‘ಸೂರ್ಯಾಸ್ ಸ್ಯಾಟರ್ಡೆ’ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ನಾನಿ

Updated on: Aug 27, 2024 | 6:13 PM

ನ್ಯಾಚುರಲ್ ಸ್ಟಾರ್ ಎಂದೇ ಜನಪ್ರಿಯವಾಗಿರುವ ತೆಲುಗಿನ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರ ನಟನೆಯ ‘ಸರಿಪೋದಾ ಶನಿವಾರಂ’ ತಮಿಳು ಸಿನಿಮಾ ಕನ್ನಡದಲ್ಲಿ ‘ಸೂರ್ಯಾಸ್ ಸ್ಯಾಟರ್ಡೆ’ ಹೆಸರಲ್ಲಿ ಬಿಡುಗಡೆ ಆಗಲಿದೆ.

1 / 7
ನ್ಯಾಚುರಲ್ ಸ್ಟಾರ್ ಎಂದೇ ಜನಪ್ರಿಯರಾಗಿರುವ ನಟ ನಾನಿ ಬೆಂಗಳೂರಿಗೆ ಬಂದಿದ್ದಾರೆ. ನಾನಿ ನಟಿಸಿರುವ ‘ಸರಿಪೋದಾ ಶನಿವಾರಂ’ ಸಿನಿಮಾ ಬಿಡುಗಡೆ ಆಗಲಿದೆ.

ನ್ಯಾಚುರಲ್ ಸ್ಟಾರ್ ಎಂದೇ ಜನಪ್ರಿಯರಾಗಿರುವ ನಟ ನಾನಿ ಬೆಂಗಳೂರಿಗೆ ಬಂದಿದ್ದಾರೆ. ನಾನಿ ನಟಿಸಿರುವ ‘ಸರಿಪೋದಾ ಶನಿವಾರಂ’ ಸಿನಿಮಾ ಬಿಡುಗಡೆ ಆಗಲಿದೆ.

2 / 7

‘ಸರಿಪೋದಾ ಶನಿವಾರಂ’ ಸಿನಿಮಾ ತೆಲುಗು ಸಿನಿಮಾ ಕನ್ನಡದಲ್ಲಿ ‘ಸೂರ್ಯಾಸ್ ಸ್ಯಾಟರ್ಡೆ’ ಹೆಸರಿನಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಪ್ರಚಾರಕ್ಕೆ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದಾರೆ.

3 / 7

ಈ ಹಿಂದೆ ತಮ್ಮ ನಟನೆಯ ‘ದಸರಾ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳ ಪ್ರಚಾರಕ್ಕಾಗಿ ನಾನಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರು ಅವರಿಗೆ ಹೊಸದೇನೂ ಅಲ್ಲ. ಈ ಹಿಂದೆ ಕೆಲ ಬಾರಿ ಬೆಂಗಳೂರಿಗೆ ಬಂದಿದ್ದಾರೆ.

4 / 7

ನಾನಿ ಹಾಗೂ ಕಿಚ್ಚ ಸುದೀಪ್ ಈ ಹಿಂದೆ ರಾಜಮೌಳಿಯ ‘ಈಗ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಸುದೀಪ್ ಜೊತೆಗೆ ನಾನಿಗೆ ಉತ್ತಮ ಗೆಳೆತನವಿದೆ. ಇತ್ತೀಚೆಗಷ್ಟೆ ‘ಈಗ 2’ ಬಗ್ಗೆ ನಾನಿ ಮಾತನಾಡಿದ್ದಾರೆ.

5 / 7

ನಾನಿ ನಟಿಸಿರುವ ‘ಸರಿಪೋದಾ ಶನಿವಾರಂ’ (ಕನ್ನಡದಲ್ಲಿ ಸೂರ್ಯಾಸ್ ಸ್ಯಾಟರ್ಡೆ) ಭಿನ್ನ ಕತೆ ಹೊಂದಿರುವ ಸಿನಿಮಾ. ಶನಿವಾರ ಮಾತ್ರವೇ ಅನ್ಯಾಯದ ವಿರುದ್ಧ ಹೋರಾಡುವ ನಾಯಕನ ಕತೆ ಇದು.

6 / 7

ಸಿನಿಮಾವನ್ನು ವಿವೇಕ್ ಆತ್ರೇಯ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಪ್ರಿಯಾಂಕಾ ಮೋಹನ್ ನಾಯಕಿ. ತಮಿಳಿನ ಎಸ್​ಜೆ ಸೂರ್ಯ ವಿಲನ್. ಸಿನಿಮಾ ಆಗಸ್ಟ್ 29ಕ್ಕೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದೆ.

7 / 7

ನ್ಯಾಚುರಲ್ ಸ್ಟಾರ್ ನಾನಿ ನಟನೆಯ ‘ದಸರಾ’ ಸಿನಿಮಾದಲ್ಲಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದನ್ನು ಸಹ ಇಲ್ಲಿ ಸ್ಮರಿಸಬಹುದು.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us