Modi in Ukraine: ಪೋಲೆಂಡ್​ನಿಂದ ಉಕ್ರೇನ್‌ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಇಂದು ಸಂಜೆ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಮಾತುಕತೆ

|

Updated on: Aug 23, 2024 | 2:50 PM

2 ದಿನಗಳ ಕಾಲ ಪೋಲೆಂಡ್ ಪ್ರವಾಸದಲ್ಲಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸಂಜೆ ಅಲ್ಲಿಂದ ವಿಶೇಷ ರೈಲಿನಲ್ಲಿ ಉಕ್ರೇನ್​ಗೆ ಹೊರಟಿದ್ದರು. ಇಂದು ಅವರು ಉಕ್ರೇನ್ ತಲುಪಿದ್ದಾರೆ. ಇಂದು ಸಂಜೆ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

1 / 8
ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಪೋಲೆಂಡ್​ನಿಂದ ಉಕ್ರೇನ್ ರಾಜಧಾನಿ ಕೈವ್​ಗೆ ಬಂದಿಳಿದಿದ್ದಾರೆ.

2 / 8
ಎರಡು ದಿನಗಳ ಪೋಲೆಂಡ್ ಭೇಟಿಯನ್ನು ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಹು ನಿರೀಕ್ಷಿತ ಪ್ರವಾಸಕ್ಕಾಗಿ ಉಕ್ರೇನ್‌ಗೆ ತೆರಳಿದ್ದಾರೆ. ಅವರು ಉಕ್ರೇನಿಯನ್ ಪಿಎಂ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

3 / 8
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಯುದ್ಧ ಪೀಡಿತದ ದೇಶವಾದ ಉಕ್ರೇನ್​ಗೆ ತೆರಳಿದ್ದಾರೆ.

4 / 8
ರಷ್ಯಾಕ್ಕೆ ಭೇಟಿ ನೀಡಿದ ಸುಮಾರು 6 ವಾರಗಳ ನಂತರ ಪ್ರಧಾನಿ ಮೋದಿ ಅವರು ಉಕ್ರೇನ್​ಗೆ ಭೇಟಿ ನೀಡಿದ್ದಾರೆ. ಇದು ಉಕ್ರೇನ್‌ಗೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯೆಂಬುದು ವಿಶೇಷ.

5 / 8
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಇನ್ನೂ ಖಂಡಿಸಿಲ್ಲವಾದರೂ, ಪಿಎಂ ಮೋದಿ ಯುದ್ಧಭೂಮಿಯಲ್ಲಿ ಯಾವ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ ಎಂದು ಹೇಳುವ ಮೂಲಕ ರಷ್ಯಾಗೆ ಶಾಂತಿ ಸಂಧಾನದ ಸಲಹೆ ನೀಡಿದ್ದಾರೆ.

6 / 8
"ಇಂದು ಬೆಳಿಗ್ಗೆ ಕೈವ್ ತಲುಪಿದೆ. ಅಲ್ಲಿನ ಭಾರತೀಯ ಸಮುದಾಯವು ತುಂಬಾ ಆತ್ಮೀಯ ಸ್ವಾಗತವನ್ನು ನೀಡಿದೆ" ಎಂದು ನರೇಂದ್ರ ಮೋದಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

7 / 8
ಪೋಲೆಂಡ್‌ನಿಂದ ಟ್ರಯಲ್ ಫೋರ್ಸ್ ಒನ್‌ನಲ್ಲಿ 10 ಗಂಟೆಗಳ ಪ್ರಯಾಣದ ನಂತರ ಪ್ರಧಾನಿ ಮೋದಿ ಇಂದು ಯುದ್ಧ ಪೀಡಿತ ಉಕ್ರೇನ್‌ಗೆ ಆಗಮಿಸಿದರು.

8 / 8
ಅವರ ಆಗಮನದ ನಂತರ, ಅವರನ್ನು ಕೈವ್ ಸೆಂಟ್ರಲ್ ಸ್ಟೇಷನ್‌ನಲ್ಲಿ ಸ್ವಾಗತಿಸಲಾಯಿತು. ಅಲ್ಲಿಂದ ಅವರನ್ನು ಹಯಾತ್ ಹೋಟೆಲ್‌ಗೆ ಕರೆದೊಯ್ಯಲಾಯಿತು.

Published On - 2:49 pm, Fri, 23 August 24