ಈ ವಾರ ಒಟಿಟಿಗೆ ಬಂದ ಸಿನಿಮಾಗಳಿವು? ಇಲ್ಲಿದೆ ನೋಡಿ ಪಟ್ಟಿ

Updated on: May 24, 2025 | 7:54 PM

OTT Release: ಕಳೆದ ವಾರ ಕೆಲ ಬಹಳ ಒಳ್ಳೆಯ ಸಿನಿಮಾಗಳು, ವೆಬ್ ಸರಣಿಗಳು ಒಟಿಟಿಗೆ ಲಗ್ಗೆ ಇಟ್ಟಿದ್ದವು. ಈ ವಾರವೂ ಕೆಲ ಸಿನಿಮಾಗಳು ಒಟಿಟಿಗೆ ಬಂದಿವೆ. ಆದರೆ ಈ ಬಾರಿ ಒಟಿಟಿ ಬಿಡುಗಡೆ ಪಟ್ಟಿ ಕಳೆದ ವಾರದಷ್ಟು ಶ್ರೀಮಂತವಾಗಿಲ್ಲ. ಆದರೂ ಸಹ ಈ ವಾರ ಬಿಡುಗಡೆ ಆಗುತ್ತಿರುವ ಕೆಲ ಸಿನಿಮಾ ಹಾಗೂ ವೆಬ್ ಸರಣಿಗಳು ಗಮನ ಸೆಳೆಯುತ್ತಿವೆ. ಅದರಲ್ಲಿ ಒಂದು ಕನ್ನಡದ ಸಿನಿಮಾ ಸಹ ಇದೆ. ಇಲ್ಲಿದೆ ನೋಡಿ ಪೂರ್ಣ ಪಟ್ಟಿ.

1 / 6
ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಮೊದಲ ಬಾರಿ ನಿರ್ಮಾಣ ಮಾಡಿರುವ ಸಿನಿಮಾ ‘ಫೈರ್ ಫ್ಲೈ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದು, ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ಬಿಡುಗಡೆ ಆದಾಗ ವ್ಯಕ್ತವಾಗಿದ್ದವು. ಈ ಸಿನಿಮಾ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಆಗಿದೆ.

2 / 6
ಮಲಯಾಳಂನ ಸರಳ ಮತ್ತು ಸುಂದರ ಪ್ರೇಮ ಕತೆ ‘ಅಭಿಲಾಶಂ’ ಈ ವಾರ ಒಟಿಟಿಗೆ ಬಂದಿದೆ. ಸುಂದರವಾದ ಪ್ರೇಮಕತೆಯ ಜೊತೆಗೆ ಹಾಸ್ಯ ಸಹ ಸೇರಿಕೊಂಡಿರುವ ‘ಅಭಿಲಾಶಂ’ ಈಗಾಗಲೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಗಮನ ಸೆಳೆದಿದೆ. ಈ ಸಿನಿಮಾ ಮೇ 23 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.

3 / 6
ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಂ ನಟಿ ಭಾವನ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹಂಟ್’ ಸಿನಿಮಾ ಇದೇ ವಾರ ಮನೊರಮಾ ಮ್ಯಾಕ್ಸ್ ಒಟಿಟಿಗೆ ಬಿಡುಗಡೆ ಆಗಿದೆ. ಈ ಸಿನಿಮಾ ಕ್ರೈಂ ಹಾರರ್ ಥ್ರಿಲ್ಲರ್ ಸಿನಿಮಾ ಆಗಿದೆ.

4 / 6
‘ಕೋರ್ಟ್’, ‘ಬಲಗಂ’ ಸಿನಿಮಾಗಳ ಮೂಲಕ ಬ್ಲಾಕ್ ಬಸ್ಟರ್ ಹೊಡೆದಿರುವ ನಟ ಪ್ರಿಯದರ್ಶಿ ನಾಯಕನಾಗಿ ನಟಿಸಿರುವ ‘ಸಾರಂಗಪಾಣಿ ಜಾತಕಂ’ ಸಿನಿಮಾ ಇದೇ ವಾರ ಅಮೆಜಾನ್ ಪ್ರೈಂ ಒಟಿಟಿಗೆ ಬಿಡುಗಡೆ ಆಗಿದೆ. ಮದುವೆ ಆಗದ ಯುವಕನ ಜಾತಕದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಇದೊಂದು ಹಾಸ್ಯಮಯ ಸಿನಿಮಾ ಆಗಿದೆ.

5 / 6
ಸುಮೊ ಆಟಗಾರನೊಬ್ಬ ಚೆನ್ನೈನ ಸ್ಥಳೀಯ ಜನರ ಸಹಾಯದಿಂದ ಜಪಾನ್​ಗೆ ಹೋಗಿ ಅಲ್ಲಿ ಚಾಂಪಿಯನ್​ಶಿಪ್​​ನಲ್ಲಿ ಪಾಲ್ಗೊಳ್ಳುತ್ತಾನೆ. ಹಾಸ್ಯಮಯ ಕತೆಯನ್ನು ಒಳಗೊಂಡಿರುವ ಈ ತಮಿಳು ಸಿನಿಮಾ ಮೇ 23 ರಂದು ಟೆಂಟ್​ಕೊಟ್ಟ ಎಂಬ ಒಟಿಟಿಯಲ್ಲಿ ತೆರೆಗೆ ಬಂದಿದೆ.

6 / 6
ಕರಣ್ ಜೋಹರ್ ನಡೆಸಿಕೊಡಲಿರುವ ರಿಯಾಲಿಟಿ ಶೋ ‘ದಿ ಟ್ರೇಟರ್ಸ್’ ಇದೇ ವಾರದಿಂದ ಅಮೆಜಾನ್ ಪ್ರೈಂನಲ್ಲಿ ಪ್ರಸಾರ ಆಗಲಿದೆ. ಇದು ನಂಬಿಕೆ ಮತ್ತು ದ್ರೋಹವನ್ನು ಪ್ರಧಾನವಾಗಿರಿಸಿಕೊಂಡು ರಚಿಸಿರುವ ರಿಯಾಲಿಟಿ ಶೋ ಆಗಿದೆ. ಕರಣ್ ಜೋಹರ್ ಈ ಶೋ ನಡೆಸಿಕೊಡಲಿದ್ದಾರೆ.