Parenting Tips: ಪೋಷಕರು ತಮ್ಮ ಮಕ್ಕಳ ಮುಂದೆ ಈ ಕೆಲಸಗಳನ್ನು ಮಾಡಲೇಬಾರದಂತೆ

Updated on: May 16, 2025 | 8:15 PM

ಪುಟ್ಟ ಮಕ್ಕಳು ದೊಡ್ಡವರು ಏನಾದರೂ ಮಾಡುವುದನ್ನು ನೋಡಿ ಅದನ್ನೇ ಕಲಿಯುತ್ತಾರೆ ಎಂದು ಹೇಳ್ತಾರೆ. ಈ ಮಾತು ಕೂಡ ನಿಜ. ಮಕ್ಕಳು ತಮ್ಮ ಪೋಷಕರು ಏನು ಮಾಡ್ತಾರೆ, ಏನು ಮಾತಾಡ್ತಾರೆ ಇವೆಲ್ಲವನ್ನು ಗಮನಿಸುತ್ತಾರೆ ಮತ್ತು ಅದನ್ನೇ ಮಾಡ್ತಾರೆ. ಹೌದು ಪೋಷಕರು ತಮ್ಮ ಮಕ್ಕಳ ಮುಂದೆ ಬೈಯುವುದು, ಕೆಟ್ಟ ಪದಗಳನ್ನು ಬಳಕೆ ಮಾಡೋದು, ಮೊಬೈಲ್‌ ನೋಡುವುದು, ಕೋಪಿಸಿಕೊಳ್ಳುವುದು ಇವೆಲ್ಲವನ್ನು ಮಾಡಿದಾಗ, ಆ ಮಕ್ಕಳು ಕೂಡಾ ಅದನ್ನೇ ಕಲಿಯುತ್ತಾರೆ. ಈ ಅಂಶ ಅವರ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಕ್ಕಳ ಏಳಿಗೆ ಮತ್ತು ಭವಿಷ್ಯದ ದೃಷ್ಟಿಯಿಂದ ಪೋಷಕರು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಕ್ಕಳ ಮುಂದೆ ಮಾಡಲೇಬಾರದು.

1 / 6
ಮಕ್ಕಳು ದೊಡ್ಡವನ್ನು ನೋಡಿ ಬಹಳಷ್ಟು ಕಲಿಯುತ್ತಾರೆ ಎಂದು ಹೇಳ್ತಾರೆ. ಹೀರುವಾಗ ಪೋಷಕರು ಮಕ್ಕಳ ಮುಂದೆ ಈ ಎಲ್ಲಾ ಕೆಲಸಗಳನ್ನು ಮಾಡಲೇಬಾರದು. ಮೊದಲನೆಯದಾಗಿ ಜಗಳವಾಡುವುದು. ಯಾವುದೇ ಕಾರಣಕ್ಕೂ ಗಂಡ-ಹೆಂಡತಿ ತಮ್ಮ ಮಕ್ಕಳ ಮುಂದೆ ಜಗಳವಾಡಬಾರದು. ಖಂಡಿತವಾಗಿಯೂ ಇದು ಮಕ್ಕಳ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಮತ್ತು ಅವರು ಕೂಡ ಇತರರೊಂದಿಗೆ ಹೀಗೆಯೇ ಜಗಳವಾಡುವ ಸಾಧ್ಯತೆ ಇರುತ್ತದೆ.

2 / 6
ಕೆಟ್ಟ ಪದಗಳ ಬಳಕೆ: ಪೋಷಕರು ಆಗಿರಬಹುದು ಅಥವಾ ಮನೆಯಲ್ಲಿರುವ ಯಾರೇ ಆಗಿರಬಹುದು, ಎಂದಿಗೂ ಮಕ್ಕಳ ಮುಂದೆ ಕೆಟ್ಟ ಪದಗಳನ್ನು ಬಳಕೆ ಮಾಡಲೇಬಾರದು.  ಕೆಟ್ಟ ಪದಗಳು ಮಕ್ಕಳ ಕಿವಿಗೆ ಬಿದ್ದರೆ, ಅದನ್ನೇ ಪುನಃ ಪುನಃ ಬಾಯಲ್ಲಿ ಹೇಳುತ್ತಿರುತ್ತಾರೆ. ಮತ್ತು ತಾವು ಕೂಡ ಈ ಕೆಟ್ಟ ಪದಗಳನ್ನು ಬಳಕೆ ಮಾಡುವುದನ್ನು ಕಲಿತು ಬಿಡುತ್ತಾರೆ. ಹಾಗಾಗಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಮಕ್ಕಳ ಮುಂದೆ ಯಾವುದೇ ಕಾರಣಕ್ಕೂ ಕೆಟ್ಟ ಪದಗಳನ್ನು ಬಳಕೆ ಮಾಡಬಾರದು.

