ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ವಾಪಸ್ ತಂದ ಪ್ರಧಾನಿ ಮೋದಿ; ಇಲ್ಲಿವೆ ಫೋಟೋಗಳು
TV9 Web | Updated By: preethi shettigar
Updated on:
Sep 26, 2021 | 12:55 PM
ನಿನ್ನೆ ಅವರ ಅಮೆರಿಕ ಪ್ರವಾಸ ಮುಕ್ತಾಯಗೊಂಡಿದ್ದು, ಈಗಾಗಲೇ ಅಲ್ಲಿಂದ ಹೊರಟಿದ್ದಾರೆ. ಆದರೆ ಹೀಗೆ ಭಾರತಕ್ಕೆ ಬರುವಾಗ, ನಮ್ಮ ದೇಶಕ್ಕೆ ಸಂಬಂಧಪಟ್ಟ ಸುಮಾರು 157 ಪುರಾತನ ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸ್ ತರುತ್ತಿದ್ದಾರೆ ಎಂದು ಹೇಳಲಾಗಿದೆ.
1 / 5
ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಯುಎಸ್ ಪ್ರವಾಸ ಮುಗಿಸಿ, ಅಲ್ಲಿಂದ ಹೊರಟಿದ್ದಾರೆ. ನಿನ್ನೆ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ್ದರು. ಸೆಪ್ಟೆಂಬರ್ 24ರಂದು ಕ್ವಾಡ್ ಶೃಂಗಸಭೆಯಲ್ಲಿ ಮಾತನಾಡಿದ್ದರು. ನಿನ್ನೆ (ಸೆಪ್ಟೆಂಬರ್ 25) ಅವರ ಅಮೆರಿಕ ಪ್ರವಾಸ ಮುಕ್ತಾಯಗೊಂಡಿದ್ದು, ಈಗಾಗಲೇ ಅಲ್ಲಿಂದ ಹೊರಟಿದ್ದಾರೆ. ಆದರೆ ಹೀಗೆ ಭಾರತಕ್ಕೆ ಬರುವಾಗ, ನಮ್ಮ ದೇಶಕ್ಕೆ ಸಂಬಂಧಪಟ್ಟ ಸುಮಾರು 157 ಪುರಾತನ ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸ್ ತರುತ್ತಿದ್ದಾರೆ ಎಂದು ಹೇಳಲಾಗಿದೆ.
2 / 5
ಇದೀಗ ಪ್ರಧಾನಿ ಮೋದಿಯವರು ಭಾರತಕ್ಕೆ ತರಲಿರುವ ಪುರಾತನ ವಸ್ತುಗಳಲ್ಲಿ 12ನೇ ಶತಮಾನದ ಕಂಚಿನ ನಟರಾಜ ವಿಗ್ರಹ, 10ನೇ ಶತಮಾನದ ರೇವಂತ ದೇವರ ಮೂರ್ತಿಗಳು ಇವೆ. ಹೀಗೆ ವಾಪಸ್ ತರಲಾದ 45 ಕಲಾಕೃತಿಗಳು ಸಾಮಾನ್ಯ ಯುಗಕ್ಕಿಂತಲೂ ಮುಂಚಿನವು. 71 ಸಾಂಸ್ಕೃತಿಕ ಕಲಾಕೃತಿಗಳಾಗಿದ್ದು, 60 ಹಿಂದೂ ಧರ್ಮ ಬಿಂಬಕ ಕಲಾಕೃತಿಗಳಾಗಿವೆ. ಇನ್ನು 16 ಕಲಾಕೃತಿಗಳು ಬೌದ್ಧಧರ್ಮಕ್ಕೆ ಸೇರಿದ್ದಾಗಿದ್ದು, 9 ಜೈನಧರ್ಮದ್ದಾಗಿವೆ.
3 / 5
ಕಂಚಿನಿಂದ ಮಾಡಲಾದ ಲಕ್ಷ್ಮೀ ನಾರಾಯಣ ಅಲಂಕೃತ ಮೂರ್ತಿಗಳು, ಬುದ್ಧ, ವಿಷ್ಣು, ಶಿವ-ಪಾರ್ವತಿ ಮತ್ತು 24 ಜೈನ ತೀರ್ಥಂಕರ ಮೂರ್ತಿಗಳ ವಿಗ್ರಹ ಇದೆ. ದೇವರ ವಿಗ್ರಹಗಳ ಹೊರತಾಗಿಯೂ ಕೆಲವು ಸಾಂಸ್ಕೃತಿಕ ಪ್ರತಿಬಿಂಬಕ ಕಲಾಕೃತಿಗಳಿವೆ.
4 / 5
ಮೂರು ತಲೆಯ ಬ್ರಹ್ಮ, ರಥ ಚಾಲನೆ ಮಾಡುತ್ತಿರುವ ಸೂರ್ಯ, ವಿಷ್ಣು, ದಕ್ಷಿಣಾಮೂರ್ತಿಯಾಗಿರುವ ಶಿವ, ನೃತ್ಯ ಮಾಡುತ್ತಿರುವ ಗಣೇಶನ ವಿಗ್ರಹಗಳು, ತಾರ, ಜೈನ ತೀರ್ಥಂಕರ, ಪದ್ಮಾಸನ ತೀರ್ಥಂಕರ ಮತ್ತು ಜೈನ ಚೌಬಿಸಿ ಮೂರ್ತಿಗಳೂ ಇವೆ.
5 / 5
ಈ ಕಲಾಕೃತಿಗಳೆಲ್ಲ ಹಿಂದೆ ಕಳವಾಗಿ, ಯುಎಸ್ಗೆ ಸಾಗಿಸಲ್ಪಟ್ಟಿದ್ದವು. ಅದನ್ನೀಗ ಪ್ರಧಾನಿ ಮೋದಿಯವರಿಗೆ ಅಮೆರಿಕ ಹಸ್ತಾಂತರ ಮಾಡಿದೆ. ಈ ಬಗ್ಗೆ ಪ್ರಧಾನಿ ಮೋದಿಯವರೂ ಕೂಡ ತುಂಬ ಖುಷಿ ವ್ಯಕ್ತಪಡಿಸಿದ್ದಾರೆ.
Published On - 12:54 pm, Sun, 26 September 21