Updated on: Nov 08, 2022 | 9:33 PM
Lunar Eclipse 2022: Lunar Eclipse in different parts of karnataka
ಮಂಡ್ಯದಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಗೋಚರಗೊಂಡಾಗ ಚಂದ್ರ ಕಪ್ಪು-ಬಿಳುಪಿನ ಸಾಮಾನ್ಯ ದಿನಗಳಲ್ಲಿ ಕಾಣುವ ಹಾಗೆ ಚಂದ್ರ ಕಂಡಿದ್ದಾನೆ.
ರಾಯಚೂರಿನಲ್ಲಿ ಸುಮಾರು 6.10 ಕ್ಕೆ ರಾಹುಗ್ರಸ್ತ ಚಂದ್ರಗ್ರಹಣ ಗೋಚರವಾಗಿದೆ. ಈ ವೇಳೆ ಚಂದ್ರ ಹಾಲು ಬಿಳುಪಿನಂತೆ ಕಂಡಿದ್ದಾನೆ
ಬಳ್ಳಾರಿಯಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಸಮಯದಲ್ಲಿ ಚಂದ್ರನು ಕೆಂಪು-ಬಿಳುಪು ಬಣ್ಣ ಮಿಶ್ರಣದಲ್ಲಿ ಕಂಡಿದ್ದಾನೆ
ಕೋಲಾರದಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಸಮಯದಲ್ಲಿ ಚಂದ್ರ ಸಂಪೂರ್ಣ ಮರೆಯಾದಾಗ
ಕುಂದಾನಗರಿ ಬೆಳಗಾವಿಯಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಗೋಚರವಾಗಿದ್ದು, ಬೆಳಗಾವಿಯ ಎಸ್‌ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ದೂರದರ್ಶಕ ಮೂಲಕ ಚಂದ್ರಗ್ರಹಣ ವಿದ್ಯಾರ್ಥಿಗಳ ಕಣ್ತುಂಬಿಕೊಂಡರು.
ಕೊಪ್ಪಳದಲ್ಲಿ 6 ಗಂಟೆ ನಂತರ ರಾಹುಗ್ರಸ್ತ ಚಂದ್ರಗ್ರಹಣ ಗೋಚರಗೊಂಡಿದೆ
ಕಲಬುರಗಿಯಲ್ಲೂ ಕೂಡ 6 ಗಂಟೆ ನಂತರ ರಾಹುಗ್ರಸ್ತ ಚಂದ್ರಗ್ರಹಣ ಗೋಚರಗೊಂಡಿದೆ
ಶಿವಮೊಗ್ಗದಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಗೋಚರಗೊಂಡಿದ್ದು, ಚಂದ್ರ ನೇರಳೆ ಬಣ್ಣಕ್ಕೆ ತಿರುಗಿದ್ದಾನೆ
ಧಾರವಾಡದಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಗೋಚರಗೊಂಡಿದ್ದು, ಚಂದ್ರ ಕಡು ಕೆಂಪು ಬಣ್ಣಕ್ಕೆ ತಿರುಗಿದ್ದಾನೆ