ನವಿಲುಗಳು
ಹಿಂಸಾತ್ಮಕ ಪ್ರದರ್ಶನಗಳ ಮಧ್ಯೆ, ಇಮ್ರಾನ್ ಬೆಂಬಲಿಗರು ಕಮಾಂಡರ್ ನಿವಾಸದಲ್ಲಿ ತೀವ್ರವಾಗಿ ಗದ್ದಲವನ್ನು ಸೃಷ್ಟಿಸಿದರು. ಜತೆಗೆ ನವಿಲುಗಳು ಸೇರಿದಂತೆ ಮನೆಯಲ್ಲಿರುವ ವಸ್ತುಗಳೆಲ್ಲವನ್ನೂ ಕದ್ದು ಪರಾರಿಯಾಗಿದ್ದಾರೆ.
ಪ್ರತಿಭಟನೆ
ಇಮ್ರಾನ್ ಖಾನ್ ಬಂಧನ ವಿರೋಧಿಸಿ ಪ್ರತಿಭಟನೆ ನಡೆಸಿದ ಸುಮಾರು 1,000 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಬೆಂಬಲಿಗರಿಂದ ಶಾಂತಿ ಭಂಗ
ಕಮಾಂಡರ್‌ಗಳ ಮನೆಗೆ ನುಗ್ಗಿದ ಪ್ರತಿಭಟನಾಕಾರರು ವೈರಲ್ ವೀಡಿಯೊದಲ್ಲಿ ಮೊದಲೇ ಹೇಳಿದ್ವಿ ಇಮ್ರಾನ್ ಖಾನ್ನನ್ನು ಕೆಣಕಬೇಡಿ ಎಂದು ಎನ್ನುವ ಹೇಳಿಕೆಯನ್ನು ಕೇಳಬಹುದು. ಕಾರ್ಪ್ಸ್ ಕಮಾಂಡರ್ ಮನೆಯ ಹೊರಗೆ ಅವರು ಭದ್ರತಾ ಸಿಬ್ಬಂದಿಯನ್ನು ಹೀನಾಯವಾಗಿ ಥಳಿಸಿದ್ದಾರೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ನಂತರ, ಪಾಕಿಸ್ತಾನದಲ್ಲಿ ಪ್ರತಿಭಟನಾಕಾರರು ಲಾಹೋರ್ ಕ್ಯಾಂಟ್‌ನಲ್ಲಿರುವ ಕಾರ್ಪ್ಸ್ ಕಮಾಂಡರ್ಸ್ ಹೌಸ್ ಮನೆಗೆ ಮುತ್ತಿಗೆ ಹಾಕಿದರು.