ಕೋಟೆನಾಡಿನಲ್ಲಿ ಭರ್ಜರಿ ಕಬಡ್ಡಿ ಪಂದ್ಯಾವಳಿ ಆಯೋಜನೆ; ಅಖಾಡಕ್ಕಿಳಿದು ತೊಡೆತಟ್ಟಿದ ಕಾನೂನು ವಿದ್ಯಾರ್ಥಿಗಳು

|

Updated on: Jun 11, 2023 | 1:28 PM

ಚಿತ್ರದುರ್ಗದಲ್ಲಿ ಭರ್ಜರಿ ಕಬಡ್ಡಿ ಪಂದ್ಯಾವಳಿ ನಡೆದಿದ್ದು, ಕಾನೂನು ಪದವಿ ವಿದ್ಯಾರ್ಥಿಗಳು ಅಖಾಡಕ್ಕಿಳಿದು ತೊಡೆತಟ್ಟಿ ಆರ್ಭಟಿಸಿದ್ದು, ಮತ್ತೊಂದು ವಿಶೇಷ. ಈ ಕುರಿತು ಒಂದು ಝಲಕ್ ಇಲ್ಲಿದೆ ನೋಡಿ.

1 / 6
ಗರಡಿ ಮನೆಯ ತವರು ಖ್ಯಾತಿಯ ಕೋಟೆನಾಡು ಚಿತ್ರದುರ್ಗದಲ್ಲಿ ಭರ್ಜರಿ ಕಬಡ್ಡಿ ಪಂದ್ಯಾವಳಿ ನಡೆದಿದ್ದು,  ಕಾನೂನು ಪದವಿ ವಿದ್ಯಾರ್ಥಿಗಳು ಅಖಾಡಕ್ಕಿಳಿದು ತೊಡೆತಟ್ಟಿ ಆರ್ಭಟಿಸಿದ್ರು.

ಗರಡಿ ಮನೆಯ ತವರು ಖ್ಯಾತಿಯ ಕೋಟೆನಾಡು ಚಿತ್ರದುರ್ಗದಲ್ಲಿ ಭರ್ಜರಿ ಕಬಡ್ಡಿ ಪಂದ್ಯಾವಳಿ ನಡೆದಿದ್ದು, ಕಾನೂನು ಪದವಿ ವಿದ್ಯಾರ್ಥಿಗಳು ಅಖಾಡಕ್ಕಿಳಿದು ತೊಡೆತಟ್ಟಿ ಆರ್ಭಟಿಸಿದ್ರು.

2 / 6
ಕೋಟೆನಾಡಿನ ಅಖಾಡದಲ್ಲಿ ತೊಡೆ ತಟ್ಟಿದ ಯುವ ಪಡೆ. ಕಬಡ್ಡಿ ಕಬಡ್ಡಿ ಎನ್ನುತ್ತ ಭರ್ಜರಿ ಭುಜಬಲ
ಪ್ರದರ್ಶಿಸಿದ ಯುವಕರು. ಕಾನೂನು ಪದವಿ ವಿದ್ಯಾರ್ಥಿಗಳಿಂದ ಗ್ರಾಮೀಣ ಕ್ರೀಡೆಯ ಪ್ರದರ್ಶನ. ಈ ದೃಶ್ಯಗಳು
ಕಂಡು ಬಂದಿದ್ದು ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ.

ಕೋಟೆನಾಡಿನ ಅಖಾಡದಲ್ಲಿ ತೊಡೆ ತಟ್ಟಿದ ಯುವ ಪಡೆ. ಕಬಡ್ಡಿ ಕಬಡ್ಡಿ ಎನ್ನುತ್ತ ಭರ್ಜರಿ ಭುಜಬಲ ಪ್ರದರ್ಶಿಸಿದ ಯುವಕರು. ಕಾನೂನು ಪದವಿ ವಿದ್ಯಾರ್ಥಿಗಳಿಂದ ಗ್ರಾಮೀಣ ಕ್ರೀಡೆಯ ಪ್ರದರ್ಶನ. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ.

3 / 6
ಹೌದು, ಚಿತ್ರದುರ್ಗದ ಸರಸ್ವತಿ ಕಾನೂನು ಮಹಾವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಕಾನೂನು ಮಹಾ ವಿದ್ಯಾಲಯ ಹುಬ್ಬಳ್ಳಿಯಿಂದ ‘ರಾಜ್ಯ ಕಾನೂನು ವಿಶ್ವವಿದ್ಯಾಲಯಗಳ ಅಂತರ ವಿಶ್ವವಿದ್ಯಾಲಯಗಳ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು.

