ಜಾನುವಾರು ಜಾತ್ರೆಯಲ್ಲಿ ಮದಗಜಗಳಂತೆ ಕಂಡುಬಂದ ಎತ್ತು, ಹೋರಿಗಳು; ಇಲ್ಲಿವೆ ಚಿತ್ರಗಳು
TV9 Web | Updated By: preethi shettigar
Updated on:
Feb 19, 2022 | 11:04 AM
ಕಳೆದ ಎರಡು ವರ್ಷದಿಂದ ಕೊವಿಡ್ ಕರಿನೆರಳಿನ ಕಾರಣ ಜಾತ್ರೆಗಳಿಗೆ ಮಂಕು ಕವಿದಿತ್ತು. ಬಹುತೇಕ ಜಾತ್ರೆಗಳು ರದ್ದಾದರೆ ಕೆಲವೊಂದು ಕಡೆ ಸಂಕ್ಷಿಪ್ತವಾಗಿ ನಡೆಸಲಾಗಿದೆ. ಆದರೆ ಈ ಬಾರಿ ಜಾತ್ರೆಗಳು ಪುನಃ ರಂಗು ಪಡೆದುಕೊಳ್ಳುತ್ತಿವೆ.
1 / 5
ಎತ್ತ ನೋಡಿದರೂ ಜಾನುವಾರುಗಳ ಸಾಲು. ಒಂದಕ್ಕಿಂತ ಒಂದು ಕಟ್ಟುಮಸ್ತಾದ ದೇಹದ ಎತ್ತು, ಹೋರಿಗಳು ಎಲ್ಲರನ್ನು ಸೆಳೆಯುತ್ತಿವೆ. ಕಟ್ಟುಮಸ್ತಾದ ದೇಹ, ಆಳೆತ್ತರದ ಅಜಾನುಬಾಹು ಬಸವಗಳು ರೈತರಿಗೆ ಮೋಡಿ ಮಾಡುತ್ತಿವೆ. ಆದರೆ ಅವುಗಳ ಬೆಲೆ ಕೂಡ ಅಷ್ಟೇ ಎತ್ತರ. ಲಕ್ಷ ಲಕ್ಷ ಬೆಲೆಬಾಳುವ ಎತ್ತು, ಹೋರಿಗಳು ಕಂಡು ಬಂದಿದ್ದು ಬಾಗಲಕೋಟೆಯ ಜಾನುವಾರು ಜಾತ್ರೆಯಲ್ಲಿ.
2 / 5
ಕಳೆದ ಎರಡು ವರ್ಷದಿಂದ ಕೊವಿಡ್ ಕರಿನೆರಳಿನ ಕಾರಣ ಜಾತ್ರೆಗಳಿಗೆ ಮಂಕು ಕವಿದಿತ್ತು. ಬಹುತೇಕ ಜಾತ್ರೆಗಳು ರದ್ದಾದರೆ ಕೆಲವೊಂದು ಕಡೆ ಸಂಕ್ಷಿಪ್ತವಾಗಿ ನಡೆಸಲಾಗಿದೆ. ಆದರೆ ಈ ಬಾರಿ ಜಾತ್ರೆಗಳು ಪುನಃ ರಂಗು ಪಡೆದುಕೊಳ್ಳುತ್ತಿವೆ. ಸದ್ಯ ಬಾಗಲಕೋಟೆಯ ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ ಆರಂಭವಾಗಿದೆ. ಜಾತ್ರೆಯಲ್ಲಿ ಸಾವಿರಾರು ಜೋಡಿ ಹೋರಿ, ಎತ್ತುಗಳನ್ನು ಮಾರಾಟಕ್ಕೆ ರೈತರು ಕರೆತಂದಿದ್ದಾರೆ.
