Kannada News Photo gallery PM Narendra Modi to inaugurate Bengaluru Kempegowda International Airport Garden Terminal on November 11
Kempegowda Airport: ಪ್ರಧಾನಿ ಮೋದಿ ಉದ್ಘಾಟಿಸಲಿರುವ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ಟರ್ಮಿನಲ್ 2 ಯಾವ ಅರಮನೆಗೂ ಕಡಿಮೆಯಿಲ್ಲ!
TV9 Web | Updated By: Digi Tech Desk
Updated on:
Nov 09, 2022 | 4:17 PM
ಸುಮಾರು 5,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಉದ್ಘಾಟನೆಗೆ ಸಜ್ಜಾಗಿದೆ. ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಉದ್ಘಾಟಿಸಲಿದ್ದಾರೆ.
1 / 12
ಸುಮಾರು 5,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಉದ್ಘಾಟನೆಗೆ ಸಜ್ಜಾಗಿದೆ.
2 / 12
ಈ ಐಷಾರಾಮಿ ಮತ್ತು ಸುಸಜ್ಜಿತ ಏರ್ಪೋರ್ಟ್ ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಉದ್ಘಾಟಿಸಲಿದ್ದಾರೆ.
3 / 12
ಇಡೀ ಭಾರತದಲ್ಲೇ ಮುಂಬೈ ಮತ್ತು ದೆಹಲಿಯನ್ನು ಹೊರತುಪಡಿಸಿದರೆ 2ನೇ ಟರ್ಮಿನಲ್ ಹೊಂದಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೆ ಹಲವು ವಿಶೇಷತೆಗಳಿಂದ ಗಮನ ಸೆಳೆದಿರುವ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.
4 / 12
ಇದರಿಂದಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ಅಂತಾರಾಷ್ಟ್ರೀಯ ವಿಮಾನಗಳ ಸಂಖ್ಯೆಯೂ ಹೆಚ್ಚಾಗಲಿದೆ.
5 / 12
ಈ ಟರ್ಮಿನಲ್ 2 ಅನ್ನು ಗಾರ್ಡನ್ ಟರ್ಮಿನಲ್ ಎಂದು ಕರೆಯಲಾಗುತ್ತಿದೆ.
6 / 12
ಉದ್ಯಾನನಗರಿಯಾದ ಬೆಂಗಳೂರಿನ ಗೌರವಾರ್ಥ ಈ ಟರ್ಮಿನಲ್ ವಿನ್ಯಾಸಗೊಳಿಸಲಾಗಿದೆ.
7 / 12
ಈ ಟರ್ಮಿನಲ್ 2 ಪ್ರಸ್ತುತ 2.5 ಕೋಟಿಯಿಂದ ವಾರ್ಷಿಕವಾಗಿ ಸುಮಾರು 5ರಿಂದ 6 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ.
8 / 12
ಟರ್ಮಿನಲ್ 2ದಲ್ಲಿ ಪ್ರಯಾಣಿಕರು 10,000 ಚದರ ಮೀಟರ್‌ಗಳಷ್ಟು ಉದ್ದದ ಹಸಿರು ಗೋಡೆಗಳು, ನೇತಾಡುವ ಉದ್ಯಾನಗಳು ಮತ್ತು ಹೊರಾಂಗಣ ಉದ್ಯಾನಗಳ ಮೂಲಕ ಪ್ರಯಾಣಿಸಬಹುದು.
9 / 12
ಈ ಉದ್ಯಾನಗಳನ್ನು ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ವಿನ್ಯಾಸ ಮಾಡಲಾಗಿದೆ. ಈ ವಿಮಾನ ನಿಲ್ದಾಣವು ಈಗಾಗಲೇ ನವೀಕರಿಸಬಹುದಾದ ಶಕ್ತಿಯ 100% ಬಳಕೆಯೊಂದಿಗೆ ಸುಸ್ಥಿರತೆಯ ಮಾನದಂಡವನ್ನು ಸ್ಥಾಪಿಸಿದೆ.
10 / 12
ಹೊಸ ಟರ್ಮಿನಲ್ ನಿರ್ಮಾಣ 2 ಹಂತಗಳಲ್ಲಿ ನಡೆಯಲಿದೆ. ಈಗಾಗಲೇ ಮೊದಲ ಹಂತವನ್ನು ಪೂರ್ಣಗೊಳಿಸಲಾಗಿದೆ. ಇದು 255,000 ಚದರ ಮೀಟರ್‌ಗಳನ್ನು ಒಳಗೊಂಡಿದೆ. ಎರಡನೇ ಹಂತದ T2 4.41 ಲಕ್ಷ ಚದರ ಮೀಟರ್‌ಗಳಷ್ಟು ಇರಲಿದೆ.
11 / 12
ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆ ಇಳಿಸಲು ಹೊಸ ಟರ್ಮಿನಲ್ ನಿರ್ಮಾಣ ಮಾಡಿದ್ದು, ಪ್ರಸ್ತುತ 2.5 ಕೋಟಿಯಿಂದ ವಾರ್ಷಿಕವಾಗಿ ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸಲು ಸಾಧ್ಯವಾಗಲಿದೆ.
12 / 12
ಪ್ರತಿ ಗಂಟೆಗೆ 90 ವಿಮಾನಗಳ ಸಂಚಾರದೊಂದಿಗೆ ವಾರ್ಷಿಕ 3.6 ಕೋಟಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಇದನ್ನು ರೆಡಿ ಮಾಡಲಾಗಿದೆ.
Published On - 2:58 pm, Wed, 9 November 22