AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಬಂದ್ಬಿಟ್ಟ… RCB ತಂಡಕ್ಕೆ ರಣ ಬೇಟೆಗಾರ ಬಂದೇ ಬಿಟ್ಟ..!

IPL 2025 RCB: ಈ ಬಾರಿಯ ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇಆಫ್​ಗೆ ಪ್ರವೇಶಿಸಿದೆ. ಇದಾಗ್ಯೂ ಆರ್​ಸಿಬಿ ತಂಡಕ್ಕೆ ಇನ್ನೂ ಒಂದು ಲೀಗ್ ಪಂದ್ಯ ಉಳಿದಿದ್ದು, ಈ ಮ್ಯಾಚ್​ನಲ್ಲಿ ಜಯ ಸಾಧಿಸಿದರೆ ಅಂಕ ಪಟ್ಟಿಯಲ್ಲಿ ಮೊದಲ ಅಥವಾ ದ್ವಿತೀಯ ಸ್ಥಾನ ಅಲಂಕರಿಸಬಹುದು.

ಝಾಹಿರ್ ಯೂಸುಫ್
|

Updated on: May 25, 2025 | 7:26 AM

IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವೇಗಿ ಜೋಶ್ ಹೇಝಲ್​ವುಡ್ (Josh Hazelwood) ಆರ್​ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಭುಜದ ನೋವಿನ ಕಾರಣ ಕಳೆದ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಹೇಝಲ್​ವುಡ್ ಭಾನುವಾರ ಬೆಂಗಳೂರಿಗೆ ಆಗಮಿಸಿದ್ದಾರೆ. ಹೀಗಾಗಿ ಮುಂದಿನ ಪಂದ್ಯಗಳಿಗೆ ಅವರು ಲಭ್ಯರಿರಲಿದ್ದಾರೆ.

1 / 5
ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಜೋಶ್ ಹೇಝಲ್​ವುಡ್ ಭುಜದ ನೋವಿಗೆ ತುತ್ತಾಗಿದ್ದರು. ಹೀಗಾಗಿ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇದಾದ ಬಳಿಕ ಐಪಿಎಲ್ ಸ್ಥಗಿತಗೊಂಡಿದ್ದರಿಂದ ಅವರು ಆಸ್ಟ್ರೇಲಿಯಾಗೆ ಮರಳಿದ್ದರು.

2 / 5
ಆದರೆ ಆ ಬಳಿಕ ಐಪಿಎಲ್ ಆರಂಭವಾದರೂ ಜೋಶ್ ಹೇಝಲ್​ವುಡ್ ಬ್ರಿಸ್ಬೇನ್​ನಲ್ಲೇ ಚಿಕಿತ್ಸೆ ಮುಂದುವರೆಸಿದ್ದರು. ಇದೀಗ ಸಂಪೂರ್ಣ ಫಿಟ್​ನೆಸ್ ಸಾಧಿಸಿರುವ ಅವರು ಐಪಿಎಲ್​ಗಾಗಿ ಆಗಮಿಸಿದ್ದಾರೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಲೀಗ್​ ಪಂದ್ಯಕ್ಕೆ ಹೇಝಲ್​ವುಡ್ ಲಭ್ಯರಿರಲಿದ್ದಾರೆ.

3 / 5
ಇತ್ತ ಪ್ಲೇಆಫ್ ಪಂದ್ಯಕ್ಕೂ ಮುನ್ನ ಜೋಶ್ ಹೇಝಲ್​ವುಡ್ ಮರಳಿರುವುದು ಆರ್​ಸಿಬಿ ತಂಡದ ಬಲ ಬೌಲಿಂಗ್ ಬಲ ಹೆಚ್ಚಿಸಿದೆ. ಏಕೆಂದರೆ ಈ ಬಾರಿಯ ಐಪಿಎಲ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತ್ಯಧಿಕ ವಿಕೆಟ್ ಪಡೆದಿರುವು ಬೌಲರ್ ಹೇಝಲ್​ವುಡ್. 10 ಪಂದ್ಯಗಳಲ್ಲಿ 36.5 ಓವರ್​ಗಳನ್ನು ಎಸೆದಿರುವ  ಆಸೀಸ್ ವೇಗಿ ಒಟ್ಟು 18 ವಿಕೆಟ್​ ಕಬಳಿಸಿದ್ದಾರೆ.

4 / 5
ಹಾಗೆಯೇ 10 ಪಂದ್ಯಗಳಲ್ಲಿ ಜೋಶ್ ಹೇಝಲ್​ವುಡ್ ಬರೋಬ್ಬರಿ 103 ಡಾಟ್ ಬಾಲ್ ಮಾಡಿದ್ದರು. ಅಂದರೆ ಆರ್​ಸಿಬಿ ಪರ ರನ್ ನಿಯಂತ್ರಿಸುವಲ್ಲಿ ಹಾಗೂ ವಿಕೆಟ್ ಕಬಳಿಸುವಲ್ಲಿ ಹೇಝಲ್​ವುಡ್ ಪ್ರಮುಖ ಪಾತ್ರವಹಿಸಿದ್ದರು. ಇದೀಗ ನಿರ್ಣಾಯಕ ಪಂದ್ಯಗಳಿಗೂ ಮುನ್ನ ಅವರ ಆಗಮನದಿಂದಾಗಿ ಆರ್​ಸಿಬಿ ತಂಡಕ್ಕೆ ಆನೆಬಲ ಬಂದಂತಾಗಿದೆ.

5 / 5
Follow us