3 / 5
ಕಿಲಾರಿ, ಮೂಡಲ, ಜವಾರಿ ಸೇರಿದಂತೆ ವಿವಿದ ತಳಿಯ ಎತ್ತುಗಳು, ಹೋರಿಗಳು ರೈತರನ್ನು ಸೆಳೆಯುತ್ತಿವೆ. ಎತ್ತರ, ಕಟ್ಟುಮಸ್ತಾದ ದೇಹದ ಮೂಲಕ ಕಂಗೊಳಿಸುತ್ತಿರುವ ಎತ್ತು ಹೋರಿಗಳ ಬೆಲೆ 50 ಸಾವಿರದಿಂದ ಎರಡು ಲಕ್ಷದವರೆಗೂ ತಲುಪಿದೆ.ಇಲ್ಲಿ ಬಾಗಲಕೋಟೆ ಸಮೀಪದ ಬನ್ನಿದಿನ್ನಿ ಗ್ರಾಮದ ಮುತ್ತಪ್ಪ ಲೆಂಕೆನ್ನವರ ಎಂಬ ರೈತರ ಈ ಎತ್ತುಗಳು ಬತೊಬ್ಬರಿ ಒಂದು ಲಕ್ಷ 40 ಸಾವಿರಕ್ಕೆ ಮಾರಾಟವಾಗಿವೆ.
4 / 5
ಆರು ಹಲ್ಲಿನ ಐದು ವರ್ಷದ ಈ ಹೋರಿಗಳಿಗೆ ಬಾರಿ ಬೆಲೆ ಬಂದಿದ್ದು, ಮಾರಾಟವಾದ ನಂತರವೂ ಒಂದುವರೆ ಲಕ್ಷದವರೆಗೂ ಇತರ ರೈತರು ಕೇಳಿದಾರೆ. ಆದರೆ ಮೊದಲೇ ಮಾರಾಟವಾದ ಹಿನ್ನೆಲೆ ಮುತ್ತಪ್ಪ ಹೆಚ್ಚು ಬೆಲೆ ಬಂದರೂ ಕೊಟ್ಟಿಲ್ಲ.
5 / 5
ಇತ್ತೀಚೆಗೆ ಹೆಚ್ಚಾಗಿ ಕೃಷಿಯಂತ್ರಗಳ ಮೂಲಕವೇ ರೈತರು ಕೃಷಿಯನ್ನು ಮಾಡುತ್ತಿರೋದು. ಜೊತೆಗೆ ಹಸುಗಳ ಸಾಕಾಣಿಕೆ ತೀರಾ ಕಡಿಮೆಯಾಗಿರೋದು ಇಷ್ಟೊಂದು ಬೆಲೆ ಏರಿಕೆಗೆ ಕಾರಣವಾಗಿದೆ. ಯಂತ್ರಗಳ ಬಳಕೆಯಿಂದ ಎತ್ತು ಹೋರಿಗಳು ಹೆಚ್ಚಾಗಿ ಸಿಗೋದಿಲ್ಲ. ಇನ್ನು ಹಸುಗಳ ಸಾಕಾಣಿಕೆ ಕೂಡ ಕಡಿಮೆಯಾಗಿದ್ದರಿಂದ ಎತ್ತು ಹೋರಿಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಇದ್ದ ಜಾನುವಾರುಗಳಿಗೆ ಇಷ್ಟು ಪ್ರಮಾಣದ ಬೆಲೆ ಏರಿಕೆಯಾಗಿದೆ. ಆದರೆ ಮಳೆಗಾಲದಲ್ಲಿ ಹೊಲದಲ್ಲಿ ಕೆಲಸ ಮಾಡೋದಕ್ಕೆ ಎತ್ತುಗಳು ಅನಿವಾರ್ಯವಾಗಿ ಬೇಕೇಬೇಕು. ಜೊತೆಗೆ ಎತ್ತುಗಳಿದ್ದರೆ ಕೃಷಿಕರಿಗೆ ಒಂದು ಗೌರವ ಅದಕ್ಕಾಗಿ ಎಷ್ಟೇ ರೇಟ್ ಹೆಚ್ಚಾದರೂ ಎತ್ತುಗಳನ್ನು ಖರೀದಿಸುತ್ತಿದ್ದಾರೆ ರೈತರು.