- Kannada News Photo gallery Paris Olympics 2024 Belgium Withdraws From Mixed Triathlon Relay After Athlete falls ill
Paris Olympics 2024: ಚರಂಡಿ ನೀರಿಗಿಂತ ಕಲುಷಿತ; ಸೀನ್ ನದಿಯಲ್ಲಿ ಈಜಿದ ಸ್ಪರ್ಧಿಗೆ ಅನಾರೋಗ್ಯ
Paris Olympics 2024: ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಸೀನ್ ನದಿಯ ನೀರಿನ ಗುಣಮಟ್ಟದ ಬಗ್ಗೆ ಮೊದಲಿನಿಂದಲೂ ಪ್ರಶ್ನೆಗಳು ಎತ್ತಿದ್ದವು. ಸ್ಪರ್ಧೆ ಶುರುವಾಗುವ ವೇಳೆಗೆ ನದಿಯ ನೀರಿನ ಗುಣಮಟ್ಟ ಸುಧಾರಿಸಲಿದೆ ಎಂದು ಸಂಘಕರು ಹೇಳಿದ್ದರು. ಆದರೆ ನಿರಂತರ ಮಳೆಯಿಂದಾಗಿ ನದಿ ಇನ್ನಷ್ಟು ಕಲುಷಿತಗೊಂಡಿದೆ. ಈ ಕಾರಣಕ್ಕಾಗಿಯೇ ಈ ಮೊದಲು ಟ್ರಯಥ್ಲಾನ್ ಅಭ್ಯಾಸ ಅವಧಿಯನ್ನು ರದ್ದುಗೊಳಿಸಲಾಗಿತ್ತು.
Updated on: Aug 05, 2024 | 4:27 PM

ಪ್ಯಾರಿಸ್ ಒಲಿಂಪಿಕ್ಸ್ ದಿನ ಕಳೆದಂತೆ ವಿವಾದಗಳ ಕೂಪವಾಗಿ ಮಾರ್ಪಡುತ್ತಿದೆ. ಅದರಲ್ಲಿ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸೀನ್ ನದಿಯಲ್ಲಿ ಈಜಿದ ನಂತರ ಬೆಲ್ಜಿಯಂ ಆಟಗಾರ್ತಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಬೆಲ್ಜಿಯಂ ಇಡೀ ತಂಡ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಮಿಶ್ರ ರಿಲೇ ಟ್ರಯಥ್ಲಾನ್‌ನಿಂದ ತನ್ನ ಹೆಸರನ್ನು ಹಿಂತೆಗೆದುಕೊಂಡಿದೆ.

ವಾಸ್ತವವಾಗಿ ಮಹಿಳೆಯರ ಟ್ರಯಥ್ಲಾನ್ ಕ್ರೀಡೆಯಲ್ಲಿ ಭಾಗವಹಿಸಿದ್ದ ತನ್ನ ಆಟಗಾರ್ತಿ ಕ್ಲೇರ್ ಮೈಕೆಲ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಬೆಲ್ಜಿಯಂ ಒಲಿಂಪಿಕ್ ಸಮಿತಿ ಹೇಳಿದೆ. ಇದರಿಂದಾಗಿ ಇಡೀ ತಂಡವು ಈಗ ರಿಲೇ ಟ್ರಯಥ್ಲಾನ್‌ನಿಂದ ಹಿಂದೆ ಸರಿಯಬೇಕಾಗಿದೆ ಎಂದು ಸಮಿತಿ ತಿಳಿಸಿದೆ.

ಯುರೋಪಿಯನ್ ಚಾಂಪಿಯನ್‌ಶಿಪ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಪದಕ ಗೆದ್ದಿರುವ 35 ವರ್ಷದ ಬೆಲ್ಜಿಯಂ ಆಟಗಾರ್ತಿ ಮಿಚೆಲ್, ಟ್ರಯಥ್ಲಾನ್ ಕ್ರೀಡೆಯಲ್ಲಿ ಭಾಗವಹಿಸಿದ್ದರು. ಆದರೆ ಸೀನ್ ನದಿಯಲ್ಲಿ ನಡೆದ ಈ ಸ್ಪರ್ಧೆಯ ಬಳಿಕ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಸಂಘಟಕರು ಮೈಕೆಲ್ ಅವರ ಅನಾರೋಗ್ಯದ ಬಗ್ಗೆ ಯಾವುದೇ ಹೇಳಿಕೆಯನ್ನು ಇದುವರೆಗೂ ನೀಡಿಲ್ಲ. ಆದರೆ ಸೀನ್ ನದಿಯಲ್ಲಿ ಸ್ಪರ್ಧೆಯು ಪೂರ್ವನಿರ್ಧರಿತ ವೇಳಾಪಟ್ಟಿಯ ಪ್ರಕಾರ ನಡೆಯಲಿದೆ ಎಂದು ಸಂಘಟನಾ ಸಮಿತಿ ಹೇಳಿದೆ.

ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಸೀನ್ ನದಿಯ ನೀರಿನ ಗುಣಮಟ್ಟದ ಬಗ್ಗೆ ಮೊದಲಿನಿಂದಲೂ ಪ್ರಶ್ನೆಗಳು ಎತ್ತಿದ್ದವು. ಸ್ಪರ್ಧೆ ಶುರುವಾಗುವ ವೇಳೆಗೆ ನದಿಯ ನೀರಿನ ಗುಣಮಟ್ಟ ಸುಧಾರಿಸಲಿದೆ ಎಂದು ಸಂಘಕರು ಹೇಳಿದ್ದರು. ಆದರೆ ನಿರಂತರ ಮಳೆಯಿಂದಾಗಿ ನದಿ ಇನ್ನಷ್ಟು ಕಲುಷಿತಗೊಂಡಿದೆ. ಈ ಕಾರಣಕ್ಕಾಗಿಯೇ ಈ ಮೊದಲು ಟ್ರಯಥ್ಲಾನ್ ಅಭ್ಯಾಸ ಅವಧಿಯನ್ನು ರದ್ದುಗೊಳಿಸಲಾಗಿತ್ತು.
