2008ರ ಮುಂಬೈ ದಾಳಿಯಲ್ಲಿ ಯಾವ ಕ್ರಮ ತೆಗೆದುಕೊಂಡಿರಿ?; ರಾಹುಲ್ ಗಾಂಧಿ ವಿರುದ್ಧ ಸಚಿವ ಜೈಶಂಕರ್ ವಾಗ್ದಾಳಿ

Updated on: Jul 29, 2025 | 11:05 AM

ಸಂಸತ್ ಅಧಿವೇಶನದಲ್ಲಿ ಸೋಮವಾರ ಆಪರೇಷನ್ ಸಿಂಧೂರದ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಕೇಂದ್ರ ಸಚಿವರಾದ ಕಿರಣ್ ರಿಜಿಜು, ರಾಜನಾಥ್ ಸಿಂಗ್, ಎಸ್. ಜೈಶಂಕರ್ ಪಹಲ್ಗಾಮ್ ದಾಳಿಯ ಬಳಿಕ ನಡೆದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಆಪರೇಷನ್ ಸಿಂಧೂರದ ಬಗ್ಗೆ ವಿಪಕ್ಷಗಳು ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ನಿನ್ನೆ ಆಪರೇಷನ್ ಸಿಂಧೂರದ ಬಗ್ಗೆ ಯಾವೆಲ್ಲ ನಾಯಕರು ಏನು ಮಾತನಾಡಿದರು ಎಂಬ ಕುರಿತಾದ ಪೂರ್ತಿ ಮಾಹಿತಿ ಇಲ್ಲಿದೆ.

1 / 8
2008ರ ಮುಂಬೈ ದಾಳಿಯ ನಂತರ ಹಿಂದಿನ ಸರ್ಕಾರದ ಪ್ರತಿಕ್ರಿಯೆಗೆ ಟೀಕೆ ವ್ಯಕ್ತಪಡಿಸಿದ ಸಚಿವ ಜೈಶಂಕರ್, ಪಹಲ್ಗಾಮ್ ದಾಳಿಯ ಬಗ್ಗೆ ನಮಗೆ ಪ್ರಶ್ನೆ ಮಾಡುವ ನೀವು ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 2008ರಲ್ಲಿ ನಡೆದ ಮುಂಬೈ ದಾಳಿಯ ಬಗ್ಗೆ ಯಾವ ಕ್ರಮ ತೆಗೆದುಕೊಂಡಿರಿ?  ನೀವು ಆ ಸಮಯದಲ್ಲಿ ಏಕೆ ಮುಂದೆ ಹೋಗಲಿಲ್ಲ? ಎಂದು ಟೀಕಿಸಿದ್ದಾರೆ. ಶರ್ಮ್-ಎಲ್-ಶೇಖ್‌ನಲ್ಲಿ ಆಗಿನ ಸರ್ಕಾರ ಮತ್ತು ಪಾಕಿಸ್ತಾನಿ ಪ್ರಧಾನಿ ಭಯೋತ್ಪಾದನೆ ಎರಡೂ ದೇಶಗಳಿಗೆ ಪ್ರಮುಖ ಬೆದರಿಕೆ ಎಂದು ಒಪ್ಪಿಕೊಂಡರು. ಈಗ, ಇಂದು, ಜನರು ಅಮೆರಿಕ ನಿಮ್ಮನ್ನು ಹೈಫನ್ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ, ರಷ್ಯಾ ನಿಮ್ಮನ್ನು ಹೈಫನ್ ಮಾಡುತ್ತಿದೆ - ದೀಪೇಂದರ್ ಹೂಡಾ ಜಿ ಹೇಳುವುದನ್ನು ನಾನು ಕೇಳಿದ್ದೇನೆ. ನೀವು ನಿಮ್ಮನ್ನು ಹೈಫನ್ ಮಾಡುತ್ತಿದ್ದೀರಿ. ದಯವಿಟ್ಟು ಭಾರತವನ್ನು ಪಾಕಿಸ್ತಾನಕ್ಕೆ ಲಿಂಕ್ ಮಾಡಿ ಎಂದು ಹೇಳಲು ನಿಮಗೆ ವಿದೇಶಿ ದೇಶ ಬೇಕಾಗಿಲ್ಲ. ನಿಮ್ಮದೇ ದೇಶದ ಸಚಿವನ ಬಗ್ಗೆ ನಿಮಗೆ ನಂಬಿಕೆಯಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಶಶಿ ತರೂರ್ ಕೇಂದ್ರ ಸರ್ಕಾರದ ನಿಯೋಗದ ಜೊತೆ ವಿದೇಶಗಳಿಗೆ ತೆರಳಿ ಭಾರತದ ಬಗ್ಗೆ ಹೆಮ್ಮೆ ಮೂಡಿಸುವ ಕೆಲಸ ಮಾಡಿದ್ದಾರೆ. ಆದರೆ, ಕೆಲವು ಕಾಂಗ್ರೆಸ್ ನಾಯಕರು ಪಾಕಿಸ್ತಾನೀಯರಂತೆ ಆಪರೇಷನ್ ಸಿಂಧೂರವನ್ನು ಟೀಕಿಸುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲಿ 193 ರಾಷ್ಟ್ರಗಳಿವೆ, ಪಾಕಿಸ್ತಾನವನ್ನು ಹೊರತುಪಡಿಸಿ ಕೇವಲ 3 ದೇಶಗಳು ಆಪರೇಷನ್ ಸಿಂಧೂರ್ ಅನ್ನು ವಿರೋಧಿಸಿದವು ಎಂದು ಜೈಶಂಕರ್ ಹೇಳಿದ್ದಾರೆ.

