ಈ ವಾರ ಒಟಿಟಿಗೆ ಬಂದಿವೆ ಜಬರ್ದಸ್ಥ್ ಸಿನಿಮಾಗಳು, ಪಟ್ಟಿ ಇಲ್ಲಿದೆ

Updated on: Jun 20, 2026 | 4:08 PM

OTT release this week: ಪ್ರತಿ ವಾರದಂತೆ ಈ ವಾರವೂ ಸಹ ಹಲವು ಸಿನಿಮಾಗಳು, ವೆಬ್ ಸರಣಿಗಳು, ಡಾಕ್ಯುಮೆಂಟರಿಗಳು ಒಟಿಟಿಗೆ ಬಂದಿವೆ. ಈ ಬಾರಿಯಂತೂ ಜನಪ್ರಿಯ ಕಾಮಿಡಿ ಶೋ ಸಹ ಒಟಿಟಿಗೆ ಬಂದಿದೆ. ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಹಿಟ್ ಆದ ಸಿನಿಮಾಗಳು ಸಹ ಈ ವಾರ ಒಟಿಟಿಗೆ ಬಂದಿವೆ. ಈ ವಾರ ಬಂದಿರೊ ಸಿನಿಮಾ, ವೆಬ್ ಸರಣಿಗಳಲ್ಲಿ ನಿಮ್ಮ ಆಯ್ಕೆ ಯಾವುದು? ಇಲ್ಲಿದೆ ನೋಡಿ ಪಟ್ಟಿ...

1 / 5
ಮೋಹನ್​​ಲಾಲ್ ನಟನೆಯ ‘ದೃಶ್ಯಂ 3’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಹಿಟ್ ಆಗಿತ್ತು. ಕಳೆದ ತಿಂಗಳಷ್ಟೆ ಬಿಡುಗಡೆ ಆದ ಈ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಮೋಹನ್​​ಲಾಲ್ ನಟಿಸಿ, ಜೀತು ಜೋಸೆಫ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಇದೀಗ ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದಾಗಿದೆ.

2 / 5
ಬಾಸಿಲ್ ಜೋಸೆಫ್, ಟೊವಿನೊ ಥಾಮಸ್ ಇನ್ನೂ ಕೆಲವರು ನಟಿಸಿರುವ ಇತ್ತೀಚೆಗಿನ ಸೂಪರ್ ಹಿಟ್ ಸಮಲಯಾಳಂ ಸಿನಿಮಾ ‘ಅತಿರಡಿ’ ಇದೀಗ ಒಟಿಟಿಗೆ ಬಂದಿದೆ. ಇತ್ತೀಚೆಗೆ ಬ್ಲಾಕ್ ಬಸ್ಟರ್ ಆದ ‘ಸರ್​ವಂ ಮಾಯ’ ಸಿನಿಮಾದ ನಾಯಕಿ ರಿಯಾ ಶಿಭು ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾವನ್ನು ಸೋನಿ ಲಿವ್​​ನಲ್ಲಿ ವೀಕ್ಷಿಸಬಹುದಾಗಿದೆ.

3 / 5
‘ಸೇವ್ ದಿ ಟೈಗರ್’ ತೆಲುಗಿನ ಜನಪ್ರಿಯ ಹಾಸ್ಯ ಪ್ರಧಾನ ವೆಬ್ ಸರಣಿ. ಈಗಾಗಲೇ ಎರಡು ವೆಬ್ ಸರಣಿ ಬಿಡುಗಡೆ ಆಗಿದ್ದು, ಈ ವಾರ ಸೀಸನ್ 3 ಬಿಡುಗಡೆ ಆಗಿದೆ. ‘ಸೇವ್ ದಿ ಟೈಗರ್’ ವೆಬ್ ಸರಣಿಯನ್ನು ಜಿಯೋ ಹಾಟ್​​ಸ್ಟಾರ್​​ ಅಲ್ಲಿ ವೀಕ್ಷಿಸಬಹುದಾಗಿದೆ.

4 / 5
ಯೂಟ್ಯೂಬ್​​ನಲ್ಲಿ ಪ್ರಸಾರ ಆಗುತ್ತಿದ್ದ ಶೋ ‘ಇಂಡಿಯಾ ಗಾಟ್ ಲೇಟೆಂಟ್’ ವಿವಾದಗಳ ಕಾರಣಕ್ಕೆ ರದ್ದಾಗಿತ್ತು. ಇದೀಗ ಈ ಶೋನ ಎರಡನೇ ಸೀಸನ್ ಇಂದಿನಿಂದ (ಜೂನ್ 20) ಪ್ರಸಾರ ಆಗುತ್ತಿದೆ. ಸೀಸನ್ 2 ಯೂಟ್ಯೂಬ್ ಜೊತೆಗೆ ನೆಟ್​​ಫ್ಲಿಕ್ಸ್​​ನಲ್ಲಿ ನೇರವಾಗಿ  ಬಿಡುಗಡೆ ಆಗಲಿದೆ. ಪ್ರತಿ ವಾರವೂ ಒಂದು ಹೊಸ ಎಪಿಸೋಡ್ ಪ್ರಸಾರ ಆಗಲಿದೆ.

5 / 5
ಕೊರಿಯನ್ ಆಕ್ಷನ್ ಡ್ರಾಮಾ ‘ಹಸ್ಬೆಂಡ್ಸ್ ಇನ್ ಆಕ್ಷನ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಇದೊಂದು ಹಾಸ್ಯ ಪ್ರಧಾನ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾ ಅನ್ನು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

Follow Us