AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷಕ್ಕೆ ಬರುತ್ತಿದೆ ಒನ್​ಪ್ಲಸ್ 12 5G: ರೋಚಕತೆ ಸೃಷ್ಟಿಸಿದೆ ಹೊಸ ಸ್ಮಾರ್ಟ್​ಫೋನ್

OnePlus 12 5G Launch Date in India: ಒನ್​ಪ್ಲಸ್ 12 5G ಭಾರತದಲ್ಲಿ ಹೊಸ ವರ್ಷಕ್ಕೆ ಅನಾವರಣಗೊಳ್ಳಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಸ್ಮಾರ್ಟ್​ಫೋನ್ ಕ್ವಾಲ್ಕಾಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ 8 Gen 3 SoC ಅನ್ನು ಹೊಂದುವ ನಿರೀಕ್ಷೆಯಿದೆ. RAM ಸಾಮರ್ಥ್ಯದಲ್ಲಿ ಹೆಚ್ಚಳವಾಗಬಹುದು. ಒನ್​ಪ್ಲಸ್ 11 ಫೋನ್​ನಲ್ಲಿ 16GB ನೀಡಲಾಗಿತ್ತು.

Vinay Bhat
|

Updated on: Nov 11, 2023 | 3:10 PM

Share
ಹೊಸ ವರ್ಷಕ್ಕೆ ಬರುತ್ತಿದೆ ಒನ್​ಪ್ಲಸ್ 12 5G: ರೋಚಕತೆ ಸೃಷ್ಟಿಸಿದೆ ಹೊಸ ಸ್ಮಾರ್ಟ್​ಫೋನ್

ಒನ್​ಪ್ಲಸ್ ಕಂಪನಿಯ ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗುತ್ತಿದೆ ಎಂದಾದರೆ ಅದರಲ್ಲಿ ಏನಾದರು ಒಂದು ವಿಶೇಷತೆ ಇದ್ದೇ ಇರುತ್ತದೆ. ಅಪರೂಪಕ್ಕೆ ಆಕರ್ಷಕ ಮೊಬೈಲ್ ಅನ್ನು ಪರಿಚಯಿಸುವ ಒನ್​ಪ್ಲಸ್ ಇದೀಗ ತನ್ನ ಬಲಿಷ್ಠವಾದ ಒನ್​ಪ್ಲಸ್ 12 5ಜಿ (OnePlus 12 5G) ಸ್ಮಾರ್ಟ್​ಫೋನ್ ತಯಾರಿಯಲ್ಲಿದೆ.

1 / 7
ಒನ್​ಪ್ಲಸ್ 12 5G ಭಾರತದಲ್ಲಿ ಹೊಸ ವರ್ಷಕ್ಕೆ ಅನಾವರಣಗೊಳ್ಳಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಸ್ಮಾರ್ಟ್​ಫೋನ್ ಒನ್​ಪ್ಲಸ್ 11 5G ಯ ಉತ್ತರಾಧಿಕಾರಿಯಾಗಿದೆ. ಒನ್​ಪ್ಲಸ್ 11 5G ಭಾರತದಲ್ಲಿ 56,999 ರೂ. ಗಳಿಂದ ಪ್ರಾರಂಭವಾಗುತ್ತದೆ. ಆದರೆ, ಒನ್​ಪ್ಲಸ್ 12 5G ಎಷ್ಟು ಬೆಲೆ ಹೊಂದಿರಬಹುದು ಎಂಬುದು ತಿಳಿದುಬಂದಿಲ್ಲ. ಕೆಲ ಫೀಚರ್ಸ್ ಕುರಿತ ಮಾಹಿತಿ ಮಾತ್ರ ಸೋರಿಕೆ ಆಗಿದೆ.

