- Kannada News Photo gallery PM Narendra Modi, French President Emmanuel Macron meet at Jantar Mantar in Jaipur
ಜೈಪುರದಲ್ಲಿ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್-ನರೇಂದ್ರ ಮೋದಿ ರೋಡ್ ಶೋ
ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಜನವರಿ 25 ರಂದು ಜಂತರ್ ಮಂತರ್‌ನಲ್ಲಿ ತಮ್ಮ ರೋಡ್‌ಶೋಗೆ ಮುಂಚಿತವಾಗಿ ಭೇಟಿಯಾದರು. ಮ್ಯಾಕ್ರನ್ ಅವರು ಅಂಬರ್ ಕೋಟೆಗೆ ಭೇಟಿ ನೀಡಿದ ನಂತರ ಮೋದಿ ಅಲ್ಲಿಗೆ ಬಂದಿದ್ದು ಉಭಯ ನಾಯಕರು ಅಲ್ಲಿ ಭೇಟಿಯಾಗಿ ಪರಸ್ಪರ ಆಲಿಂಗನ ಮಾಡಿದರು.ನಂತರ ಅವರು ವೀಕ್ಷಣಾಲಯಕ್ಕೆ ಭೇಟಿ ನೀಡಿದರು. ಮೋದಿ ಮತ್ತು ಮ್ಯಾಕ್ರನ್ ಭೇಟಿಯ ಚಿತ್ರಗಳು ಇಲ್ಲಿವೆ
Updated on: Jan 25, 2024 | 8:43 PM

ರಾಜಸ್ಥಾನದ ಜೈಪುರಕ್ಕೆ ಗುರುವಾರ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಆಗಮಿಸಿದ್ದು, ಅವರಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ

ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವ ಮ್ಯಾಕ್ರನ್ ಗುರುವಾರ ಮಧ್ಯಾಹ್ನ 2.10 ರ ಸುಮಾರಿಗೆ ಜೈಪುರಕ್ಕೆ ಬಂದಿದ್ದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಮತ್ತು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರನ್ನು ಬರಮಾಡಿಕೊಂಡರು.

ವಿಮಾನ ನಿಲ್ದಾಣದಿಂದ ಮ್ಯಾಕ್ರನ್ ನೇರವಾಗಿ ಅಂಬರ್ ಕೋಟೆಗೆ ಹೋದರು. ಅಲ್ಲಿ ಅವರು ಎರಡು ಗಂಟೆಗಳ ಕಾಲ ಕಳೆದಿದ್ದಾರೆ

ಅಂಬರ್ ಕೋಟೆಯಲ್ಲಿ ಫ್ರೆಂಚ್ ಅಧ್ಯಕ್ಷರನ್ನು ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ ಸ್ವಾಗತಿಸಿದರು.ಮ್ಯಾಕ್ರನ್ ಅಲ್ಲಿ ಶಾಲಾ ಮಕ್ಕಳ ಜತೆ ಸಂವಾದ ನಡೆಸಿದ್ದು, ಮಕ್ಕಳು ಫ್ರಾನ್ಸ್ ಅಧ್ಯಕ್ಷರೊಂದಿಗೆ ಸೆಲ್ಫಿ ತೆಗೆದುಕೊಂಡರು.

ಮೋದಿ ಸಂಜೆ 4.30 ಕ್ಕೆ ಜೈಪುರ ತಲುಪಿದ್ದುಉಭಯ ನಾಯಕರು ತೆರೆದ ಜೀಪ್‌ನಲ್ಲಿ ಟ್ರಿಪೋಲಿಯಾ ಗೇಟ್‌ನಿಂದ ಬಡೀ ಚೌಪಾದ್‌ಗೆ ತಮ್ಮ ರೋಡ್‌ಶೋ ಅನ್ನು ಪ್ರಾರಂಭಿಸಿದರು

1799 ರಲ್ಲಿ ಸವಾಯಿ ಪ್ರತಾಪ್ ಸಿಂಗ್ ನಿರ್ಮಿಸಿದ ಜಗತ್ಪ್ರಸಿದ್ಧ ಹವಾ ಮಹಲ್‌ನಲ್ಲಿ, ಜೈಪುರದ ಪ್ರಸಿದ್ಧ ಸಾಹು ಟೀ ಸ್ಟಾಲ್‌ನಲ್ಲಿ ಮೋದಿ ಮತ್ತು ಮ್ಯಾಕ್ರನ್ ಮಸಾಲಾ ಚಹಾವನ್ನು ಸೇವಿಸಿದರು.

ಹವಾ ಮಹಲ್‌ನಿಂದ, ನಾಯಕರು ಆಲ್ಬರ್ಟ್ ಹಾಲ್ ವಸ್ತುಸಂಗ್ರಹಾಲಯಕ್ಕೆ ತೆರಳಿದರು.ಅಲ್ಲಿ ಅವರು 1887 ರಲ್ಲಿ ಬ್ರಿಟಿಷ್ ಸೇನಾ ಅಧಿಕಾರಿ ಮತ್ತು ಇಂಜಿನಿಯರ್ ಸ್ಯಾಮ್ಯುಯೆಲ್ ಸ್ವಿಂಟನ್ ಜಾಕೋಬ್ ನಿರ್ಮಿಸಿದ ವಸ್ತುಸಂಗ್ರಹಾಲಯವನ್ನು ವೀಕ್ಷಿಸಿದರು.

ನರೇಂದ್ರ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ರಾಮಮಂದಿರದ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ



