ಮಿಸ್ ಮಾಡದೆ ಚಿತ್ರಗಳನ್ನು ನೋಡಿ -ಮಾಗಡಿ ತಾಲೂಕಿನ ವೈ.ಜಿ. ಗುಡ್ಡ ಜಲಾಶಯ ಈ ಬಾರಿ ತುಂಬಿತುಳುಕುತ್ತಿದೆ, ಜಲರಾಶಿ ಧುಮ್ಮಿಕ್ಕುತ್ತಿದೆ!
TV9 Web | Updated By: ಸಾಧು ಶ್ರೀನಾಥ್
Updated on:
Jan 20, 2023 | 12:06 PM
YG Gudda reservoir Magadi: ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೋ ಸುಂದರವಾದ ಜಲಾಶಯ, ಸುತ್ತಲೂ ಬೆಟ್ಟ, ಹಚ್ಚಹಸಿರಿನ ಮಧ್ಯೆ ನಿರ್ಮಾಣಗೊಂಡಿದೆ. ಆದರೆ ಇಂತಹ ಜಲಾಶಯ ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿ ಇದೆ ಎಂಬುದು ಎಷ್ಟೋ ಜನರಿಗೆ ಗೊತ್ತಿಲ್ಲ. ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿದೆ ಈ ಜಲಾಶಯ
1 / 23
ಅದು ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೋ ಸುಂದರವಾದ ಜಲಾಶಯ. ಸುತ್ತಲು ಬೆಟ್ಟ, ಹಚ್ಚಹಸಿರಿನ ಮಧ್ಯೆ ನಿರ್ಮಾಣಗೊಂಡಿದೆ.
2 / 23
ಅಂದಹಾಗೆ ಇಂತಹ ದೃಶ್ಯ ಕಂಡು ಬರುವುದು ರಾಮನಗರ (Ramanagara) ಜಿಲ್ಲೆ ಮಾಗಡಿ (Magadi) ತಾಲೂಕಿನ ವೈ ಜಿ ಗುಡ್ಡ ಜಲಾಶಯದಲ್ಲಿ (YG Gudda reservoir).
3 / 23
ಅಂದಹಾಗೆ ಮಾಗಡಿ ತಾಲೂಕಿನ ವೈ ಜಿ ಗುಡ್ಡ ಜಲಾಶಯ ಈ ಹಿಂದೆ ಬಹುತೇಕವಾಗಿ ಭರ್ತಿಯಾಗುತ್ತಿರಲಿಲ್ಲ. ಆದರೆ ಈ ಬಾರಿ ನಿರಂತರವಾಗಿ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯ ಇದೀಗ ಸಂಪೂರ್ಣವಾಗಿ ಭರ್ತಿಯಾಗಿದೆ.
4 / 23
ಜಲಾಶಯವನ್ನ ಅಭಿವೃದ್ದಿಪಡಿಸಿ, ಮೂಲಭೂತ ಸೌಕರ್ಯಗಳನ್ನ ಒದಗಿಸಿ ಪ್ರವಾಸಿಗರನ್ನ ಸೆಳೆಯುವ ಕೆಲಸವನ್ನ ಜಿಲ್ಲಾಡಳಿತ ಕೂಡ ಮಾಡಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೂ ಕೂಡ ಕಾರಣವಾಗಿದ್ದು, ಜಲಾಶಯವನ್ನ ಅಭಿವೃದ್ದಿಪಡಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
5 / 23
ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಹ ಜಲಾಶಯ -ವೈ ಜಿ ಗುಡ್ಡ ಜಲಾಶಯ
6 / 23
ಒಟ್ಟಾರೆ ಸುಂದರವಾದ ಜಲಾಶಯ ಮೂಲಭೂತ ಸೌಕರ್ಯಗಳಿಂದ ಸೊರಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಜಲಾಶಯ ಅಭಿವೃದ್ದಿಪಡಿಸಿದ್ರೆ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಡಲಿದೆ.
7 / 23
ಒಬ್ಬ ಸೆಕ್ಯೂರಿಟಿ ಸಹ ಇಲ್ಲ. ಶೌಚಾಲಯ, ಕುಡಿಯುವ ನೀರು ಸೇರಿದಂತೆ ಯಾವೊಂದು ವ್ಯವಸ್ಥೆಯೂ ಇಲ್ಲಿಲ್ಲ.
8 / 23
ಹೀಗಾಗಿ ಜಲಾಶಯ ಇದುವರೆಗೂ ಅಭಿವೃದ್ದಿ ಕಂಡಿಲ್ಲ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸ್ಥಳೀಯ ಶಾಸಕ ಎ.ಮಂಜುನಾಥ್, ಈ ಬಗ್ಗೆ ಅನುದಾನ ನೀಡಲಾಗಿದ್ದು, ಶೀಘ್ರವೇ ಅಭಿವೃದ್ದಿ ಕೆಲಸಗಳನ್ನ ಮಾಡಲಾಗುವುದು ಎನ್ನುತ್ತಿದ್ದಾರೆ.
9 / 23
10 / 23
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಕೂಡ ಈ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿದೆ.
11 / 23
ಜಲಾಶಯಕ್ಕೆ ಹೋಗಲು ಒಂದು ಸರಿಯಾದ ರಸ್ತೆ ವ್ಯವಸ್ಥೆ ಕೂಡ ಇಲ್ಲ. ಸುಂದರ ಜಲಾಶಯ ಅಂತಾ ಯಾರಾದರೂ ಪ್ರೇಮಿಗಳು ಹೋಗಿ ಏನಾದರೂ ಆದರೂ ಕೇಳುವವರು ಇಲ್ಲ.