2 / 7
ಮುಂಬರುವ ಒನ್​ಪ್ಲಸ್ 12 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಇದು ಕ್ವಾಲ್ಕಾಮ್‌ನ ಮುಂದಿನ-ಜನ್ ಸ್ನಾಪ್‌ಡ್ರಾಗನ್ 8 Gen 3 SoC ಅನ್ನು ಹೊಂದುವ ನಿರೀಕ್ಷೆಯಿದೆ. RAM ಸಾಮರ್ಥ್ಯದಲ್ಲಿ ಹೆಚ್ಚಳವಾಗಬಹುದು. ಒನ್​ಪ್ಲಸ್ 11 ಫೋನ್​ನಲ್ಲಿ 16GB ನೀಡಲಾಗಿತ್ತು.

3 / 7
ಈ ಹೊಸ ಫೋನ್ 6.70-ಇಂಚಿನ QHD+ AMOLED ಡಿಸ್ ಪ್ಲೇಯನ್ನು ಹೊಂದಿರುವ ಸಾಧ್ಯತೆ ಇದೆ. ದೊಡ್ಡದಾದ 5,400mAh ಬ್ಯಾಟರಿಯೊಂದಿಗೆ ಅನಾವರಣಗೊಳ್ಳಲಿದ್ದು, ವೇಗದ 100W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಇರಲಿದೆ.

4 / 7
ಇನ್ನು ಚಾರ್ಜಿಂಗ್ ಅನ್ನು ವೇಗಗೊಳಿಸಲು, ಒನ್​ಪ್ಲಸ್ ಎರಡು ಬ್ಯಾಟರಿಗಳನ್ನು ಅಳವಡಿಸುವ ಸಾಧ್ಯತೆ ಇದೆ. ಒಂದು 5,400mAh ಆಗಿದ್ದರೆ ಮತ್ತೊಂದು 2,700mAh ಸಾಮರ್ಥ್ಯದೊಂದಿಗೆ ಇರಬಹುದು. ಕಂಪನಿಯು ಫೋನ್‌ನೊಂದಿಗೆ ಬಾಕ್ಸ್‌ನಲ್ಲಿ ಚಾರ್ಜರ್ ಅನ್ನು ನೀಡುತ್ತದೆ.

5 / 7
ಒನ್​ಪ್ಲಸ್ 12 ನ ಕ್ಯಾಮೆರಾ ಹಾರ್ಡ್‌ವೇರ್‌ ಅಪ್‌ಗ್ರೇಡ್ ಆಗುವ ನಿರೀಕ್ಷೆಯೂ ಇದೆ. ಹಿಂಬದಿ 50-ಮೆಗಾಪಿಕ್ಸೆಲ್ ವೈಡ್-ಆಂಗಲ್ ಪ್ರೈಮರಿ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಪೆರಿಸ್ಕೋಪ್ ಲೆನ್ಸ್‌ನೊಂದಿಗೆ ಸಜ್ಜುಗೊಂಡ 64-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ.

6 / 7
ಇದರಲ್ಲಿರುವ ಪ್ರಾಥಮಿಕ ಕ್ಯಾಮರಾ ಹೊಸ Sony IMX9xx ಸಂವೇದಕವನ್ನು ಹೊಂದಿರಬಹುದು, ಆದರೆ ಪೆರಿಸ್ಕೋಪ್ ಲೆನ್ಸ್ 3x ಆಪ್ಟಿಕಲ್ ಜೂಮ್ ಅನ್ನು ನೀಡುತ್ತದೆ. ಒನ್​ಪ್ಲಸ್ ಕ್ಯಾಮೆರಾ ಟ್ಯೂನಿಂಗ್‌ಗಾಗಿ Hasselblad ಜೊತೆ ತನ್ನ ಸಹಯೋಗವನ್ನು ಮುಂದುವರಿಸುವ ನಿರೀಕ್ಷೆಯಿದೆ. ಈ ಫೋನಿನ ಮುಂಭಾಗ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಲಿದೆ ಎಂಬ ಮಾತಿದೆ.

7 / 7
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್

ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್

‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ

ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!

ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ

ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ

ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ

ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?

ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?

ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