ತೆರವುಗೊಳಿಸಬೇಕಾದ ಅನಧಿಕೃತ ದೇಗುಲಗಳ ಪಟ್ಟಿಗೆ ಸೇರಿರುವ ಮೈಸೂರಿನ ಪ್ರಮುಖ ಧಾರ್ಮಿಕ ಕೇಂದ್ರಗಳು ಇವು

Edited By:

Updated on: Sep 14, 2021 | 9:53 AM

ಮೈಸೂರಿನಲ್ಲಿ ಅನಧಿಕೃತ ದೇಗುಲಗಳನ್ನು ತೆರವು ಮಾಡಬೇಕೆಂಬ ವಿಚಾರ ಈಗ ವಿವಾದವಾಗಿದೆ. ತೆರವುಗೊಳಿಸಬೇಕಾದ ಕಟ್ಟಡಗಳ ಪಟ್ಟಿಯಲ್ಲಿ ಮೈಸೂರು ನಗರದ ಕೆಲ ಪ್ರಮುಖ ಧಾರ್ಮಿಕ ಕೇಂದ್ರಗಳೂ ಸೇರ್ಪಡೆಗೊಂಡಿದ್ದು ಅವುಗಳ ಚಿತ್ರಮಾಲಿಕೆ ಇಲ್ಲಿದೆ.

1 / 9
ಮೈಸೂರು ಪಂಚಮುಖಿ ಗಣಪತಿ ದೇವಾಲಯ

ಮೈಸೂರಿನ ಸಯ್ಯಾಜಿರಾವ್ ರಸ್ತೆಯಲಿರುವ  ಪಂಚಮುಖಿ ದೇವಸ್ಥಾನ ಮೂರು ರಸ್ತೆ ಕೂಡುವ ಸ್ಥಳದಲ್ಲಿದೆ. ಈ ದೇವಸ್ಥಾನವನ್ನು ನಿರ್ಮಾಣ ಮಾಡಿ ಸುಮಾರು 25 ವರ್ಷಗಳಾಗಿವೆ. ಇಲ್ಲಿ ಗಣಪತಿ ಪಂಚಮುಖಿಯಾಗಿರುವ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಗಣೇಶ ಚತುರ್ಥಿಯಂದು ಹೆಚ್ಚಿನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹಬ್ಬದ ದಿನಗಳಲ್ಲಿ ಇಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯುತ್ತದೆ. ಈ ದೇವಸ್ಥಾನದ ತೆರವಿಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರು ಪಂಚಮುಖಿ ಗಣಪತಿ ದೇವಾಲಯ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲಿರುವ ಪಂಚಮುಖಿ ದೇವಸ್ಥಾನ ಮೂರು ರಸ್ತೆ ಕೂಡುವ ಸ್ಥಳದಲ್ಲಿದೆ. ಈ ದೇವಸ್ಥಾನವನ್ನು ನಿರ್ಮಾಣ ಮಾಡಿ ಸುಮಾರು 25 ವರ್ಷಗಳಾಗಿವೆ. ಇಲ್ಲಿ ಗಣಪತಿ ಪಂಚಮುಖಿಯಾಗಿರುವ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಗಣೇಶ ಚತುರ್ಥಿಯಂದು ಹೆಚ್ಚಿನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹಬ್ಬದ ದಿನಗಳಲ್ಲಿ ಇಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯುತ್ತದೆ. ಈ ದೇವಸ್ಥಾನದ ತೆರವಿಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

2 / 9
ಅಗ್ರಹಾರದಲ್ಲಿರುವ 101 ಗಣಪತಿ ದೇಗುಲ

ಈ ದೇಗುಲವು ಬಹಳ ಪ್ರಸಿದ್ಧಿಯನ್ನು ಹೊಂದಿದ್ದು, ಹಳೆಯ ದೇಗುಲವಾಗಿದೆ. ಇದನ್ನು ತೆರವುಗೊಳಿಸುವುದು ಸಾಂಸ್ಕೃತಿಕ ನಗರಿಯ ಇತಿಹಾಸಕ್ಕೆ ಕುಂದು ತಂದಂತೆ ಎಂದು ಭಕ್ತರು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಅಗ್ರಹಾರದಲ್ಲಿರುವ 101 ಗಣಪತಿ ದೇಗುಲ ಈ ದೇಗುಲವು ಬಹಳ ಪ್ರಸಿದ್ಧಿಯನ್ನು ಹೊಂದಿದ್ದು, ಹಳೆಯ ದೇಗುಲವಾಗಿದೆ. ಇದನ್ನು ತೆರವುಗೊಳಿಸುವುದು ಸಾಂಸ್ಕೃತಿಕ ನಗರಿಯ ಇತಿಹಾಸಕ್ಕೆ ಕುಂದು ತಂದಂತೆ ಎಂದು ಭಕ್ತರು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

