ನಟಿ ನೇಹಾ ಶೆಟ್ಟಿ ಅವರು ಕನ್ನಡದವರು. ‘ಮುಂಗಾರು ಮಳೆ 2’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಚಿತ್ರಗಳ ಆಯ್ಕೆಯಲ್ಲಿ ಅವರು ಸಖತ್ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ ನೇಹಾ.
ನೇಹಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗೋಸ್ಕರ ಅವರು ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಪೋಸ್ಟ್ ಮಾಡಿರೋ ಹೊಸ ಫೋಟೋಗಳು ಸಖತ್ ವೈರಲ್ ಆಗಿದೆ.
ನೇಹಾಗೆ ಇನ್ಸ್ಟಾಗ್ರಾಮ್ನಲ್ಲಿ 10 ಲಕ್ಷ ಹಿಂಬಾಲಕರಿದ್ದಾರೆ. ಫ್ಯಾನ್ಸ್ಗೋಸ್ಕರ ಅವರು ಆಗಾಗ ಫೋಟೋ ಶೇರ್ ಮಾಡಿಕೊಳ್ಳುತ್ತಾರೆ. ಈಗ ಹಂಚಿಕೊಂಡಿರುವ ಹೊಸ ಫೋಟೋಗೆ ಲಕ್ಷಾಂತರ ಮಂದಿ ಲೈಕ್ಸ್ ಒತ್ತಿದ್ದಾರೆ. ಫ್ಯಾನ್ಸ್ಗೆ ಫೋಟೋ ಇಷ್ಟವಾಗಿದೆ.
ನೇಹಾ ಶೆಟ್ಟಿ ಅವರು ‘ಮುಂಗಾರು ಮಳೆ 2’ ಚಿತ್ರದಿಂದ ಸಖತ್ ಫೇಮಸ್ ಆದರು. ಈ ಸಿನಿಮಾ ರಿಲೀಸ್ ಆಗಿದ್ದು 2016ರಲ್ಲಿ. ಗಣೇಶ್ ನಟನೆಯ ಈ ಚಿತ್ರ ಮೆಚ್ಚುಗೆ ಪಡೆಯಿತು. ನೇಹಾ ಶೆಟ್ಟಿ ಅವರ ಜನಪ್ರಿಯತೆ ಕೂಡ ಹೆಚ್ಚಿತು.
ಇಷ್ಟೆಲ್ಲ ಫೇಮ್ ಸಿಕ್ಕ ಬಳಿಕವೂ ನೇಹಾ ಶೆಟ್ಟಿ ಹೊಸ ಸಿನಿಮಾ ಒಪ್ಪಿಕೊಳ್ಳಲು ಅವಸರ ತೋರಲಿಲ್ಲ. 2018ರಲ್ಲಿ ತೆಲುಗಿನ ‘ಮೆಹಬೂಬಾ’ ಸಿನಿಮಾ ರಿಲೀಸ್ ಆಯಿತು. ಆ ಬಳಿಕ ಅವರು ಟಾಲಿವುಡ್ನಲ್ಲಿ ಬ್ಯುಸಿ ಆದರು.
‘ಗಲ್ಲಿ ರೌಡಿ’, ‘ಮೋಸ್ಟ್ ಎಲಿಜಬೆಲ್ ಬ್ಯಾಚುಲರ್’ ಮೊದಲಾದ ಸಿನಿಮಾಗಳಲ್ಲಿ ನೇಹಾ ಶೆಟ್ಟಿ ನಟಿಸಿದ್ದಾರೆ. ಸದ್ಯ ಅವರು ಟಾಲಿವುಡ್ ಅಂಗಳದಲ್ಲಿ ಬ್ಯುಸಿ ಆಗಿದ್ದಾರೆ. ‘ಬೆದುರುಲಂಕಾ 2012’ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಈ ಸಿನಿಮಾ ಆಗಸ್ಟ್ 25ರಂದು ರಿಲೀಸ್ ಆಗಿದೆ.
ನೇಹಾ ಶೆಟ್ಟಿ ಬಳಿ ಒಂದೆರಡು ಸಿನಿಮಾಗಳಿವೆ. ಅವರು ಹೊಸ ಹೊಸ ಸಿನಿಮಾ ಒಪ್ಪಿಕೊಂಡು ನಟಿಸಲಿ ಅನ್ನೋದು ಫ್ಯಾನ್ಸ್ ಕೋರಿಕೆ. ಆದರೆ, ಉಳಿದ ನಟಿಯರಿಗೆ ಹೋಲಿಸಿದರೆ ಅವರು ಮಾಡುತ್ತಿರುವ ಸಿನಿಮಾಗಳ ಸಂಖ್ಯೆ ಕಡಿಮೆ.