2 / 8
“ಪಹಲ್ಗಾಮ್ ದಾಳಿಯ ನಂತರ, ನಮ್ಮ ಸಶಸ್ತ್ರ ಪಡೆಗಳು ಕ್ರಮ ಕೈಗೊಂಡವು. 100ಕ್ಕೂ ಹೆಚ್ಚು ಭಯೋತ್ಪಾದಕರು, ಅವರ ಟ್ರೈನಿಂಗ್ ಕ್ಯಾಂಪ್​ಗಳನ್ನು ಗುರಿಯಾಗಿಸಿಕೊಂಡಿದ್ದ 9 ಭಯೋತ್ಪಾದಕ ಮೂಲಸೌಕರ್ಯ ತಾಣಗಳ ಮೇಲೆ ನಿಖರವಾಗಿ ದಾಳಿ ನಡೆಸಲಾಯಿತು” ಎಂದು ಅವರು ಒತ್ತಿ ಹೇಳಿದರು. “ಈ ಕಾರ್ಯಾಚರಣೆ ವೇಳೆ ಎಸ್ -400, ಆಕಾಶ್ ಕ್ಷಿಪಣಿ ವ್ಯವಸ್ಥೆ, ವಾಯು ರಕ್ಷಣಾ ಬಂದೂಕುಗಳು ಬಹಳ ಉಪಯುಕ್ತವೆಂದು ಸಾಬೀತಾಯಿತು. ಪಾಕಿಸ್ತಾನದ ದಾಳಿಯನ್ನು ಇವುಗಳು ಸಂಪೂರ್ಣವಾಗಿ ವಿಫಲಗೊಳಿಸಿದವು” ಎಂದು ರಾಜನಾಥ್ ಸಿಂಗ್ ಸದನದಲ್ಲಿ ಮಾಹಿತಿ ನೀಡಿದ್ದಾರೆ.

3 / 8
ಪಹಲ್ಗಾಮ್‌ಗಿಂತ ಕೆಲವರು ಪ್ಯಾಲೆಸ್ಟೈನ್‌ಗಾಗಿ ಹೆಚ್ಚು ದುಃಖಿತರಾಗಿರುವುದು ದುರದೃಷ್ಟಕರ ಎಂದು ಎಲ್‌ಜೆಪಿ (ರಾಮ್ ವಿಲಾಸ್) ಸಂಸದೆ ಶಾಂಭವಿ ಚೌಧರಿ ಲೋಕಸಭೆಯಲ್ಲಿ ಹೇಳಿದ್ದಾರೆ. "ಈ ಹೊಸ ಭಾರತವು ಗೌತಮ ಬುದ್ಧ ಮತ್ತು ಮಹಾವೀರ ಶಾಂತಿಗಾಗಿ ತೋರಿಸಿದ ಹಾದಿಯಲ್ಲಿ ನಡೆಯುತ್ತದೆ. ಆದರೆ ಇದು ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದ್ದರೆ, ಭಗವಾನ್ ಶ್ರೀ ರಾಮನ ಬಿಲ್ಲು ಮತ್ತು ಶ್ರೀ ಕೃಷ್ಣನ ಸುದರ್ಶನ ಚಕ್ರವನ್ನು ಹೇಗೆ ಎತ್ತಬೇಕೆಂದು ಸಹ ತಿಳಿದಿದೆ. ದುರದೃಷ್ಟಕರ ಸಂಗತಿಯೆಂದರೆ ಇಂದಿಗೂ ನಮ್ಮ ದೇಶದಲ್ಲಿ ಪಹಲ್ಗಾಮ್​ಗಿಂತ ಪ್ಯಾಲೆಸ್ಟೈನ್‌ಗಾಗಿ ಹೆಚ್ಚು ದುಃಖಿತರಾಗುವ ಜನರಿದ್ದಾರೆ" ಎಂದು ಟೀಕಿಸಿದ್ದಾರೆ.