3 / 9
ರೋಟರಿ ಬಳಿಯ ಇಮಾಮ್​ ಶಾ ದರ್ಗಾ

ರೋಟರಿ ಬಳಿಯ ಇಮಾಮ್​ ಶಾ ದರ್ಗಾ

4 / 9
ಮೈಸೂರು ದೇವರಾಜ ಅರಸು ರಸ್ತೆಯಲ್ಲಿರುವ ದರ್ಗಾ


ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಗೋರಿಯು ದೇವರಾಜ ಅರಸು ರಸ್ತೆಯ ಪುಟ್‌ಪಾತ್‌ನಲ್ಲಿದೆ. ಮೊದಲು 50 ವರ್ಷಗಳ ಹಿಂದೆ ಇಲ್ಲಿ ಕೇವಲ ಗೋರಿ ಮಾತ್ರ ಇತ್ತು. ನಂತರ ಇಲ್ಲಿ ಈ ಗೋರಿಗೆ ಕಟ್ಟಡವನ್ನು ಕಟ್ಟಲಾಗಿತ್ತು. 2011ರಲ್ಲಿ ಗೋರಿಯ ಮೂಲ ಸ್ವರೂಪವನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಜಿಲ್ಲಾಡಳಿತ ತೆರವುಗೊಳಿಸಿತ್ತು. ಆದರೆ  ಮೂಲ ಸ್ವರೂಪ ತೆರವುಗೊಳಿಸದಂತೆ 2012ರಲ್ಲಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ದಿನಾಂಕ: 25.09.2013 ರಂದು ಮೈಸೂರು ಪಾಲಿಕೆ ಆಯುಕ್ತರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್​ ಮಂಡಳಿಯವರು ಜಂಟಿಯಾಗಿ ಪರಿಶೀಲಿಸಿ ಸದರಿ ಗೋರಿಯು ರಸ್ತೆ ಅಥವಾ ಫುಟ್​ಪಾತ್ ಮೇಲೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ ಇದ್ದರೆ ತೆರವುಗೊಳಿಸಲು ಮುಕ್ತವಾಗಿರುತ್ತದೆ ಎಂದು ಆದೇಶಿಸಿದ್ದಾರೆ. ಆದರೂ ಗೋರಿ ತೆರವು ಕಾರ್ಯ ಸಾಧ್ಯವಾಗಿಲ್ಲ. ಇದು ಸಂಸದ ಪ್ರತಾಪಸಿಂಹ ಹಾಗೂ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಮೈಸೂರು ದೇವರಾಜ ಅರಸು ರಸ್ತೆಯಲ್ಲಿರುವ ದರ್ಗಾ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಗೋರಿಯು ದೇವರಾಜ ಅರಸು ರಸ್ತೆಯ ಪುಟ್‌ಪಾತ್‌ನಲ್ಲಿದೆ. ಮೊದಲು 50 ವರ್ಷಗಳ ಹಿಂದೆ ಇಲ್ಲಿ ಕೇವಲ ಗೋರಿ ಮಾತ್ರ ಇತ್ತು. ನಂತರ ಇಲ್ಲಿ ಈ ಗೋರಿಗೆ ಕಟ್ಟಡವನ್ನು ಕಟ್ಟಲಾಗಿತ್ತು. 2011ರಲ್ಲಿ ಗೋರಿಯ ಮೂಲ ಸ್ವರೂಪವನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಜಿಲ್ಲಾಡಳಿತ ತೆರವುಗೊಳಿಸಿತ್ತು. ಆದರೆ ಮೂಲ ಸ್ವರೂಪ ತೆರವುಗೊಳಿಸದಂತೆ 2012ರಲ್ಲಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ದಿನಾಂಕ: 25.09.2013 ರಂದು ಮೈಸೂರು ಪಾಲಿಕೆ ಆಯುಕ್ತರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್​ ಮಂಡಳಿಯವರು ಜಂಟಿಯಾಗಿ ಪರಿಶೀಲಿಸಿ ಸದರಿ ಗೋರಿಯು ರಸ್ತೆ ಅಥವಾ ಫುಟ್​ಪಾತ್ ಮೇಲೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ ಇದ್ದರೆ ತೆರವುಗೊಳಿಸಲು ಮುಕ್ತವಾಗಿರುತ್ತದೆ ಎಂದು ಆದೇಶಿಸಿದ್ದಾರೆ. ಆದರೂ ಗೋರಿ ತೆರವು ಕಾರ್ಯ ಸಾಧ್ಯವಾಗಿಲ್ಲ. ಇದು ಸಂಸದ ಪ್ರತಾಪಸಿಂಹ ಹಾಗೂ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

5 / 9
ದುರ್ಗಾ ಪರಮೇಶ್ವರಿ ದೇಗುಲ.

