
ಮಹೇಶ್ ಬಾಬು ಅವರು ಹೆಚ್ಚಿನ ಸಮಯವನ್ನು ಕುಟುಂಬದ ಜತೆ ಕಳೆಯೋಕೆ ಇಷ್ಟಪಡುತ್ತಾರೆ. ಸಿನಿಮಾ ಕೆಲಸಗಳಿಂದ ಬಿಡುವು ಸಿಕ್ಕಾಗ ಅವರು ಫ್ಯಾಮಿಲಿ ಜತೆ ಟೈಮ್ ಸ್ಪೆಂಡ್ ಮಾಡಲು ಆದ್ಯತೆ ನೀಡುತ್ತಾರೆ.

ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಮಗಳು ಸಿತಾರಾ, ಗೌತಮ್ ಜತೆ ಸ್ವಿಜರ್ಲ್ಯಾಂಡ್ನಲ್ಲಿದ್ದಾರೆ.

ನಮ್ರತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಸಿತಾರಾ ಹಾಗೂ ಗೌತಮ್ ಜತೆ ಅವರು ಸಮಯ ಕಳೆಯುತ್ತಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಮಹೇಶ್ ಬಾಬು ಅವರು ಈ ಫೋಟೋದಲ್ಲಿ ಕಾಣಿಸಿಕೊಂಡಿಲ್ಲ. ಫ್ಯಾನ್ಸ್ ಮಹೇಶ್ ಬಾಬು ಎಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ.

ಮಹೇಶ್ ಬಾಬು ಅವರು ಸದ್ಯ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲಸಕ್ಕಾಗಿ ಅವರು ವಿದೇಶಕ್ಕೆ ತೆರಳಿಲ್ಲ ಎನ್ನಲಾಗುತ್ತಿದೆ.