ಹೊಸ ವರ್ಷಕ್ಕೆ ಬರುತ್ತಿದೆ ಒನ್ಪ್ಲಸ್ 12 5G: ರೋಚಕತೆ ಸೃಷ್ಟಿಸಿದೆ ಹೊಸ ಸ್ಮಾರ್ಟ್‌ಫೋನ್
OnePlus 12 5G Launch Date in India: ಒನ್ಪ್ಲಸ್ 12 5G ಭಾರತದಲ್ಲಿ ಹೊಸ ವರ್ಷಕ್ಕೆ ಅನಾವರಣಗೊಳ್ಳಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ 8 Gen 3 SoC ಅನ್ನು ಹೊಂದುವ ನಿರೀಕ್ಷೆಯಿದೆ. RAM ಸಾಮರ್ಥ್ಯದಲ್ಲಿ ಹೆಚ್ಚಳವಾಗಬಹುದು. ಒನ್ಪ್ಲಸ್ 11 ಫೋನ್ನಲ್ಲಿ 16GB ನೀಡಲಾಗಿತ್ತು.
Updated on: Nov 11, 2023 | 3:10 PM

ಒನ್ಪ್ಲಸ್ ಕಂಪನಿಯ ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತಿದೆ ಎಂದಾದರೆ ಅದರಲ್ಲಿ ಏನಾದರು ಒಂದು ವಿಶೇಷತೆ ಇದ್ದೇ ಇರುತ್ತದೆ. ಅಪರೂಪಕ್ಕೆ ಆಕರ್ಷಕ ಮೊಬೈಲ್ ಅನ್ನು ಪರಿಚಯಿಸುವ ಒನ್ಪ್ಲಸ್ ಇದೀಗ ತನ್ನ ಬಲಿಷ್ಠವಾದ ಒನ್ಪ್ಲಸ್ 12 5ಜಿ (OnePlus 12 5G) ಸ್ಮಾರ್ಟ್‌ಫೋನ್ ತಯಾರಿಯಲ್ಲಿದೆ.

ಒನ್ಪ್ಲಸ್ 12 5G ಭಾರತದಲ್ಲಿ ಹೊಸ ವರ್ಷಕ್ಕೆ ಅನಾವರಣಗೊಳ್ಳಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಈ ಸ್ಮಾರ್ಟ್‌ಫೋನ್ ಒನ್ಪ್ಲಸ್ 11 5G ಯ ಉತ್ತರಾಧಿಕಾರಿಯಾಗಿದೆ. ಒನ್ಪ್ಲಸ್ 11 5G ಭಾರತದಲ್ಲಿ 56,999 ರೂ. ಗಳಿಂದ ಪ್ರಾರಂಭವಾಗುತ್ತದೆ. ಆದರೆ, ಒನ್ಪ್ಲಸ್ 12 5G ಎಷ್ಟು ಬೆಲೆ ಹೊಂದಿರಬಹುದು ಎಂಬುದು ತಿಳಿದುಬಂದಿಲ್ಲ. ಕೆಲ ಫೀಚರ್ಸ್ ಕುರಿತ ಮಾಹಿತಿ ಮಾತ್ರ ಸೋರಿಕೆ ಆಗಿದೆ.

ಮುಂಬರುವ ಒನ್ಪ್ಲಸ್ 12 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಇದು ಕ್ವಾಲ್ಕಾಮ್‌ನ ಮುಂದಿನ-ಜನ್ ಸ್ನಾಪ್‌ಡ್ರಾಗನ್ 8 Gen 3 SoC ಅನ್ನು ಹೊಂದುವ ನಿರೀಕ್ಷೆಯಿದೆ. RAM ಸಾಮರ್ಥ್ಯದಲ್ಲಿ ಹೆಚ್ಚಳವಾಗಬಹುದು. ಒನ್ಪ್ಲಸ್ 11 ಫೋನ್ನಲ್ಲಿ 16GB ನೀಡಲಾಗಿತ್ತು.

ಈ ಹೊಸ ಫೋನ್ 6.70-ಇಂಚಿನ QHD+ AMOLED ಡಿಸ್ ಪ್ಲೇಯನ್ನು ಹೊಂದಿರುವ ಸಾಧ್ಯತೆ ಇದೆ. ದೊಡ್ಡದಾದ 5,400mAh ಬ್ಯಾಟರಿಯೊಂದಿಗೆ ಅನಾವರಣಗೊಳ್ಳಲಿದ್ದು, ವೇಗದ 100W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಇರಲಿದೆ.

ಇನ್ನು ಚಾರ್ಜಿಂಗ್ ಅನ್ನು ವೇಗಗೊಳಿಸಲು, ಒನ್ಪ್ಲಸ್ ಎರಡು ಬ್ಯಾಟರಿಗಳನ್ನು ಅಳವಡಿಸುವ ಸಾಧ್ಯತೆ ಇದೆ. ಒಂದು 5,400mAh ಆಗಿದ್ದರೆ ಮತ್ತೊಂದು 2,700mAh ಸಾಮರ್ಥ್ಯದೊಂದಿಗೆ ಇರಬಹುದು. ಕಂಪನಿಯು ಫೋನ್‌ನೊಂದಿಗೆ ಬಾಕ್ಸ್‌ನಲ್ಲಿ ಚಾರ್ಜರ್ ಅನ್ನು ನೀಡುತ್ತದೆ.

ಒನ್ಪ್ಲಸ್ 12 ನ ಕ್ಯಾಮೆರಾ ಹಾರ್ಡ್‌ವೇರ್ ಅಪ್‌ಗ್ರೇಡ್ ಆಗುವ ನಿರೀಕ್ಷೆಯೂ ಇದೆ. ಹಿಂಬದಿ 50-ಮೆಗಾಪಿಕ್ಸೆಲ್ ವೈಡ್-ಆಂಗಲ್ ಪ್ರೈಮರಿ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಪೆರಿಸ್ಕೋಪ್ ಲೆನ್ಸ್‌ನೊಂದಿಗೆ ಸಜ್ಜುಗೊಂಡ 64-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ.

ಇದರಲ್ಲಿರುವ ಪ್ರಾಥಮಿಕ ಕ್ಯಾಮರಾ ಹೊಸ Sony IMX9xx ಸಂವೇದಕವನ್ನು ಹೊಂದಿರಬಹುದು, ಆದರೆ ಪೆರಿಸ್ಕೋಪ್ ಲೆನ್ಸ್ 3x ಆಪ್ಟಿಕಲ್ ಜೂಮ್ ಅನ್ನು ನೀಡುತ್ತದೆ. ಒನ್ಪ್ಲಸ್ ಕ್ಯಾಮೆರಾ ಟ್ಯೂನಿಂಗ್‌ಗಾಗಿ Hasselblad ಜೊತೆ ತನ್ನ ಸಹಯೋಗವನ್ನು ಮುಂದುವರಿಸುವ ನಿರೀಕ್ಷೆಯಿದೆ. ಈ ಫೋನಿನ ಮುಂಭಾಗ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಲಿದೆ ಎಂಬ ಮಾತಿದೆ.



