4 / 8
"ಸಾಮಾಜಿಕ ಮಾಧ್ಯಮವನ್ನು ನೋಡಿ, ಕಳೆದ ಎರಡು ತಿಂಗಳುಗಳಲ್ಲಿ ರಾಹುಲ್ ಆಕ್ರಮಿತ ಕಾಂಗ್ರೆಸ್ ಪ್ರಧಾನಿ ಮೋದಿ ಮತ್ತು ಭಾರತೀಯ ಸೇನೆಯ ವಿರುದ್ಧ ಅಸಹ್ಯಕರ ಮತ್ತು ಅವಮಾನಕರ ವ್ಯಂಗ್ಯಚಿತ್ರಗಳನ್ನು ಮಾಡಿದೆ. ರಾಹುಲ್ ಆಕ್ರಮಿತ ಕಾಂಗ್ರೆಸ್ ಸೇನಾ ಮುಖ್ಯಸ್ಥರನ್ನು ರಸ್ತೆಬದಿಯ ಗೂಂಡಾ ಎಂದು ಕರೆದಿದೆ. ರಾಹುಲ್ ಗಾಂಧಿ ಇಡೀ ದೇಶ ಮತ್ತು ಭಾರತೀಯ ಸೇನೆಯ ಕ್ಷಮೆಯಾಚಿಸಬೇಕು" ಎಂದು ಸಚಿವ ಅನುರಾಗ್ ಠಾಕೂರ್ ಸದನದಲ್ಲಿ ಒತ್ತಾಯಿಸಿದ್ದಾರೆ. ಇಲ್ಲಿಯವರೆಗೆ ಮಾತನಾಡಿದ ಎಲ್ಲಾ ವಿರೋಧ ಪಕ್ಷದ ಸಂಸದರಲ್ಲಿ ಒಬ್ಬರು ಕೂಡ ಈ ಭಯೋತ್ಪಾದಕ ದಾಳಿಯಲ್ಲಿ ಜನರನ್ನು ಅವರ ಧರ್ಮದ ಬಗ್ಗೆ ಕೇಳಲಾಯಿತು ಮತ್ತು ಕಲ್ಮಾ ಪಠಿಸಲು ಕೇಳಲಾಯಿತು, ಅವರ ಪ್ಯಾಂಟ್‌ಗಳನ್ನು ತೆಗೆದುಹಾಕಲಾಯಿತು ಮತ್ತು ನಂತರ ಅವರನ್ನು ಕೊಲ್ಲಲಾಯಿತು ಎಂದು ಎದ್ದುನಿಂತು ಹೇಳಿಲ್ಲ. ಇದನ್ನು ಹೇಳುವುದರಿಂದ ವಿರೋಧ ಪಕ್ಷದ ಸಂಸದರಿಗೆ ಏನು ನೋವುಂಟಾಗುತ್ತದೆ ಹೇಳಿ?" ಎಂದು ಪ್ರಶ್ನಿಸಿದ್ದಾರೆ.

5 / 8
ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ಸಂದರ್ಭದಲ್ಲಿ, AIMIM ಸಂಸದ ಅಸಾದುದ್ದೀನ್ ಓವೈಸಿ, “ಪಾಕಿಸ್ತಾನ ನಮ್ಮ ದೇಶದ ಮೇಲೆ ಅಷ್ಟು ದಾಳಿ ನಡೆಸಿದರೂ ಭಾರತ-ಪಾಕಿಸ್ತಾನ ಒಟ್ಟಾಗಿ ಕ್ರಿಕೆಟ್ ಆಡುವ ಅಗತ್ಯವಿದೆಯೇ? ಬೈಸರನ್‌ನಲ್ಲಿ ಕೊಲ್ಲಲ್ಪಟ್ಟ ಜನರ ಕುಟುಂಬದ ಸದಸ್ಯರಿಗೆ ಪಾಕಿಸ್ತಾನದೊಂದಿಗಿನ ಭಾರತದ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಕೇಳಲು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆಯೇ? ನಾವು ಪಾಕಿಸ್ತಾನದ 80% ನೀರನ್ನು ನಿಲ್ಲಿಸುತ್ತಿದ್ದೇವೆ, ನೀರು ಮತ್ತು ರಕ್ತ ಒಟ್ಟಿಗೆ ಹರಿಯುವುದಿಲ್ಲ ಎಂದು ಹೇಳುತ್ತಿದ್ದೇವೆ. ಹಾಗಾದರೆ ಕ್ರಿಕೆಟ್ ಪಂದ್ಯವನ್ನು ಆಡುವುದೇಕೆ?” ಎಂದು ಓವೈಸಿ ಪ್ರಶ್ನಿಸಿದ್ದಾರೆ.

