ಒಂದೇ ಧಾರಾವಾಹಿಯಲ್ಲಿ ನಟಿಸಿದ ಈ ನಟಿಯರು ಈಗ ಒಟ್ಟಿಗೆ ಪ್ರೆಗ್ನೆಂಟ್; ಸುಂದರ ಫೋಟೋಶೂಟ್ ವೈರಲ್

|

Updated on: Sep 10, 2024 | 2:38 PM

ಸ್ಯಾಂಡಲ್​ವುಡ್​ನಲ್ಲಿ ಈಗಾಗಲೇ ಮಿಲನಾ ನಾಗರಾಜ್, ಪ್ರಣಿತಾ ಸುಭಾಷ್ ಮಗುವಿಗೆ ಜನ್ಮ ನೀಡಿದ್ದಾರೆ. ಈಗ ನೇಹಾ ಗೌಡ ಹಾಗೂ ಕವಿತಾ ಗೌಡ ಕೂಡ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನೇಹಾ ಗೌಡ ಹಾಗೂ ಕವಿತಾ ಗೌಡ ಅವರು ಒಟ್ಟಾಗಿ ನಟಿಸಿದ್ದರು.

1 / 5
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನೇಹಾ ಗೌಡ ಹಾಗೂ ಕವಿತಾ ಗೌಡ ಅವರು ಒಟ್ಟಾಗಿ ನಟಿಸಿದ್ದರು. ಈ ಧಾರಾವಾಹಿ ಗಮನ ಸೆಳೆದಿತ್ತು. ಈಗ ಇಬ್ಬರೂ ಪ್ರೆಗ್ನೆಂಟ್ ಆಗಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

2 / 5
ಹಳೆಯ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಈ ಮೊದಲು ಈಟಿವಿಯಲ್ಲಿ ಪ್ರಸಾರ ಕಂಡಿತ್ತು. ಈ ಧಾರಾವಾಹಿಯಲ್ಲಿ ಕವಿತಾ ಗೌಡ ಪತಿ ಚಂದನ್ ಕುಮಾರ್ ಕೂಡ ನಟಿಸಿದ್ದರು. ಸಮಯ ಕಳೆದಂತೆ ಪಾತ್ರವರ್ಗ ಬದಲಾವಣೆ ಆಗುತ್ತಾ ಬಂತು. ನಿಜ ಜೀವನದಲ್ಲಿ ನೇಹಾ ಹಾಗೂ ಕವಿತಾ ಮಧ್ಯೆ ಒಳ್ಳೆಯ ಗೆಳೆತನ ಇದೆ.

3 / 5
ನೇಹಾ ಗೌಡ ಹಾಗೂ ಕವಿತಾ ಗೌಡ ಒಟ್ಟಾಗಿ ಪೋಸ್ ಕೊಟ್ಟಿದ್ದಾರೆ. ಇಬ್ಬರೂ ಸೀರೆ ಧರಿಸಿ ಗಮನ ಸೆಳೆದಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ. ಈ ಫೋಟೋ 30 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿದೆ.

4 / 5
ಅಚ್ಚರಿಯ ವಿಚಾರ ಎಂದರೆ ನೇಹಾ ಹಾಗೂ ಕವಿತಾ ಇಬ್ಬರ ಪತಿಯರ ಹೆಸರೂ ಚಂದನ್ ಎಂದೇ ಅನ್ನೋದು ವಿಶೇಷ. ಕವಿತಾ ಗೌಡ ಚಂದನ್ ಕುಮಾರ್ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದಿದೆ.

5 / 5
ಇತ್ತ, ನೇಹಾ ಗೌಡ ಅವರ ಪತಿ ಚಂದನ್ ಕಿರುತೆರೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ನೇಹಾ ಗೌಡ ಜೊತೆ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ.

Published On - 2:13 pm, Tue, 10 September 24