ಈ ವಾರ ಒಟಿಟಿಗೆ ಬಂದಿವೆ ಜಬರ್ಧಸ್ತ್ ಸಿನಿಮಾಗಳು: ನಿಮ್ಮ ಆಯ್ಕೆ ಯಾವುದು?

Updated on: Sep 12, 2026 | 3:04 PM

ಪ್ರತಿ ವಾರದಂತೆ ಈ ವಾರವೂ ಸಹ ಹಲವು ಹೊಸ ಸಿನಿಮಾಗಳು, ವೆಬ್ ಸರಣಿಗಳು, ಡಾಕ್ಯುಮೆಂಟರಿಗಳು ಒಟಿಟಿಗೆ ಬಂದಿವೆ. ಕನ್ನಡದಲ್ಲಿ ಹಿಟ್ ಆದ ‘ರಕ್ಕಸಪುರದೊಳ್’ ಸಿನಿಮಾ ಸೇರಿದಂತೆ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳು ಈ ವಾರ ಒಟಿಟಿಗೆ ಬಂದಿವೆ. ಹಲವು ಸಿನಿಮಾಗಲು ಸ್ಟ್ರೀಮ್ ಆಗುತ್ತಿದ್ದು ನಿಮ್ಮ ಆಯ್ಕೆ ಯಾವುದು?

1 / 6
ರಾಜ್ ಬಿ ಶೆಟ್ಟಿ ನಟನೆಯ ಮಾಡಿರುವ ‘ರಕ್ಕಸಪುರದೊಳ್’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತ್ತು. ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ವಿಮರ್ಶೆಗಳು ಕೇಳಿ ಬಂದಿದ್ದವು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಬಿಡುಗಡೆ ಆಗಿ ಬಹಳ ದಿನಗಳ ಬಳಿಕ ಒಟಿಟಿಗೆ ಬಂದಿರುವ ‘ರಕ್ಕಸಪುರದೊಳ್’ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದು.

ರಾಜ್ ಬಿ ಶೆಟ್ಟಿ ನಟನೆಯ ಮಾಡಿರುವ ‘ರಕ್ಕಸಪುರದೊಳ್’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತ್ತು. ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ವಿಮರ್ಶೆಗಳು ಕೇಳಿ ಬಂದಿದ್ದವು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಬಿಡುಗಡೆ ಆಗಿ ಬಹಳ ದಿನಗಳ ಬಳಿಕ ಒಟಿಟಿಗೆ ಬಂದಿರುವ ‘ರಕ್ಕಸಪುರದೊಳ್’ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದು.

2 / 6

ತಮಿಳಿನ ಸ್ಟಾರ್ ನಟ ಸೂರ್ಯ ನಟನೆ ಮಾಡಿರುವ ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ‘ವಿಶ್ವನಾಥ್ ಆಂಡ್ ಸನ್ಸ್’ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಕೆಲವೇ ವಾರಗಳ ಬಳಿಕ ಇದೀಗ ಈ ಸಿನಿಮಾ ನೆಟ್​ಫ್ಲಿಕ್ಸ್​​ನಲ್ಲಿ ರಿಲೀಸ್ ಆಗಿದೆ.

3 / 6

ಜೋಜು ಜಾರ್ಜ್ ನಟನೆ ಮಾಡಿರುವ ಮಲಯಾಳಂ ಥ್ರಿಲ್ಲರ್ ಸಿನಿಮಾ ‘ವರವು’ ಈ ವಾರ ಒಟಿಟಿಗೆ ಬಂದಿದೆ. ಪರೋಲ್​​ ಮೇಲೆ ಹೊರಗೆ ಬಂದ ವ್ಯಕ್ತಿಯೊಬ್ಬನ ಮುಂದೆ ಹಳೆಯ ದ್ವೇಷ ತೆರೆದುಕೊಂಡಾಗ ನಡೆಯುವ ಕತೆಗಳನ್ನು ಸಿನಿಮಾ ಒಳಗೊಂಡಿದೆ.

4 / 6

‘ಫೌದಾ’ ವಿಶ್ವದ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದು. ಇಸ್ರೇಲಿ ವೆಬ್ ಸರಣಿ ಇದಾಗಿದ್ದು, ಇಸ್ರೇಲಿನ ಮಿಲಿಟರಿ, ಆಂತರಿಕ ಭದ್ರತೆ ಹೇಗೆ ಕೆಲಸ ಮಾಡತ್ತದೆ ಎಂಬುದನ್ನು ತೋರಿಸುವ ವೆಬ್ ಸರಣಿ ಇದಾಗಿದೆ. ವೆಬ್ ಸರಣಿಯು ಹಲವು ನಿಜ ಘಟನೆಗಳನ್ನು ಸಹ ಆಧರಿಸಿದೆ. ಇದೀಗ ಈ ವೆಬ್ ಸರಣಿಯ ಐದನೇ ಸೀಸನ್ ರಿಲೀಸ್ ಆಗಿದ್ದು, ನೆಟ್​​ಫ್ಲಿಕ್ಸ್​​ನಲ್ಲಿ ಇದನ್ನು ವೀಕ್ಷಿಸಬಹುದಾಗಿದೆ.

5 / 6

ಕ್ರೈಂ, ಥ್ರಿಲ್ಲರ್ ಕತೆಯನ್ನು ಒಳಗೊಂಡಿರುವ ‘ಗಮ್ಸಾನ್’ ಸಿನಿಮಾ ಇದೀಗ ಜೀ5ನಲ್ಲಿ ಬಿಡುಗಡೆ ಆಗಿದೆ. ‘ಗಮ್ಸನ್’ ಸಿನಿಮಾನಲ್ಲಿ ಅರ್ಷದ್ ವಾರ್ಸಿ, ಪ್ರತಿಕ್ ಗಾಂಧಿ ಸೇರಿದಂತೆ ಹಲವು ಸ್ಟಾರ್ ನಟರು ನಟನೆ ಮಾಡಿರುವ ಸಿನಿಮಾ ಇದಾಗಿದ್ದು, ಜೀ5ನಲ್ಲಿ ವೀಕ್ಷಿಸಬಹುದಾಗಿದೆ.

6 / 6

ಸಂಜೀವ್ ಸನ್ಯಾಲ್ ಬರೆದಿರುವ ‘ರೆವಲ್ಯೂಷನರೀಸ್: ದಿ ಅದರ್ ಸ್ಟೋರಿ ಆಫ್ ಹೌ ಇಂಡಿಯಾ ವೋನ್ ಫ್ರೀಡಮ್’ ಪುಸ್ತಕ ಆಧರಿಸಿದ ವೆಬ್ ಸರಣಿ ಇದೀಗ ಒಟಿಟಿಗೆ ಬಂದಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳ ಕತೆ ಹೊಂದಿರುವ ‘ದಿ ರೆವಲ್ಯೂಷನರೀಸ್’ ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us