ಬಾಲಿವುಡ್ ಬೆಡಗಿ ನೋರಾ ಫತೇಹಿ ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಕೆನಡಾ ಮೂಲದ ನೋರಾ ಭಾರತೀಯ ಚಿತ್ರರಂಗದಲ್ಲಿ ನಟಿ, ಡಾನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಫೋಟೋಗಳ ಮೂಲಕ ಪಡ್ಡೆಗಳ ಮನಗೆಲ್ಲುತ್ತಿದ್ದ ನೋರಾರ ಇನ್ಸ್ಟಾಗ್ರಾಂ ಖಾತೆ ಇತ್ತೀಚೆಗೆ ನಾಪತ್ತೆಯಾಗಿತ್ತು.
ಇದಕ್ಕೆ ಕಾರಣ ತಿಳಿಸಿದ್ದ ನೋರಾ, ಯಾರೋ ತಮ್ಮ ಖಾತೆಯನ್ನು ಹ್ಯಾಕ್ ಮಾಡಲು ಯತ್ನಿಸಿದ್ದರು ಎಂದು ರಿವೀಲ್ ಮಾಡಿದ್ದರು.
ಇದೀಗ ನಟಿಯ ಇನ್ಸ್ಟಾಗ್ರಾಂ ಖಾತೆ ಸರಿಯಾಗಿದ್ದು, ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.
ಬಹುಭಾಷೆಗಳಲ್ಲಿ ಬಣ್ಣಹಚ್ಚುತ್ತಿರುವ ನೋರಾಗೆ ಈ ವರ್ಷ ಮತ್ತಷ್ಟು ಗೆಲುವು ಸಿಗಲಿ ಎಂಬುದು ಫ್ಯಾನ್ಸ್ ಹಾರೈಕೆ.