12 / 23
ಅಲ್ಲದೆ ಏತ ನೀರಾವರಿ ಯೋಜನೆ ಮೂಲಕ ಜಲಾಶಯ ತುಂಬಿಸುವ ಯೋಜನೆ ಕೂಡ ಹಮ್ಮಿಕೊಳ್ಳಲಾಗಿದೆ. ಆದರೆ ಇಂತಹ ಒಂದು ಸುಂದರವಾದ ಜಲಾಶಯ ಮೂಲಭೂತ ಸೌಕರ್ಯಗಳಿಂದ ಸೊರಗುತ್ತಿದೆ.
13 / 23
ಜಲಾಶಯಕ್ಕೆ ಹೋಗಲು ಒಂದು ಸರಿಯಾದ ರಸ್ತೆ ವ್ಯವಸ್ಥೆ ಕೂಡ ಇಲ್ಲ. ಸುಂದರ ಜಲಾಶಯ ಅಂತಾ ಯಾರಾದರೂ ಪ್ರೇಮಿಗಳು ಹೋಗಿ ಏನಾದರೂ ಆದರೂ ಕೇಳುವವರು ಇಲ್ಲ.
14 / 23
ಅಂದಹಾಗೆ ಮಾಗಡಿ ತಾಲೂಕಿನ ವೈ ಜಿ ಗುಡ್ಡ ಜಲಾಶಯ ಈ ಹಿಂದೆ ಬಹುತೇಕವಾಗಿ ಭರ್ತಿಯಾಗುತ್ತಿರಲಿಲ್ಲ. ಆದರೆ ಈ ಬಾರಿ ನಿರಂತರವಾಗಿ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯ ಇದೀಗ ಸಂಪೂರ್ಣವಾಗಿ ಭರ್ತಿಯಾಗಿದೆ.
15 / 23
ಜಲಾಶಯವನ್ನ ಅಭಿವೃದ್ದಿಪಡಿಸಿ, ಮೂಲಭೂತ ಸೌಕರ್ಯಗಳನ್ನ ಒದಗಿಸಿ ಪ್ರವಾಸಿಗರನ್ನ ಸೆಳೆಯುವ ಕೆಲಸವನ್ನ ಜಿಲ್ಲಾಡಳಿತ ಕೂಡ ಮಾಡಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೂ ಕೂಡ ಕಾರಣವಾಗಿದ್ದು, ಜಲಾಶಯವನ್ನ ಅಭಿವೃದ್ದಿಪಡಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
16 / 23
ಸಿಲಿಕಾನ್ ಸಿಟಿ ಜನರಿಗೆ ಏನು ರಾಮನಗರ ಜಿಲ್ಲೆಯ ಬಹುತೇಕರಿಗೆ ಇಂತಹ ಒಂದು ಸುಂದರ ಜಲಾಶಯದ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ನಿರ್ಜನ ಪ್ರದೇಶವಾಗಿ ಜಲಾಶಯ ಮಾರ್ಪಟ್ಟಿದೆ.
17 / 23
ಆದರೆ ವಿಪರ್ಯಾಸವೆಂದರೆ ಇಂತಹ ಒಂದು ಜಲಾಶಯ ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿ ಇದೆ ಎಂಬುದು ಬಹುತೇಕ ಮಂದಿಗೆ ತಿಳಿದೆ ಇಲ್ಲ.
18 / 23
ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಹ ಜಲಾಶಯ -ವೈ ಜಿ ಗುಡ್ಡ ಜಲಾಶಯ
19 / 23
ನಿರಂತರ ಮಳೆಗೆ ಸಂಪೂರ್ಣವಾಗಿ ಭರ್ತಿ ಆಗಿರೋ ಡ್ಯಾಂ.
20 / 23
ಸುತ್ತಲೂ ಹಚ್ಚಹಸಿರು, ಬೆಟ್ಟಗುಡ್ಡಗಳು, ಪ್ರಶಾಂತವಾದ ವಾತವರಣ ಜಲಾಶಯದ ಸೌಂದರ್ಯವನ್ನ ಮತ್ತಷ್ಟು ಹೆಚ್ಚಿಸಿದೆ.
21 / 23
ಹೌದು ಕೆಲ ತಿಂಗಳುಗಳ ಹಿಂದೆ ಸುರಿದ ಧಾರಕಾರ ಮಳೆಗೆ ವೈ ಜಿ ಗುಡ್ಡ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿ ಕಂಗೊಳಿಸುತ್ತಿದೆ.
22 / 23
ಆದರೂ ಪ್ರವಾಸಿಗರಿಗೆ ಹೇಳಿ ಮಾಡಿಸಿರುವಂತಹ ಜಲಾಶಯಕ್ಕೆ, ಮೂಲಭೂತ ಸೌಕರ್ಯಗಳೇ ಇಲ್ಲ. ಸುತ್ತಲು ಹಚ್ಚಹಸಿರಿನಿಂದ ಕಂಗೋಳಿಸುತ್ತಿರೋ ಬೆಟ್ಟಗುಡ್ಡಗಳು. ಬೆಟ್ಟಗುಡ್ಡಗಳ ನಡುವೆ ನಿರ್ಮಾಣಗೊಂಡಿರೋ ಜಲಾಶಯ.
23 / 23
ಆದರೆ ಇಂತಹ ಒಂದು ಜಲಾಶಯ ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿ ಇದೆ ಎಂಬುದು ಎಷ್ಟೋ ಜನರಿಗೆ ಗೊತ್ತಿಲ್ಲ. (ವರದಿ: ಪ್ರಶಾಂತ್ ಹುಲಿಕೆರೆ, ಟಿವಿ 9, ರಾಮನಗರ)