- Kannada News Photo gallery PM Modi inaugurates Dawoodi Bohra Community' s Arabic academy Aljamea tus Saifiyah
ಮುಂಬೈನಲ್ಲಿ ದಾವೂದಿ ಬೋಹ್ರಾ ಮುಸ್ಲಿಮರ ಶಿಕ್ಷಣ ಸಂಸ್ಥೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
Dawoodi Bohra Muslims: ದಾವೂದಿ ಬೊಹ್ರಾ ಸಮುದಾಯದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಅಲ್ಜಮಿಯಾ-ತುಸ್-ಸೈಫಿಯಾ ಅರೇಬಿಕ್ ಅಕಾಡೆಮಿಯ ಮುಂಬೈ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು.
Updated on:Feb 10, 2023 | 8:24 PM

ದಾವೂದಿ ಬೋಹ್ರಾ ಮುಸ್ಲಿಮರ ಶಿಕ್ಷಣ ಸಂಸ್ಥೆಯ ಹೊಸ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದ್ದಾರೆ

ಮುಂಬೈನ ಅತ್ಯಂತ ಪ್ರಭಾವಿ ಸಮುದಾಯಗಳಲ್ಲಿ ಒಂದಾಗಿದೆ ದಾವೂದಿ ಬೋಹ್ರಾ

ಉಪನಗರ ಅಂಧೇರಿಯ ಮರೋಲ್‌ನಲ್ಲಿರುವ ಅಲ್ಜಮಿಯಾ-ತುಸ್-ಸೈಫಿಯಾ (ದಿ ಸೈಫೀ ಅಕಾಡೆಮಿ) ಹೊಸ ಕ್ಯಾಂಪಸ್ನಲ್ಲಿ ಮೋದಿ

ಉದ್ಘಾಟನಾ ಸಮಾರಂಭದಲ್ಲಿ ಕುಟುಂಬದ ಸದಸ್ಯನಾಗಿ ಭಾಗವಹಿಸುತ್ತಿದ್ದೇನೆ, "ಪ್ರಧಾನಿಯಾಗಿ ಅಲ್ಲ" ಎಂದ ಮೋದಿ.

ಬೋಹ್ರಾ ಮುಸ್ಲಿಂ ಸಮುದಾಯದೊಂದಿಗೆ ಮೋದಿ ನಿಕಟ ಸಂಬಂಧ ಹೊಂದಿದ್ದಾರೆ

ಇಂದು ಅಲ್ಜಮಿಯಾ-ತುಸ್-ಸೈಫಿಯಾ ಉದ್ಘಾಟನೆಯು ಬದಲಾಗುತ್ತಿರುವ ಕಾಲದೊಂದಿಗೆ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಮೋದಿ ಹೇಳಿದ್ದಾರೆ.

ದಾವೂದಿ ಬೋಹ್ರಾ ಸಮುದಾಯವು ಕಾಲಾನಂತರದಲ್ಲಿ ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ ಎಂದ ಪ್ರಧಾನಿ

ಸಮುದಾಯದ ಕಲಿಕೆಯ ಸಂಪ್ರದಾಯಗಳು ಮತ್ತು ಸಾಹಿತ್ಯ ಸಂಸ್ಕೃತಿಯನ್ನು ರಕ್ಷಿಸಲು ದಿ ಸೈಫೀ ಅಕಾಡೆಮಿ ಕಾರ್ಯನಿರ್ವಹಿಸುತ್ತದೆ.

ನಿಮ್ಮೆಲ್ಲರ ಬಳಿಗೆ ಬಂದಿರುವುದು ಒಂದು ಕುಟುಂಬಕ್ಕೆ ಬಂದಂತೆ ಭಾಸವಾಗುತ್ತಿದೆ. ನಾನು ಇಂದು ನಿಮ್ಮ ವಿಡಿಯೊ ನೋಡಿದೆ.ನೀವು ಪ್ರಧಾನಿ ಅಥವಾ ಮುಖ್ಯಮಂತ್ರಿ ಎಂದು ಪದೇ ಪದೇ ಹೇಳುತ್ತೀರಿ. ನಾನು ನಿಮ್ಮ ಕುಟುಂಬದ ಸದಸ್ಯ: ಪ್ರಧಾನಿ ಮೋದಿ

ನಾನು ಅದೃಷ್ಟಶಾಲಿ. ನಾನು 4 ತಲೆಮಾರುಗಳಿಂದ ಈ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದೇನೆ. ಎಲ್ಲಾ 4 ತಲೆಮಾರುಗಳು ನನ್ನ ಮನೆಗೆ ಭೇಟಿ ನೀಡಿವೆ ಎಂದು ಮೋದಿ ಹೇಳಿದ್ದಾರೆ.

ಮಾತೃಭಾಷೆಯಲ್ಲಿ ಕಲಿಯಲು ಅವಕಾಶ ಕಲ್ಪಿಸುವ ಮೂಲಕ ಕೇಂದ್ರವು ಶಿಕ್ಷಣದಲ್ಲಿ ಮಹತ್ವದ ಬದಲಾವಣೆ ತಂದಿದೆ: ಪ್ರಧಾನಿ ನರೇಂದ್ರ ಮೋದಿ

2019 ರಲ್ಲಿ ತಮ್ಮ ಅಮೆರಿಕ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಹೂಸ್ಟನ್‌ನಲ್ಲಿ ದಾವೂದಿ ಬೋಹ್ರಾ ಸಮುದಾಯದ ಸದಸ್ಯರನ್ನು ಭೇಟಿಯಾಗಿ ಸಂವಾದ ನಡೆಸಿದ್ದರು

ದಾವೂದಿ ಬೊಹ್ರಾ ಸಮುದಾಯವು ಕಾಲಾನಂತರದಲ್ಲಿ ಬದಲಾವಣೆ ಮತ್ತು ಅಭಿವೃದ್ಧಿಯ ಪರೀಕ್ಷೆಯಲ್ಲಿ ಗೆದ್ದಿದೆ ಎಂದ ಪ್ರಧಾನಿ

ಆಕಾಂಕ್ಷೆಗಳ ಹಿಂದೆ ಒಳ್ಳೆಯ ಉದ್ದೇಶವಿದ್ದಾಗ, ಫಲಿತಾಂಶಗಳು ಯಾವಾಗಲೂ ಧನಾತ್ಮಕವಾಗಿರುತ್ತವೆ. ಅಲ್ಜಮಿಯಾ-ತುಸ್-ಸೈಫಿಯಾ ಇದಕ್ಕೆ ಉದಾಹರಣೆ- ಮೋದಿ

ಮುಂಬೈನಲ್ಲಿ ಶುಕ್ರವಾರ ಅರೇಬಿಕ್ ಅಕಾಡೆಮಿಯನ್ನು ಉದ್ಧಾಟಿಸುವ ಮೂಲಕ ಬೋಹ್ರಾ ಸಮುದಾಯದೊಂದಿಗಿನ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ
Published On - 8:21 pm, Fri, 10 February 23