6 / 8
ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಟಿಎಂಸಿ ಸಂಸದ ಕಲ್ಯಾಣ್ ಮುಖರ್ಜಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಕದನವಿರಾಮ ಮಾಡಿಸಿದ್ದು ನಾನೇ ಎಂದು ಟ್ರಂಪ್ ಹೇಳಿಕೊಳ್ಳುತ್ತಿದ್ದಾರೆ. ಟ್ರಂಪ್ ಎದುರು ಪ್ರಧಾನಿ ಮೋದಿಯವರ 56 ಇಂಚಿನ ಎದೆ 36 ಇಂಚಿಗೆ ಕುಗ್ಗುತ್ತದೆ ಎಂದು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತು ತೀವ್ರ ಚರ್ಚೆಯ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ್ದಾರೆ.

7 / 8
“ದಾಳಿ ನಡೆದ ಬೈಸರನ್ ಕಣಿವೆಯನ್ನು ತಲುಪಲು ಆಂಬ್ಯುಲೆನ್ಸ್ ಸುಮಾರು 1 ಗಂಟೆ ತೆಗೆದುಕೊಂಡಿತು. ಸೈನ್ಯವು ಕಾಲ್ನಡಿಗೆಯಲ್ಲಿ ಅಲ್ಲಿಗೆ ತಲುಪಿತು. ಇಂತಹ ಪ್ರದೇಶಕ್ಕೆ ಉಗ್ರರು ಸುಲಭವಾಗಿ ಯಾರಿಗೂ ಅನುಮಾನ ಬಾರದಂತೆ ತಲುಪಿದ್ದು ಹೇಗೆ? ಆಪರೇಷನ್ ಸಿಂಧೂರ್ ವೇಳೆ ನಮ್ಮ ಎಷ್ಟು ಜೆಟ್​ಗಳನ್ನು ಹೊಡೆದುರುಳಿಸಲಾಯಿತು? ಕದನವಿರಾಮಕ್ಕೆ ಭಾರತ ಒಪ್ಪಿದ್ದೇಕೆ? ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಪ್ರಶ್ನಿಸಿದ್ದಾರೆ.

8 / 8
“ನಿಮಗೆ ನಮ್ಮ ದೇಶದ ವಿದೇಶಾಂಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರ ಮೇಲೆ ನಂಬಿಕೆ ಇಲ್ಲ, ಆದರೆ ಬೇರೆ ಯಾವುದೋ ದೇಶದವರು ಹೇಳಿದ ಮಾತು ನಂಬುತ್ತೀರಿ. ಇದಕ್ಕೆ ನನ್ನ ಆಕ್ಷೇಪವಿದೆ. ನಿಮ್ಮ ಪಕ್ಷದಲ್ಲಿ ವಿದೇಶಿಯರ ಮಹತ್ವ ಏನೆಂಬುದು ನನಗೆ ಗೊತ್ತಿದೆ. ಆದರೆ ನಿಮ್ಮ ಪಕ್ಷದ ಆ ಎಲ್ಲಾ ವಿಷಯಗಳನ್ನು ಈ ಸದನದ ಮೇಲೆ ಕೂಡ ಹೇರುವುದು ಸರಿಯಲ್ಲ. ಇದೇ ಕಾರಣಕ್ಕಾಗಿ ನೀವು ವಿರೋಧ ಪಕ್ಷದ ಕುರ್ಚಿಯಲ್ಲಿ ಕುಳಿತಿದ್ದೀರಿ, ಮುಂದಿನ 20 ವರ್ಷವೂ ನೀವು ಅಲ್ಲಿಯೇ ಇರುತ್ತೀರಿ” ಎಂದು ಸದನದ ಕಲಾಪಕ್ಕೆ ಪದೇಪದೆ ಅಡ್ಡಿಪಡಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ.