Paris Olympics 2024: ಕಮರಿದ ಲಕ್ಷ್ಯ ಸೇನ್ ಕಂಚಿನ ಪದಕದ ಕನಸು

|

Updated on: Aug 05, 2024 | 7:37 PM

Paris Olympics 2024: ಕಂಚಿನ ಪದಕಕ್ಕಾಗಿ ನಡೆದ ಈ ಪಂದ್ಯದ ಮೊದಲ ಗೇಮ್‌ನಲ್ಲಿ ಲಕ್ಷ್ಯ ಸೇನ್ ಸುಲಭ ಜಯ ಸಾಧಿಸಿದರು. ಆದರೆ ಇದರ ಹೊರತಾಗಿಯೂ ಅವರು ಪಂದ್ಯದಲ್ಲಿ ಸೋಲಬೇಕಾಯಿತು. ಮೊದಲ ಗೇಮ್ ಅನ್ನು 21-13ರಲ್ಲಿ ಗೆದ್ದುಕೊಂಡ ಲಕ್ಷ್ಯ ಎರಡನೇ ಗೇಮ್​ನಲ್ಲಿ ಲಯ ಕಳೆದುಕೊಂಡರು. ಎರಡನೇ ಗೇಮ್‌ನಲ್ಲಿ ಮಲೇಷ್ಯಾದ ಆಟಗಾರ 21-16 ಅಂಕಗಳಿಂದ ತಿರುಗೇಟು ನೀಡಿದರು. ಮೂರನೇ ಗೇಮ್‌ನಲ್ಲಿ ಲಕ್ಷ್ಯ 21-11ರಲ್ಲಿ ಸೋಲನುಭವಿಸಿದರು.

1 / 7
ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ 13-21, 21-16, 21-11 ರಿಂದ ಭಾರತದ ಸ್ಟಾರ್ ಶಟ್ಲರ್ ಲಕ್ಷ್ಯ ಸೇನ್ ಸೋಲನುಭವಿಸಿದರು. ಇದರೊಂದಿಗೆ ಲಕ್ಷ್ಯ ಅವರ ಒಲಿಂಪಿಕ್ಸ್ ಪದಕ ಗೆಲ್ಲುವ ಕನಸು ಕೂಡ ಭಗ್ನಗೊಂಡಿದೆ.

2 / 7
ಕಂಚಿನ ಪದಕಕ್ಕಾಗಿ ನಡೆದ ಈ ಪಂದ್ಯದ ಮೊದಲ ಗೇಮ್‌ನಲ್ಲಿ ಲಕ್ಷ್ಯ ಸೇನ್ ಸುಲಭ ಜಯ ಸಾಧಿಸಿದರು. ಆದರೆ ಇದರ ಹೊರತಾಗಿಯೂ ಅವರು ಪಂದ್ಯದಲ್ಲಿ ಸೋಲಬೇಕಾಯಿತು. ಮೊದಲ ಗೇಮ್ ಅನ್ನು 21-13ರಲ್ಲಿ ಗೆದ್ದುಕೊಂಡ ಲಕ್ಷ್ಯ ಎರಡನೇ ಗೇಮ್​ನಲ್ಲಿ ಲಯ ಕಳೆದುಕೊಂಡರು. ಎರಡನೇ ಗೇಮ್‌ನಲ್ಲಿ ಮಲೇಷ್ಯಾದ ಆಟಗಾರ 21-16 ಅಂಕಗಳಿಂದ ತಿರುಗೇಟು ನೀಡಿದರು. ಮೂರನೇ ಗೇಮ್‌ನಲ್ಲಿ ಲಕ್ಷ್ಯ 21-11ರಲ್ಲಿ ಸೋಲನುಭವಿಸಿದರು.

3 / 7
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಲಕ್ಷ್ಯ ಸೇನ್ ಅದ್ಭುತ ಪ್ರದರ್ಶನ ನೀಡಿದ್ದರು. ಗುಂಪಿನ ಹಂತದ ಪಂದ್ಯಗಳಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿ ಪ್ರೀ ಕ್ವಾರ್ಟರ್‌ಫೈನಲ್​ಗೆ ಲಗ್ಗೆ ಇಟ್ಟಿದ್ದ ಲಕ್ಷ್ಯ ಸೇನ್, ಈ ಸುತ್ತಿನಲ್ಲಿ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರನ್ನು 21-12, 21-6 ರಿಂದ ಏಕಪಕ್ಷೀಯವಾಗಿ ಸೋಲಿಸಿ ಕ್ವಾರ್ಟರ್-ಫೈನಲ್​ಗೆ ಟಿಕೆಟ್ ಖಚಿತಪಡಿಸಿಕೊಂಡಿದ್ದರು.

4 / 7
ಇನ್ನು ಕ್ವಾರ್ಟರ್-ಫೈನಲ್‌ನಲ್ಲಿ ಲಕ್ಷ್ಯ ಸೇನ್ ತಮ್ಮ ಅದ್ಭುತ ಆಟವನ್ನು ಪ್ರದರ್ಶಿಸಿ, ಚೈನೀಸ್ ತೈಪೆಯ ಚೌ-ಟಿಯೆನ್-ಚೆನ್ ಅವರನ್ನು ಸೋಲಿಸಿದರು. ಈ ಪಂದ್ಯವನ್ನು ಲಕ್ಷ್ಯ 19-21, 21-15, 21-12 ರಿಂದ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

5 / 7
ಆದರೆ, ಸೆಮಿಫೈನಲ್‌ನಲ್ಲಿ ಲಕ್ಷ್ಯ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ 22-20, 21-14 ಅಂತರದಲ್ಲಿ ಸೋತು, ಫೈನಲ್ ಅವಕಾಶವನ್ನು ಕಳೆದುಕೊಂಡಿದ್ದರು. ಇದೀಗ ಕಂಚಿನ ಪದಕದ ಪಂದ್ಯದಲ್ಲೂ ಗುರಿ ತಪ್ಪಿದ ಲಕ್ಷ್ಯ ಅವರ ಒಲಿಂಪಿಕ್ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ.

6 / 7
ಅಂತಿಮವಾಗಿ ಬ್ಯಾಡ್ಮಿಂಟನ್ ಸಿಂಗಲ್ಸ್​ನಲ್ಲಿ ನಾಲ್ಕನೇ ಸ್ಥಾನ ಪಡೆದ ಲಕ್ಷ್ಯ ಸೇನ್, ಈ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಐದನೇ ಭಾರತೀಯ ಆಟಗಾರ ಎನಿಸಿಕೊಂಡರು. ಲಕ್ಷ್ಯಗೂ ಮುನ್ನ ಅರ್ಜುನ್ ಬಾಬುತಾ, ಅಂಕಿತಾ ಭಕತ್/ಧೀರಜ್, ಮನು ಭಾಕರ್, ಮಹೇಶ್ವರಿ ಚೌಹಾಣ್/ಅನಂತ್ ಜೀತ್ ಸಿಂಗ್ ನರುಕಾ ಕೂಡ ನಾಲ್ಕನೇ ಸ್ಥಾನದಲ್ಲಿದ್ದಾರೆ.

7 / 7
ಲಕ್ಷ್ಯ ಸೇನ್ ಅವರು ಪದಕ ಗೆಲ್ಲಲು ಸಾಧ್ಯವಾಗದಿದ್ದರೂ, ತಮ್ಮ ಮೊದಲ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದರು. ಭಾರತದ ಪುರುಷರ ಆಟಗಾರನೊಬ್ಬ ಸಿಂಗಲ್ಸ್‌ನಲ್ಲಿ ಈ ಸಾಧನೆ ಮಾಡಿರುವುದು ಇದೇ ಮೊದಲು.