ಮೈಸೂರಿನ ಇಟ್ಟಿಗೆಗೂಡಿನ ಪಾರ್ಕ್​ನಲ್ಲಿರುವ ದೇವಾಲಯ. ಪಾರ್ಕ್​ನಲ್ಲಿರುವ ಕಾರಣಕ್ಕೆ ತೆರವುಗೊಳಿಸಲು ಪಟ್ಟಿ‌ಮಾಡಲಾಗಿದೆ. ಮೊದಲು ಪಾರ್ಕಿನ ಅರಳಿ ಕಟ್ಟೆಯ ಬಳಿ ಮೂಲ ವಿಗ್ರಹ ವಿತ್ತು. ಭಕ್ತರು ಹೆಚ್ಚಾದ ನಂತರ ದೇಗುಲ ನಿರ್ಮಿಸಲಾಗಿದೆ. ಸುಮಾರು ಮೂವತ್ತು ವರ್ಷದ ಹಿಂದೆ ಬೃಹತ್ ದೇವಾಲಯ ಹಾಗೂ ಗೋಪುರ ನಿರ್ಮಾಣ ಮಾಡಲಾಯ್ತು. ಇಲ್ಲಿಗೆ ಪ್ರತಿದಿನ ನೂರಾರು ಭಕ್ತರು ಆಗಮಿಸುತ್ತಾರೆ. ಮಂಗಳವಾರ ಶುಕ್ರವಾರ ಬೇರೆ ಬೇರೆ ಜಿಲ್ಲೆಗಳಿಂದಲೂ ಭಕ್ತರು ಬರುತ್ತಾರೆ. ಇದರ ತೆರವಿಗೆ ಸ್ಥಳೀಯರು ಭಕ್ತರ ವಿರೋಧವಿದೆ.

ದುರ್ಗಾ ಪರಮೇಶ್ವರಿ ದೇಗುಲ. ಮೈಸೂರಿನ ಇಟ್ಟಿಗೆಗೂಡಿನ ಪಾರ್ಕ್​ನಲ್ಲಿರುವ ದೇವಾಲಯ. ಪಾರ್ಕ್​ನಲ್ಲಿರುವ ಕಾರಣಕ್ಕೆ ತೆರವುಗೊಳಿಸಲು ಪಟ್ಟಿ‌ಮಾಡಲಾಗಿದೆ. ಮೊದಲು ಪಾರ್ಕಿನ ಅರಳಿ ಕಟ್ಟೆಯ ಬಳಿ ಮೂಲ ವಿಗ್ರಹ ವಿತ್ತು. ಭಕ್ತರು ಹೆಚ್ಚಾದ ನಂತರ ದೇಗುಲ ನಿರ್ಮಿಸಲಾಗಿದೆ. ಸುಮಾರು ಮೂವತ್ತು ವರ್ಷದ ಹಿಂದೆ ಬೃಹತ್ ದೇವಾಲಯ ಹಾಗೂ ಗೋಪುರ ನಿರ್ಮಾಣ ಮಾಡಲಾಯ್ತು. ಇಲ್ಲಿಗೆ ಪ್ರತಿದಿನ ನೂರಾರು ಭಕ್ತರು ಆಗಮಿಸುತ್ತಾರೆ. ಮಂಗಳವಾರ ಶುಕ್ರವಾರ ಬೇರೆ ಬೇರೆ ಜಿಲ್ಲೆಗಳಿಂದಲೂ ಭಕ್ತರು ಬರುತ್ತಾರೆ. ಇದರ ತೆರವಿಗೆ ಸ್ಥಳೀಯರು ಭಕ್ತರ ವಿರೋಧವಿದೆ.

6 / 9
ಬನಶಂಕರಿ ದೇವಸ್ಥಾನ

ಬನಶಂಕರಿ ದೇವಸ್ಥಾನ

7 / 9
ಮೈಸೂರು ಪೀಪಲ್ಸ್ ಪಾರ್ಕ್​ ದರ್ಗಾ

ಮೈಸೂರಿನ‌ ಹೃದಯಭಾಗದಲ್ಲಿರುವ ಪೀಪಲ್ಸ್ ಪಾರ್ಕ್​ನಲ್ಲಿ ಈ ದರ್ಗಾ ಇದೆ.  ಗ್ರಂಥಾಲಯದ ಹಿಂಭಾಗದಲ್ಲಿರುವ ದರ್ಗಾ ಸದ್ಯ ಗಿಡಗಂಟೆಗಳಿಂದ ಕೂಡಿದೆ. ದರ್ಗಾ
ಯಾರ ನಿರ್ವಹಣೆಯೂ ಇಲ್ಲದೆ ಪಾಳು ಬಿದ್ದಿದೆ. ಇದರ ನಿರ್ಮಾಣದ ಬಗ್ಗೆ ಮಾಹಿತಿ ಇಲ್ಲ. ಪಾರ್ಕ್​ನಲ್ಲಿದೆ‌ ಎಂಬ ಕಾರಣಕ್ಕೆ ತೆರವು ಮಾಡಲು ಪಟ್ಟಿ ಮಾಡಲಾಗಿದೆ.

ಮೈಸೂರು ಪೀಪಲ್ಸ್ ಪಾರ್ಕ್​ ದರ್ಗಾ ಮೈಸೂರಿನ‌ ಹೃದಯಭಾಗದಲ್ಲಿರುವ ಪೀಪಲ್ಸ್ ಪಾರ್ಕ್​ನಲ್ಲಿ ಈ ದರ್ಗಾ ಇದೆ. ಗ್ರಂಥಾಲಯದ ಹಿಂಭಾಗದಲ್ಲಿರುವ ದರ್ಗಾ ಸದ್ಯ ಗಿಡಗಂಟೆಗಳಿಂದ ಕೂಡಿದೆ. ದರ್ಗಾ ಯಾರ ನಿರ್ವಹಣೆಯೂ ಇಲ್ಲದೆ ಪಾಳು ಬಿದ್ದಿದೆ. ಇದರ ನಿರ್ಮಾಣದ ಬಗ್ಗೆ ಮಾಹಿತಿ ಇಲ್ಲ. ಪಾರ್ಕ್​ನಲ್ಲಿದೆ‌ ಎಂಬ ಕಾರಣಕ್ಕೆ ತೆರವು ಮಾಡಲು ಪಟ್ಟಿ ಮಾಡಲಾಗಿದೆ.

8 / 9
ರಾಮಲಿಂಗೇಶ್ವರ ದೇವಸ್ಥಾನ

ಮೈಸೂರಿನ ಚಾಮುಂಡಿಪುರಂ ದೇವಸ್ಥಾನ. ರಸ್ತೆಗೆ ಹೊಂದುಕೊಂಡಿದೆ ಅನ್ನೋ ಕಾರಣಕ್ಕೆ ಇದನ್ನು ತೆರವುಗೊಳಿಸಲು ಆದೇಶ ನೀಡಲಾಗಿದೆ. ಆದರೆ ದಶಕಗಳ ಹಿಂದೆಯೇ ಈ ದೇಗುಲ ನಿರ್ಮಾಣ ಮಾಡಲಾಗಿತ್ತು. ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಜೆಪಿ ನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯ ಜನರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಹಬ್ಬಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಈಶ್ವರ ರಾಮಲಿಂಗೇಶ್ವರನಾಗಿ ಇಲ್ಲಿ ನೆಲೆಸಿದ್ದಾನೆ ಅನ್ನೋದು ಭಕ್ತರ ನಂಬಿಕೆ. ಇದೇ ಕಾರಣಕ್ಕೆ ಈ ದೇವಸ್ಥಾನ ತೆರವಿಗೂ ವಿರೋಧ ವ್ಯಕ್ತವಾಗಿದೆ.

ರಾಮಲಿಂಗೇಶ್ವರ ದೇವಸ್ಥಾನ ಮೈಸೂರಿನ ಚಾಮುಂಡಿಪುರಂ ದೇವಸ್ಥಾನ. ರಸ್ತೆಗೆ ಹೊಂದುಕೊಂಡಿದೆ ಅನ್ನೋ ಕಾರಣಕ್ಕೆ ಇದನ್ನು ತೆರವುಗೊಳಿಸಲು ಆದೇಶ ನೀಡಲಾಗಿದೆ. ಆದರೆ ದಶಕಗಳ ಹಿಂದೆಯೇ ಈ ದೇಗುಲ ನಿರ್ಮಾಣ ಮಾಡಲಾಗಿತ್ತು. ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಜೆಪಿ ನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯ ಜನರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಹಬ್ಬಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಈಶ್ವರ ರಾಮಲಿಂಗೇಶ್ವರನಾಗಿ ಇಲ್ಲಿ ನೆಲೆಸಿದ್ದಾನೆ ಅನ್ನೋದು ಭಕ್ತರ ನಂಬಿಕೆ. ಇದೇ ಕಾರಣಕ್ಕೆ ಈ ದೇವಸ್ಥಾನ ತೆರವಿಗೂ ವಿರೋಧ ವ್ಯಕ್ತವಾಗಿದೆ.

9 / 9
ಇಮಾಮ್​ ಹಜರತ್​ ದರ್ಗಾ

ಇಮಾಮ್​ ಹಜರತ್​ ದರ್ಗಾ

Published On - 9:40 am, Tue, 14 September 21