ಪ್ರಧಾನಿ ನರೇಂದ್ರ ಮೋದಿ, ವಿರಾಟ್ ಕೊಹ್ಲಿ ಗಡ್ಡದ ಗೆಟಪ್​ಗೆ ಇದೆ ಸಾಮ್ಯತೆ! ಏನಿದು ಕುತೂಹಲಕರ ವಿಚಾರ?

Edited By:

Updated on: May 03, 2022 | 7:15 PM

PM Narendra Modi | Virat Kohli | Beard Look: ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಯುರೋಪ್ ಪ್ರವಾಸದಲ್ಲಿದ್ದಾರೆ. ಈಗಿನ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ. ಲಾಕ್​ಡೌನ್ ಸಂದರ್ಭದಲ್ಲಿ ಉದ್ದನೆಯ ಗಡ್ಡದ ಗೆಟಪ್​ನಲ್ಲಿ ಸುದ್ದಿಯಾಗಿದ್ದ ಮೋದಿ, ಇದೀಗ ಟ್ರಿಮ್ ಮಾಡಿ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕುತೂಹಲಕರ ವಿಚಾರವೆಂದರೆ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಕೂಡ ಈಗ ಅಂಥದ್ದೇ ಗಡ್ಡದ ಲುಕ್ ಹೊಂದಿರೋದು! ಫೋಟೋಗಳು ಇಲ್ಲಿವೆ.

1 / 10
ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಯುರೋಪ್ ಪ್ರವಾಸದಲ್ಲಿದ್ದಾರೆ. ಈಗಿನ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ. ಲಾಕ್​ಡೌನ್ ಸಂದರ್ಭದಲ್ಲಿ ಉದ್ದನೆಯ ಗಡ್ಡದ ಗೆಟಪ್​ನಲ್ಲಿ ಎಲ್ಲರ ಗಮನ ಸೆಳೆದಿದ್ದ ಮೋದಿ, ಇದೀಗ ಟ್ರಿಮ್ ಮಾಡಿ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕುತೂಹಲಕರ ವಿಚಾರವೆಂದರೆ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಕೂಡ ಈಗ ಅಂಥದ್ದೇ ಗಡ್ಡದ ಲುಕ್ ಹೊಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಯುರೋಪ್ ಪ್ರವಾಸದಲ್ಲಿದ್ದಾರೆ. ಈಗಿನ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ. ಲಾಕ್​ಡೌನ್ ಸಂದರ್ಭದಲ್ಲಿ ಉದ್ದನೆಯ ಗಡ್ಡದ ಗೆಟಪ್​ನಲ್ಲಿ ಎಲ್ಲರ ಗಮನ ಸೆಳೆದಿದ್ದ ಮೋದಿ, ಇದೀಗ ಟ್ರಿಮ್ ಮಾಡಿ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕುತೂಹಲಕರ ವಿಚಾರವೆಂದರೆ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಕೂಡ ಈಗ ಅಂಥದ್ದೇ ಗಡ್ಡದ ಲುಕ್ ಹೊಂದಿದ್ದಾರೆ.

2 / 10

ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ, ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ಸದ್ಯ ಐಪಿಎಲ್ 2022ರಲ್ಲಿ ಸಕ್ರಿಯರಾಗಿದ್ದಾರೆ. ಫಿಟ್​ನೆಸ್​ ಜತೆಗೆ ಫ್ಯಾಶನ್​ನಲ್ಲೂ ವಿರಾಟ್ ಕೊಹ್ಲಿ ಟ್ರೆಂಡ್ ಸೆಟ್ಟರ್. ಅವರು ಹಲವು ಮಾದರಿಯ ಗಡ್ಡದ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ.

3 / 10

ಪ್ರಸ್ತುತ ವಿರಾಟ್ ಈ ಮಾದರಿಯಲ್ಲಿ ಗಡ್ಡವನ್ನು ವಿನ್ಯಾಸಗೊಳಿಸಿದ್ದು, ಫ್ಯಾಶನ್ ಪ್ರಿಯರ ಮನಗೆದ್ದಿದ್ದಾರೆ..

