ಚಿನ್ನದ ರಾಜದಂಡದೊಂದಿಗೆ ನೂತನ ಸಂಸತ್ ಭವನ ಪ್ರವೇಶಿಸಿದ ಪ್ರಧಾನಿ ಮೋದಿ

Edited By:

Updated on: May 28, 2023 | 9:23 AM

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ತುಂಬಿದ ಬೆನ್ನಲ್ಲೇ ಆಧುನಿಕ ಸ್ಪರ್ಶದೊಂದಿಗೆ ಹೊಸ ಸಂಸತ್‌ ಭವನ ಲೋಕಾರ್ಪಣೆಯಾಗಿದೆ. ಇನ್ನು, ಐತಿಹಾಸಿಕ ರಾಜದಂಡ ಅಥವಾ ಚಿನ್ನದ ಸೆಂಗೋಲ್‌ ಅನ್ನೂ ಸಹ ಮೋದಿ ಪ್ರತಿಷ್ಠಾಪನೆ ಮಾಡಿದರು.

1 / 9
ಸೆಂಗೋಲ್‌ ಪ್ರತಿಷ್ಠಾಪಿಸಿದ ಮೋದಿ

ಸೆಂಗೋಲ್‌ ಪ್ರತಿಷ್ಠಾಪಿಸಿದ ಮೋದಿ

2 / 9

ಈಗಾಗಲೇ ನಿನ್ನೆಯೇ ತಮಿಳುನಾಡಿನ ವಿವಿಧ ಅಧೀನಂ ಮಠದ ಪೀಠಾಧಿಪತಿಗಳು ಸೆಂಗೋಲ್ ಅನ್ನು ಪ್ರಧಾನಿ ನರೇಂದ್ರ ಮೋದಿಗೆ ಹಸ್ತಾಂತರಿಸಿದ್ದರು.

3 / 9

ತಮಿಳುನಾಡಿನ ವಿವಿಧ ಅಧೀನಂ ಮಠದ ಪೀಠಾಧಿಪತಿಗಳು ನೀಡಿದ್ದ ಸೆಂಗೋಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಿಡಿದು ನೂತನ ಸಂಸತ್ ಭವನ ಪ್ರವೇಶಿಸಿದರು.

4 / 9

ನೂತನ ಸಂಸತ್ ಭವನದಲ್ಲಿರುವ ಲೋಕಸಭಾ ಸ್ಪೀಕರ್ ಆಸನದ ಪಕ್ಕದಲ್ಲಿ ಸೆಂಗೋಲ್ ಚಿನ್ನದ ರಾಜದಂಡವನ್ನು ಪ್ರಧಾನಿ ಪ್ರಧಾನಿ ನರೇಂದ್ರ ಅವರು ತಿಷ್ಠಾಪನೆ ಮಾಡಿದರು.

5 / 9

ಈ ವೇಳೆ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು.

6 / 9

ಸೆಂಗೋಲ್.. ಚೋಳದ ಕಾಲದ ಅಧಿಕಾರ ಹಸ್ತಾಂತರ ಪದ್ಧತಿಯ ಪ್ರತೀಕವಾಗಿದೆ. ಸೆಂಗೋಲ್ ಅಂದ್ರೆ ರಾಜದಂಡ ಎಂದರ್ಥ. ಸೆಂಗೋಲ್ ಅಥ್ವಾ ರಾಜದಂಡಕ್ಕೆ ಬಹಳ ಐತಿಹಾಸಿಕ ಹಿನ್ನೆಲೆ ಇದೆ.

7 / 9

ಅಧಿಕಾರ ಹಸ್ತಾಂತರಕ್ಕೆ ಜೋಳರು ರಾಜದಂಡವನ್ನೇ ಬಳಸ್ತಿದ್ರು. ತಮಿಳುನಾಡಿನ ಚೋಳ ಸಾಮ್ರಾಜ್ಯದಲ್ಲಿ ಓರ್ವ ರಾಜನಿಂದ ಮತ್ತೊಬ್ಬ ರಾಜನಿಗೆ ಅಧಿಕಾರ ಹಸ್ತಾಂತರಿಸಲು ರಾಜದಂಡ ಬಳಸಲಾಗ್ತಿತ್ತು. ಆಗಿನ ಕಾಲದ ಶ್ರೇಷ್ಠ ಸನ್ಯಾಸಿಗಳು ಆಶೀರ್ವಾದ ಮಾಡಿ ರಾಜನಿಗೆ ಸೆಂಗೋಲ್ ಅನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡ್ತಿದ್ರು.

8 / 9

ತಮಿಳುನಾಡಿನಲ್ಲೇ ಚೋಳ ಸಾಮ್ರಾಜ್ಯದಲ್ಲಿ ಅಧಿಕಾರ ಹಸ್ತಾಂತರಕ್ಕೆ ಬಳಕೆಯಾಗ್ತಿದ್ದ ಸೆಂಗೋಲ್

9 / 9

1947ರ ಆಗಸ್ಟ್ 14ರ ಈ ರಾಜದಂಡವನ್ನು ಮೊದಲು ಲಾರ್ಡ್ ಮೌಂಟ್​ಬ್ಯಾಟನ್ ಕೈಯಲ್ಲಿಟ್ಟು ಮತ್ತೆ ವಾಪಸ್ ಪಡೆಯಲಾಗಿತ್ತು. ಬಳಿಕ ಗಂಗಾಜಲದಿಂದ ಶುದ್ಧೀಕರಿಸಿ, ಮಂತ್ರಘೋಷಗಳ ಜೊತೆಗೆ ಸೆಂಗೋಲ್ ಅನ್ನು ಪಂಡಿತ್ ನೆಹರು ಸ್ವೀಕರಿಸಿದ್ರು.

Published On - 9:22 am, Sun, 28 May 23

Loading...
Unable to load recommendations.
Follow Us