
ಪಾರ್ಟಡ್ ಬನ್: ಈ ಕೂದಲಿನ ವಿನ್ಯಾಸವು ಸೀರೆಗೆ ಹೇಳಿ ಮಾಡಿಸಿದ್ದಾಗಿದೆ ಇದರಲ್ಲಿ ಆಕರ್ಷಕವಾಗಿ ಕಾಣುವುದರ ಜೊತೆಗೆ ಹಬ್ಬಕ್ಕೆ ಹೊಸ ಲುಕ್ ತಂದು ಕೊಡುತ್ತದೆ. ಈ ಕೇಶ ವಿನ್ಯಾಸವನ್ನು ಸುಲಭದಲ್ಲಿ ಮಾಡಬಹುದಾಗಿದ್ದು ಕೂದಲನ್ನು ತುರುಬು ರೀತಿಯಲ್ಲಿ ಸುತ್ತಿ ಅದಕ್ಕೆ ಕ್ಲಿಪ್ ಹಾಕಿ, ತುರುಬಿಗೆ ಹೂವನ್ನು ಸುತ್ತಿದರಾಯಿತು.

ಹೂಪ್ಡ್ ಲೋ ಬನ್ ಹೇರ್ ಸ್ಟೈಲ್: ಈ ಹೇರ್‌ಸ್ಟೈಲ್ ಸಾಂಪ್ರದಾಯಿಕ ತುರುಬಿಗೆ ಸವಾಲು ನೀಡುವ ಸುಲಭವಾಗಿ ಮಾಡಬಹುದಾದ ಈ ಕೇಶ ವಿನ್ಯಾಸವಾಗಿದೆ. ಈ ಹೂಪ್ಡ್ ಲೋ ಬನ್ ಹೇರ್‌ಸ್ಟೈಲ್ ಬಹಳ ಸಮಯದವರೆಗೆ ತುಂಬಾ ನೀಟಾಗಿ ಇರುವ ಕಾರಣ ಹಬ್ಬಕ್ಕೆ ಹೇಳಿ ಮಾಡಿಸಿದ ಕೇಶವಿನ್ಯಾಸ ಇದು ಎನ್ನಬಹುದು.

ಕ್ರೌನ್ ಬ್ರೈಡ್ ಬನ್ : ನೋಡುವುದಕ್ಕೆ ಆಕರ್ಷಕವಾಗಿ ಕಾಣುವ ಈ ಕೇಶವಿನ್ಯಾಸವನ್ನು ಮೊದಲಿಗೆ ಕೂದಲನ್ನು ಬಾಚಿ, ಹೈಪೋನಿ ಕಟ್ಟಿಕೊಳ್ಳಬೇಕು. ಫೋನಿಯಲ್ಲಿ ಕೂದಲನ್ನು ಮೂರು ಸಮ ಭಾಗಗಾಗಿ ವಿಂಗಡಿಸಿ, ಜಡೆ ಹೆಣೆದುಕೊಂಡು ಆ ಜಡೆಯನ್ನು ಹಣೆಗೆ ಒಂದು ಸುತ್ತು ಸುತ್ತಿಕೊಳ್ಳಬೇಕು ಆ ಬಳಿಕ ಹೈಪೋನಿ ಕಟ್ಟಿಕೊಂಡಲ್ಲಿ ಹೇರ್‌ಪಿನ್ ಸಹಾಯದಿಂದ ಪಿನ್ ಮಾಡಿಕೊಂಡರೆ ಸಾಂಪ್ರದಾಯಿಕ ನೋಟವನ್ನು ನಿಮ್ಮದಾಗಿಸಿಕೊಳ್ಳಬಹುದು.

ಮೆಸ್ಸಿ ಸೈಡ್ ಬ್ರೈಡ್ : ಜಡೆರೂಪದಲ್ಲಿರುವ ಈ ಕೇಶವಿನ್ಯಾಸವು ಸಾಂಪ್ರದಾಯಿಕ ಲುಕ್ ನೀಡುತ್ತದೆ ಕೂದಲನ್ನು ನೀವು ಮೂರು ಕಾಲಿನ ಜಡೆ ಅಥವಾ ನಾಲ್ಕು ಕಾಲಿನ ಜಡೆಯನ್ನು ಸ್ವಲ್ಪ ಸಡಿಲವಾಗಿ ಹೆಣೆದುಕೊಳ್ಳಬೇಕು. ಇದಕ್ಕೆ ಬೇಕಾದಲ್ಲಿ ಗೋಲ್ಡನ್ ಕಲರ್ ದಾರವನ್ನು ಜಡೆ ಹೆಣೆಯುವಾಗ ಬಳಸಿಕೊಳ್ಳಬಹುದು. ಮುಂಗುರುಳನ್ನು ಕರ್ಲಿ ಮಾಡಿಕೊಂಡರೆ ಸುಂದರವಾಗಿ ಕಾಣಿಸಿಕೊಳ್ಳುವಿರಿ.

ಹಾಫ್ ಟ್ವಿಸ್ಟೆಡ್ ಮೆಸ್ಸಿ ನಾಟ್ ಹೇರ್ ಸ್ಟೈಲ್ : ಈ ವಿನ್ಯಾಸವನ್ನು ಮಾಡುವುದು ಸುಲಭದಾಯಕವಾಗಿ ನಿಮ್ಮ ನೋಟವನ್ನು ಬದಲಾಯಿಸುತ್ತದೆ. ಕೂದಲನ್ನು ಅರ್ಧ ಗಂಟು ಹಾಕಿ ಅದನ್ನು ಒಂದು ಸುತ್ತು ಹಾಕಿ ಪಿನ್ ಹಾಕಿದರೆ ಹಾಫ್ ಟ್ವಿಸ್ಟೆಡ್ ಮೆಸ್ಸಿ ನಾಟ್ ಆದಂತೆ ಸರಿ. ಕೆಲವು ನಿಮಿಷಗಳಲ್ಲಿ ಈ ಕೇಶವಿನ್ಯಾಸವನ್ನು ಮಾಡಿ ಆಕರ್ಷಕವಾಗಿ ಕಂಗೊಳಿಸಬಹುದು
Published On - 4:45 pm, Fri, 27 September 24