4 / 10

ಇತ್ತೀಚೆಗೆ ಸಹ ಆಟಗಾರ ಮ್ಯಾಕ್ಸ್​​ವೆಲ್ ಅವರ ವಿವಾಹದ ಪಾರ್ಟಿಯಲ್ಲಿ ಕುರ್ತಾ ಧರಿಸಿ ಟ್ರೆಡಿಷನಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ಸಖತ್ ಸುದ್ದಿಯಾಗಿದ್ದರು. ವಿಶೇಷವೆಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಈಗಿನ ಗೆಟಪ್​ಗೂ, ವಿರಾಟ್ ಕೊಹ್ಲಿ ಈಗಿನ ಗೆಟಪ್​ಗೂ ಸಖತ್ ಸಾಮ್ಯತೆ ಇದೆ!

5 / 10

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಸ್ತುತ ಯುರೋಪ್ ಪ್ರವಾಸದಲ್ಲಿದ್ದಾರೆ. ಇದರಲ್ಲಿ ಅವರು ತಮ್ಮ ಕೆನ್ನೆಯ ಮೇಲಿನ ಗಡ್ಡವನ್ನು ತುಸು ಹೆಚ್ಚು ಕಟ್ ಮಾಡಿಸಿದ್ದು, ಗಲ್ಲದ ಕಡೆ ತುಸು ಉದ್ದ ಬಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಲುಕ್ ಕೂಡ ಹೀಗೆಯೇ ಇದೆ.

6 / 10

ಸೆಲೆಬ್ರಿಟಿಗಳು ಒಂದೇ ಮಾದರಿಯ ಗಡ್ಡ ಅಥವಾ ಕೇಶ ವಿನ್ಯಾಸವನ್ನು ಹೊಂದಿರೋದು ಅಪರೂಪವೇನಲ್ಲ. ಆದರೆ ಈ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಭಾರತದ ಈರ್ವರು ತಾರೆಯರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿರಾಟ್ ಕೊಹ್ಲಿಯವರ ಗಡ್ಡದ ಗೆಟಪ್ ಒಂದೇ ರೀತಿ ಇರೋದು ವಿಶೇಷ.

7 / 10

ನರೇಂದ್ರ ಮೋದಿಯವರು ತಮ್ಮ ದಿರಿಸು ಹಾಗೂ ಲುಕ್​ಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಅವರು ಪ್ರಧಾನಿಯಾದ ನಂತರದಲ್ಲಿ ಈ ಬಗ್ಗೆ ಹೆಚ್ಚಿನ ಚರ್ಚೆಗಳೂ ನಡೆದಿವೆ. ಈ ಚಿತ್ರದಲ್ಲಿ 2021ರ ಏಪ್ರಿಲ್​ ಸಮಯದಲ್ಲಿ ಅವರು ಯಾವ ಲುಕ್ ಹೊಂದಿದ್ದರು ಎಂದು ನೀವು ಗಮನಿಸಬಹುದು.

8 / 10

2020ರ ಅಕ್ಟೋಬರ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಮಾದರಿಯಲ್ಲಿ ಗಡ್ಡವನ್ನು ಬಿಟ್ಟಿದ್ದರು.

9 / 10

ಪ್ರಧಾನಿಯಾಗುವ ಬಹಳ ಕಾಲದ ಹಿಂದೆ ನರೇಂದ್ರ ಮೋದಿ ಹೇಗಿದ್ದರು? ಈ ಚಿತ್ರದಲ್ಲಿ 1998ರಲ್ಲಿ ಹೇಗಿದ್ದರು ಎಂಬುದನ್ನು ನೀವು ನೋಡಬಹುದು.

10 / 10

1995ರ ಸಮಯದಲ್ಲಿ ಮೋದಿಯವರು ಹೀಗಿದ್ದರು.

Published On - 7:12 pm, Tue, 3 May 22

Loading...
Unable to load recommendations.
Follow Us