Meraki S7: 35 ಕಿ.ಮೀ ಮೈಲೇಜ್ ನೀಡುವ ಸೈಕಲ್..!

| Updated By: ಝಾಹಿರ್ ಯೂಸುಫ್

Updated on: Feb 20, 2022 | 10:09 PM

Ninety One Meraki S7: Meraki S7 ಎಲೆಕ್ಟ್ರಿಕ್ ಸೈಕಲ್​ 7 ಸ್ಪೀಡ್ ಗೇರ್‌ಸೆಟ್‌ನೊಂದಿಗೆ ಬರುತ್ತದೆ. 5 ಮೋಡ್ ಪೆಡಲ್ ಅಸಿಸ್ಟೆಂಟ್ ನಂತಹ ವೈಶಿಷ್ಟ್ಯಗಳು ಇದರಲ್ಲಿದೆ.

1 / 5
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಜನಪ್ರಿಯತೆ ದಿನದಿಂದ ದಿನಕ್ಕೆ ವೇಗವಾಗಿ ವಿಸ್ತರಿಸುತ್ತಿದೆ. ಈ ವಿಭಾಗದಲ್ಲಿ ಇ-ಸೈಕಲ್​ಗಳು ಕೂಡ ಸೇರ್ಪಡೆಯಾಗುತ್ತಿದೆ. ಇದೀಗ ನೈಂಟಿ ಒನ್ ಸೈಕಲ್ ಕಂಪೆನಿಯು ತನ್ನ ನೂತನ ಎಲೆಕ್ಟ್ರಿಕ್ ಸೈಕಲ್ ಮೆರಾಕಿ S7 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

2 / 5
Meraki S7 ಎಲೆಕ್ಟ್ರಿಕ್ ಸೈಕಲ್​ 7 ಸ್ಪೀಡ್ ಗೇರ್‌ಸೆಟ್‌ನೊಂದಿಗೆ ಬರುತ್ತದೆ. 5 ಮೋಡ್ ಪೆಡಲ್ ಅಸಿಸ್ಟೆಂಟ್ ನಂತಹ ವೈಶಿಷ್ಟ್ಯಗಳು ಇದರಲ್ಲಿದೆ. ಈ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಬೈಸಿಕಲ್ ತನ್ನದೇ ಆದ ಸ್ಮಾರ್ಟ್ ಎಲ್​ಸಿಡಿ ಡಿಸ್​ಪ್ಲೇಯನ್ನು ಕೂಡ ಹೊಂದಿದೆ.

3 / 5
Meraki S7 ನ ಇತರೆ ವೈಶಿಷ್ಟ್ಯಗಳನ್ನು ನೋಡುವುದಾದರೆ, ಇದು 160 mm ಡಿಸ್ಕ್ ಬ್ರೇಕ್ ಸಿಸ್ಟಮ್ ಹೊಂದಿದೆ. ಹಾಗೆಯೇ ಇದರಲ್ಲಿ ನೈಲಾನ್ ಟೈರ್‌ಗಳನ್ನು ನೀಡಲಾಗಿದೆ.

4 / 5
 ಮೆರಾಕಿ ಎಸ್ 7 ಸೈಕಲ್ ಪ್ರತಿ ದಿನ 30-40 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸುವವರಿಗೆ ಉತ್ತಮ ಆಯ್ಕೆಯಾಗಿದೆ ಎಂದು ಕಂಪನಿಯ ಸಿಇಒ ಮತ್ತು ಸಂಸ್ಥಾಪಕ ಸಚಿನ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಈ ಸೈಕಲ್ ಅನ್ನು ಇಂತಹ ಪ್ರಯಾಣಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

5 / 5
ಇನ್ನು ಈ ಸೈಕಲ್​ನ್ನು ಸಂಪೂರ್ಣ ಚಾರ್ಜ್​ ಮಾಡಿದರೆ ಪೆಡಲ್ ನೆರವಿನಿಂದ 35 ಕಿ.ಮೀ ವರೆಗೆ ಚಲಿಸಬಹುದು. ಅಲ್ಲದೆ ಪೆಡಲ್ ನೆರವಿಲ್ಲದೆ 18 ಕಿ.ಮೀ ವರೆಗೆ ಕ್ರಮಿಸಬಹುದು. ಅಂದಹಾಗೆ ಮೆರಾಕಿ ಎಸ್ 7 ಸೈಕಲ್ ಬೆಲೆ 34,999 ರೂ.