S1 ಸ್ಕೂಟರ್ನಲ್ಲಿ 2.98 kWh ಸಾಮರ್ಥ್ಯದ ಲಿಥಿಯಂ ಐಒನ್ ಬ್ಯಾಟರಿ ಹಾಗೂ S1 ಪ್ರೋನಲ್ಲಿ 3.97 kWh ಸಾಮರ್ಥ್ಯದ ಲಿಥಿಯಂ ಐಒನ್ ಬ್ಯಾಟರಿ ನೀಡಲಾಗಿದೆ. ಈ ಬ್ಯಾಟರಿಯನ್ನು ಓಲಾ ಫಾಸ್ಟ್ ಚಾರ್ಜರ್ ಮೂಲಕ ಕೇವಲ 18 ನಿಮಿಷ ಚಾರ್ಜ್ ಮಾಡಿದ್ರೆ 75 ಕಿ.ಮೀ ಓಡಿಸಬಹುದು.
ಈ ಸ್ಕೂಟರ್ 0 ಯಿಂದ 40 ಕಿ.ಮೀ ವೇಗವನ್ನು ಪಡೆಯಲು ತೆಗೆದುಕೊಳ್ಳುವ ಸಮಯ 3.6 ಸೆಕೆಂಡ್. ಹಾಗೆಯೇ 0 ದಿಂದ 60 ಕಿ.ಮೀ ವೇಗವನ್ನು 7 ಸೆಕೆಂಡ್ಗಳಲ್ಲಿ ಪಡೆಯಬಹುದಾಗಿದೆ. ಇನ್ನು ಎಸ್1 ಪ್ರೊನಲ್ಲಿ ಇದೇ ವೇಗವನ್ನು ಕೇವಲ 5 ಸೆಕೆಂಡ್ನಲ್ಲಿ ಪಡೆಯಬಹುದು.
ಇನ್ನು ದೆಹಲಿಯಲ್ಲಿ ಓಲಾ S1 85,099 ರೂ. ಹಾಗೆಯೇ ಓಲಾ S1 ಪ್ರೊ ಬೆಲೆ 110,149 ರೂ. ಅತ್ತ ಮಹಾರಾಷ್ಟ್ರದಲ್ಲೂ ಓಲಾ ಸ್ಕೂಟರ್ ಮೇಲೆ ಸಬ್ಸಿಡಿ ಇದ್ದು, ಅಲ್ಲಿ 94,999 ರೂ. ಹಾಗೂ 124,999 ರೂ.ನಲ್ಲಿ ಓಲಾ ಸ್ಕೂಟರ್ ಲಭ್ಯವಿದೆ.
Ola Electric scooter S1: ಭಾರತೀಯ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಓಲಾ ಕಂಪೆನಿಯ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಸಂಚಲನ ಸೃಷ್ಟಿಸಿದೆ. ಆಗಸ್ಟ್ 15 ರಂದು ಬಿಡುಗಡೆಯಾಗಿರುವ ಓಲಾ ಎಸ್1 ಹಾಗೂ ಎಸ್1 ಪ್ರೊ ಸ್ಕೂಟರ್ಗಳ ಖರೀದಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಓಲಾ ಇವಿಗಳು
ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ಎಂಬ 3 ರೈಡಿಂಗ್ ಮೋಡ್‌ಗಳೊಂದಿಗೆ ಹೊಂದಿರಲಿದೆ. ಆದರೆ ಎಸ್ 1 ನಾರ್ಮಲ್ ಹಾಗೂ ಸ್ಪೋರ್ಟ್ ಮೋಡ್‌ಗಳನ್ನು ಮಾತ್ರ ಹೊಂದಿದೆ.