
ನಟ, ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ವಿಜಯವಾಡದಲ್ಲಿ ಪವನ್ ಕಲ್ಯಾಣ್ ಅಧಿಕಾರ ವಹಿಸಿಕೊಂಡಿದ್ದು, ಅದಕ್ಕೂ ಮುನ್ನ ದೇವರಿಗೆ ಪೂಜೆ ಮಾಡಿ ಆಪ್ತರ ಸಮ್ಮುಖದಲ್ಲಿ ಅಧಿಕಾರವನ್ನು ವಹಿಸಿಕೊಂಡರು.

ಪವನ್ ಕಲ್ಯಾಣ್ ಕೈಯಲ್ಲಿ ಇದೀಗ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಜಲಸಂಪನ್ಮೂಲ ಖಾತೆ, ಅರಣ್ಯ ಮತ್ತು ಪರಿಸರ ಖಾತೆ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆಗಳಿವೆ.

ಪ್ರಸ್ತುತ ನಾಲ್ಕು ಖಾತೆಗಳ ಜವಾಬ್ದಾರಿ ಪವನ್ ಕಲ್ಯಾಣ್ ಹೆಗಲಿಗಿದೆಯಾದರೂ ಮುಂದಿನ ದಿನಗಳಲ್ಲಿ ಕೆಲವು ಖಾತೆಗಳನ್ನು ಹೊಸ ಸಚಿವರಿಗೆ ಪವನ್ ಕಲ್ಯಾಣ್ ಬಿಟ್ಟುಕೊಡಲಿದ್ದಾರೆ ಎನ್ನಲಾಗಿದೆ.

ಪವನ್ ಕಲ್ಯಾಣ್ ಅಧಿಕಾರ ಸ್ವೀಕರಿಸುತ್ತಿರುವ, ಪವನ್ ಕಲ್ಯಾಣ್ಗೆ ಪೊಲೀಸರು ಗೌರವ ವಂದನೆ ಸಲ್ಲಿಸಿರುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಜಗನ್ರ ಸರ್ಕಾರದ ವಿರುದ್ಧ ಪವನ್ ಕಲ್ಯಾಣ್ ಸತತವಾಗಿ ಹೋರಾಟ ನಡೆಸಿ ಅವರನ್ನು ಅಧಿಕಾರದಿಂದ ಇಳಿಸಲು ಸಫಲರಾಗಿದ್ದಾರೆ. ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದಾಗಲೇ ಉಪ ಮುಖ್ಯಮಂತ್ರಿ ಆಗಿದ್ದಾರೆ.

ಪವನ್ ಕಲ್ಯಾಣ್ ಮೇಲೆ ದೊಡ್ಡ ಜವಾಬ್ದಾರಿಯನ್ನು ಸಿಎಂ ಚಂದ್ರಬಾಬು ನಾಯ್ಡು ಹೊರಿಸಿದ್ದು, ಇದನ್ನು ಅವರು ಹೇಗೆ ನಿಭಾಯಿಸುತ್ತಾರೆ ಕಾದು ನೋಡಬೇಕಿದೆ.