗಕ್ಕೆ ಹಾಕಿ ಹಾಗೆಯೇ ಬಿಟ್ಟರೆ  ಮಳೆ ಬಂದಾಗ ಸುಣ್ಣದ ನೀರಿನೊಂದಿಗೆ ಪಾಚಿಯು ಕೊಚ್ಚಿಕೊಂಡು ಹೋಗುತ್ತದೆ.

3 / 5
ಪ್ರೆಶರ್ ವಾಶರ್ ಬಳಸಿ ಪಾಚಿಯನ್ನು ತೆಗೆಯಬಹುದಾಗಿದೆ. ಈ ಪಾಚಿ ಗಟ್ಟಿದ ಸ್ಥಳದಲ್ಲಿ ಪ್ರೆಷರ್‌ ವಾಶರ್ ನಿಂದ ನೀರು ಬಿಡುವುದರಿಂದ ನೆಲಕ್ಕೆ ಅಂಟಿಕೊಂಡಿರುವ ಪಾಚಿ ಸೇರಿದಂತೆ ಕೊಳೆಯು ಹೋಗುತ್ತದೆ.

4 / 5
ಪಾಚಿಗಟ್ಟಿದ ಜಾಗಕ್ಕೆ ವಿನೆಗರ್‌, ಬೇಕಿಂಗ್‌ ಸೋಡಾ, ಪುಡಿ ಉಪ್ಪು ನಂತರ ನಿಂಬೆರಸ ಹಾಕಿ ಸ್ವಲ್ಪ ಸಮಯಗಳ ಕಾಲ ಹಾಗೆಯೇ ಬಿಡಿ. ನಂತರ ಬಿಸಿ ನೀರಿನಿಂದ ತೊಳೆದರೆ ಪಾಚಿಯು ಹೋಗಿ ನೆಲವು ಸ್ವಚ್ಛವಾಗುತ್ತದೆ.

5 / 5