4 / 6
ಜೂನ್ 09 ಮತ್ತು 10 ಎರಡು ದಿನಗಳ ಕಾಲ ಕಬಡ್ಡಿ ಪಂದ್ಯಾವಳಿ ನಡೆಯಿತು. ಪಂದ್ಯಾವಳಿಯಲ್ಲಿ 28ತಂಡಗಳು ಭಾಗಿ ಆಗಿದ್ದವು. ಶಿವಮೊಗ್ಗ ತಂಡ ವಿಜಯಿಯಾಗಿ ಪ್ರಥಮ ಸ್ಥಾನ ಗಳಿಸಿದರೆ, ಹುಬ್ಬಳ್ಳಿ ತಂಡ ರನ್ನರ್ 
ಅಪ್ ಆಗಿ ಮಿಂಚಿದೆ.

ಜೂನ್ 09 ಮತ್ತು 10 ಎರಡು ದಿನಗಳ ಕಾಲ ಕಬಡ್ಡಿ ಪಂದ್ಯಾವಳಿ ನಡೆಯಿತು. ಪಂದ್ಯಾವಳಿಯಲ್ಲಿ 28ತಂಡಗಳು ಭಾಗಿ ಆಗಿದ್ದವು. ಶಿವಮೊಗ್ಗ ತಂಡ ವಿಜಯಿಯಾಗಿ ಪ್ರಥಮ ಸ್ಥಾನ ಗಳಿಸಿದರೆ, ಹುಬ್ಬಳ್ಳಿ ತಂಡ ರನ್ನರ್ ಅಪ್ ಆಗಿ ಮಿಂಚಿದೆ.

5 / 6
ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳಿಂದ ವಿವಿಧ ತಂಡಗಳು ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗಿಯಾಗಿದ್ದವು. ಇನ್ನು ಇದೇ ವೇಳೆ ‘ಕೋಟೆನಾಡಿನಲ್ಲಿ ಗ್ರಾಮೀಣ ಕ್ರೀಡೆ ಕಬಡ್ಡಿ ಆಯೋಜಿಸುವ ಮೂಲಕ ಬೆನ್ನುತಟ್ಟಿದ್ದು ಖುಷಿ ತಂದಿದೆ. ಇದೇ ರೀತಿ ದೇಸಿ ಕ್ರೀಡೆಗಳಿಗೆ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಪ್ರೋತ್ಸಾಹಿಸಬೇಕೆಂದು ಕಬಡ್ಡಿ ಕ್ರೀಡಾಪಟು ಭುವನೇಶ್ವರ್ ಹೇಳಿದ್ರು.

6 / 6
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಕಾನೂನು ಕಾಲೇಜು ವಿದ್ಯಾರ್ಥಿಗಳ ಕಬಡ್ಡಿ ಕ್ರೀಡಾಕೂಟ
ಭರ್ಜರಿಯಾಗಿ ನಡೆದಿದೆ. ಅನೇಕ ಯುವ ಪ್ರತಿಭೆಗಳು ಕಬಡ್ಡಿ ಅಖಾಡದಲ್ಲಿ ತೊಡೆ ತಟ್ಟಿ ಮಿಂಚಿದ್ದಾರೆ. ಅನೇಕ ಯುವಕರಿಗೆ ದೇಸಿ ಕ್ರೀಡೆ ನವ ಸ್ಪೂರ್ತಿ ತುಂಬಿದೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಕಾನೂನು ಕಾಲೇಜು ವಿದ್ಯಾರ್ಥಿಗಳ ಕಬಡ್ಡಿ ಕ್ರೀಡಾಕೂಟ ಭರ್ಜರಿಯಾಗಿ ನಡೆದಿದೆ. ಅನೇಕ ಯುವ ಪ್ರತಿಭೆಗಳು ಕಬಡ್ಡಿ ಅಖಾಡದಲ್ಲಿ ತೊಡೆ ತಟ್ಟಿ ಮಿಂಚಿದ್ದಾರೆ. ಅನೇಕ ಯುವಕರಿಗೆ ದೇಸಿ ಕ್ರೀಡೆ ನವ ಸ್ಪೂರ್ತಿ ತುಂಬಿದೆ.