Updated on: Jun 29, 2023 | 8:20 AM
ನತಾಶಾ ಸ್ಟಾಂಕೋವಿಚ್ ಹಾಗೂ ಹಾರ್ದಿಕ್ ಪಾಂಡ್ಯ ಸುಖ ಸಂಸಾರ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ನತಾಶಾ ಅವರು ಹಲವು ರೀತಿಯ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋ ವೈರಲ್ ಆಗಿದೆ.
ಇತ್ತೀಚೆಗೆ, ನತಾಶಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾರ್ದಿಕ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಹಾರ್ದಿಕ್-ನತಾಶಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಒಂದು ವರ್ಗದ ಜನರು ಇದನ್ನು ಅಶ್ಲೀಲ ಎಂದು ಪರಿಗಣಿಸಿದ್ದಾರೆ.
ನತಾಶಾ ಪಾಂಡ್ಯಾ ಒಬ್ಬರಿಗೊಬ್ಬರು ಕಿಸ್ ಮಾಡುತ್ತಿರುವ ರೀತಿಯಲ್ಲಿ ಫೋಟೋಗಳಿಗೆ. ಫ್ರೆಂಚ್‌ನಲ್ಲಿ ‘Je t'aime’ ಎಂದು ಬರೆದುಕೊಂಡಿದ್ದಾರೆ. ಇದರ ಅರ್ಥ ‘ಐ ಲವ್ ಯೂ’ ಎಂದು.
ಕೆಲವರು ಈ ಫೋಟೋಗೆ ನೆಗೆಟಿವ್ ಕಮೆಂಟ್ ಮಾಡಿದ್ದಾರೆ. ‘ಇದನ್ನು ಮನೆಯಲ್ಲಿ ಮಾಡಿ, ಊರಿಗೆಲ್ಲ ಏಕೆ ತೋರಿಸುತ್ತೀರಿ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
‘ಭಾರತವನ್ನು ಪ್ರತಿನಿಧಿಸುವ ಆಟಗಾರನಿಗೆ ಇಂತಹ ವರ್ತನೆ ಸೂಕ್ತವಲ್ಲ. ಇದು ಭಾರತೀಯ ಸಂಸ್ಕೃತಿಯಲ್ಲ’ ಎಂದು ಹಾರ್ದಿಕ್ಗೆ ಕೆಲವರು ಬುದ್ಧಿ ಹೇಳಿದ್ದಾರೆ.
ಹಾರ್ದಿಕ್-ನತಾಶಾ 2020ರಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡರು. ಹಾರ್ದಿಕ್-ನತಾಶಾಗೆ ಅಗಸ್ತ್ಯ ಹೆಸರಿನ ಗಂಡು ಮಗು ಇದ್ದಾನೆ. ಫೆಬ್ರವರಿ 14ರಂದು ಅವರ ಮದುವೆ ನಡೆದಿದೆ.
ಬಾಲಿವುಡ್ನಲ್ಲಿ ನತಾಶಾ ಅವರು ಗುರುತಿಸಿಕೊಂಡಿದ್ದಾರೆ. ‘ಬಿಗ್ ಬಾಸ್ 8’ರಲ್ಲಿ ಸ್ಪರ್ಧಿ ಆಗಿದ್ದರು. ಕೆಲವು ಹಿಂದಿ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.