3 / 6
ಮೊಬೈಲ್‌ ನೋಡುತ್ತಾ ಕೂರುವುದು: ಮಕ್ಕಳು ಜೊತೆಯಲ್ಲಿರುವಾಗ ಪೋಷಕರು ಹೆಚ್ಚಾಗಿ ಮೊಬೈಲ್‌ ನೋಡುವುದನ್ನು ಅಥವಾ ಲ್ಯಾಪ್‌ಟಾಪ್‌ ಎದುರಿಗೆಯೇ ಗಂಟೆಗಟ್ಟಲೆ ಕೂರುವುದನ್ನು ಮಾಡಬಾರದು. ಹೀಗೆ ನೀವು ಮಕ್ಕಳಿಗೆ ಟೈಂ ಕೊಡುವ ಬದಲು ಮೊಬೈಲ್‌ನಲ್ಲಿ ಕಾಲ ಕಳೆದರೆ, ಮಕ್ಕಳಿಗೂ ಕೂಡಾ ಅಪ್ಪ ಅಮ್ಮನಿಗೆ ನಮ್ಮ ಮೇಲೆ ಪ್ರೀತಿಯಿಲ್ಲ ಎಂಬ ಭಾವನೆ ಬಂದು ಬಿಡುತ್ತದೆ. ಜೊತೆಗೆ ನನಗೂ ಮೊಬೈಲ್‌ ಕೊಡಿ ಎಂದು ಮಕ್ಕಳು ಹಠ ಮಾಡುತ್ತಾರೆ.

4 / 6
ಕೆಟ್ಟ ಅಭ್ಯಾಸ: ಮಕ್ಕಳ ಮುಂದೆ ಮದ್ಯ ಸೇವಿಸುವುದು, ಸಿಗರೇಟ್‌ ಸೇದುವುದು ಇತ್ಯಾದಿ ಕೆಟ್ಟ ಅಭ್ಯಾಸಗಳನ್ನು ಮಕ್ಕಳ ಮುಂದೆ ಮಾಡಬೇಡಿ. ಏಕೆಂದರೆ ಮಕ್ಕಳು ಕೂಡಾ ನಿಮ್ಮಂತೆಯೇ ಮಾಡುವ ಸಾಧ್ಯತೆ ಇರುತ್ತದೆ. ಮತ್ತು ನಿಮ್ಮ ಈ ಅಭ್ಯಾಸಗಳು ಮಕ್ಕಳ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ.

5 / 6
ಇತರರನ್ನು ಟೀಕಿಸುವುದು: ಇತರರ ಬಗ್ಗೆ, ವಿಶೇಷವಾಗಿ ಕುಟುಂಬ ಸದಸ್ಯರ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದು ಅಥವಾ ಅವರ ಬಗ್ಗೆ ಚಾಡಿ ಹೇಳುವುದನ್ನು ಮಕ್ಕಳ ಮುಂದೆ ಮಾಡಲು ಹೋಗಬೇಡಿ. ಏಕೆಂದರೆ ಮಕ್ಕಳು ಕೂಡಾ ಇದೇ ಅಭ್ಯಾಸವನ್ನು ರೂಢಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

6 / 6
ಯಾವಾಗಲೂ ಬೈಯುವುದು: ಕೆಲವು ಪೋಷಕರು ತಮ್ಮ ಮಕ್ಕಳು ಏನೇ ಮಾಡಿದರೂ ಅವರನ್ನು ಬೈಯುವುದೋ ಅಥವಾ ನಿಂದಿಸುವುದನ್ನು ಮಾಡುತ್ತಿರುತ್ತಾರೆ. ಹೀಗೆ ಪ್ರತಿ ಸಲ ಮಕ್ಕಳಿಗೆ ಬೈದ್ರೆ ಅಥವಾ ಅವರನ್ನು ನಿಂದಿಸಿದರೆ ಖಂಡಿತವಾಗಿಯೂ ಇದು ಮಕ್ಕಳ ಮನಸ್ಸನ್ನು ಘಾಸಿ ಮಾಡುತ್ತದೆ. ಮತ್ತು ನಾವು ಏನೇ ಮಾಡಿದರೂ ಅಪ್ಪ-ಅಮ್ಮ ಬೈತಾರೆ ಎಂದು ಮನಸ್ಸಿನಲ್ಲಿಯೇ ಕೊರಗುತ್ತಾರೆ. ಇದು ಅವರ ಬೆಳವಣಿಗೆಯ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ.