- Kannada News Photo gallery Kannada News | Chhatrapati shivaji Maharaj jayanti procession in belagavi photos
Chhatrapati Shivaji Maharaj: ಕುಂದಾನಗರಿಯಲ್ಲಿ ಕಣ್ಮನ ಸೆಳೆದ ಅದ್ಧೂರಿ ಶಿವಾಜಿ ಜಯಂತಿ ಮೆರವಣಿಗೆ
ಕುಂದಾನಗರಿ ಬೆಳಗಾವಿಯಲ್ಲಿ ರಾತ್ರಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ವೈಭವೋಪೇತ ಮೆರವಣಿಗೆ ನಡೆಯಿತು. ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಗತವೈಭವ ಸಾರುವ ರೂಪಕಗಳ ಭವ್ಯ ಮೆರವಣಿಗೆ ಬೆಳಗಿನ ಜಾವದವರೆಗೂ ನಡೆಯಿತು.
Updated on: May 28, 2023 | 8:37 AM

ಮಹಾರಾಷ್ಟ್ರ ಗೋವಾದ ಜೊತೆ ಗಡಿ ಹಂಚಿಕೊಂಡಿರುವ ಹಾಗೂ ಕನ್ನಡ ಮರಾಠಿ ಭಾಷಿಕರಿರುವ ಬೆಳಗಾವಿಯಲ್ಲಿ ಯಾವುದೇ ಹಬ್ಬ ಇರಲಿ ಜಯಂತಿ ಇರಲಿ ಅತಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಶತಮಾನದ ಇತಿಹಾಸ ಕಂಡಿರುವ ಬೆಳಗಾವಿಯ ಶಿವಾಜಿ ಜಯಂತಿ ಮೆರವಣಿಗೆ ಕಣ್ಮನ ಸೆಳೆಯಿತು.

ಕುಂದಾನಗರಿ ಬೆಳಗಾವಿಯಲ್ಲಿ ರಾತ್ರಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ವೈಭವೋಪೇತ ಮೆರವಣಿಗೆ ನಡೆಯಿತು. ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಗತವೈಭವ ಸಾರುವ ರೂಪಕಗಳ ಭವ್ಯ ಮೆರವಣಿಗೆ ಬೆಳಗಿನ ಜಾವದವರೆಗೂ ನಡೆಯಿತು.

ಕುಂದಾನಗರಿ ಬೆಳಗಾವಿಯಲ್ಲಿ ವೈಭವೋಪೇತ ಶಿವಜಯಂತಿ ಮೆರವಣಿಗೆ ದೃಶ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮೇ 27ರ ಸಂಜೆ 6 ಗಂಟೆ ಸುಮಾರಿಗೆ ಬೆಳಗಾವಿಯ ನರಗುಂದಕರ ಭಾವೆ ಚೌಕ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಶೋಭಾ ಸೋಮನಾಚೆ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿದರು.

ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿರುವ ವಿವಿಧ ಯುವಕ ಮಂಡಳಗಳು ಸಂಘ ಸಂಸ್ಥೆಗಳ ನೇತೃತ್ವದಲ್ಲಿ 300ಕ್ಕೂ ಅಧಿಕ ಕಲಾ ತಂಡಗಳು, ರೂಪಕಗಳು ಮೆರವಣಿಗೆಯಲ್ಲಿ ಕಣ್ಮನ ಸೆಳೆದವು.

ವೈಭವೋಪೇತ ಮೆರವಣಿಗೆ ಶಿವಚರಿತ್ರೆ ಕಟ್ಟಿಕೊಟ್ಟಿತು. ಛತ್ರಪತಿ ಶಿವಾಜಿ ಮಹಾರಾಜರ ಬಾಲ್ಯಜೀವನ, ಅವರು ಕಲಿತ ಯುದ್ಧ ಕಲೆ, ಪಟ್ಟಾಭಿಷೇಕ, ಕೋಟೆಗಳನ್ನು ಗೆದ್ದು ರಾಜ್ಯಭಾರ ಮಾಡಿದ ಪ್ರಸಂಗ, ರಾಜ ತಾಂತ್ರಿಕತೆ,

ಛತ್ರಪತಿ ಶಿವಾಜಿ ಮಹಾರಾಜರ ಆಡಳಿತ ದರ್ಬಾರ್, ಅಫಜಲ್ ಖಾನ್‌ನನ್ನ ಜಾಣ್ಮೆಯಿಂದ ವಧಿಸಿದ ದೃಶ್ಯ, ಜೀಜಾಮಾತೆ ಮಾರ್ಗದರ್ಶನ ದೃಶ್ಯ ಹೀಗೆ ಹತ್ತು ಹಲವು ಘಟನಾವಳಿಗಳು ಮೆರವಣಿಗೆಯುದ್ಧಕ್ಕೂ ಭಾಗಿಯಾದ ರೂಪಕಗಳಲ್ಲಿ ಕಂಡು ಬಂತು.

ಮಕ್ಕಳನ್ನು ಕರೆದುಕೊಂಡು ಬಂದಿದ್ದ ಸಹಸ್ರಾರು ಜನ ಭಾಗವಹಿಸಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಮಕ್ಕಳಿಗೆ ತಿಳಿಯಲಿ ಅಂತಾ ಕರೆದುಕೊಂಡು ಬಂದಿದ್ದಾಗಿ ಮೆರಣಿಗೆಗೆ ಆಗಮಿಸಿದ್ದ ಬೆಳಗಾವಿ ನಿವಾಸಿ ವೈಶಾಲಿ ತಿಳಿಸಿದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ನೇತೃತ್ವದಲ್ಲಿ ಎರಡು ಸಾವಿರಕ್ಕೂ ಅಧಿಕ ಪೊಲೀಸರು ನಿಯೋಜನೆಗೊಂಡಿದ್ದರು.

ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಸಾರುವ ಶಿವಜಯಂತಿ ಮೆರವಣಿಗೆ ಕಣ್ಮನ ಸೆಳೆದಿದ್ದು ಮೆರವಣಿಗೆ ಭಾರತದ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿತ್ತು.



















