AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಎಂಟು ವರ್ಷ, 50 ಅಪರಾಧ ಪ್ರಕರಣ, ಓರ್ವನಿಗೆ ಜೀವಾವಧಿ ಶಿಕ್ಷೆ ಕೊಡಿಸಿದ್ದ ಪೊಲೀಸ್ ಶ್ವಾನ ಪೂಜಾ ಸಾವು

ಜಿಲ್ಲಾ ಪೊಲೀಸ್ ಶ್ವಾನ ವಿಭಾಗಕ್ಕೆ ಈಗ ಕೆಟ್ಟ ಕಾಲ. ಇತ್ತೀಚಿಗೆ ಪ್ರಸಿದ್ಧ ತುಂಗಾ ಎಂಬ ಶ್ವಾನ ಸಾವನ್ನಪ್ಪಿತ್ತು. ಈಗ ಪೂಜಾ ಎಂಬ ಮತ್ತೊಂದು ಜರ್ಮನ್ ಶೆಫರ್ಡ್ ಜಾತಿಯ ಪೊಲೀಸ್ ಶ್ವಾನ ಸಾವನ್ನಪ್ಪಿದೆ.

TV9 Web
| Edited By: |

Updated on:Nov 09, 2022 | 9:17 AM

Share
ದಾವಣಗೆರೆ: ಜಿಲ್ಲಾ ಪೊಲೀಸ್ ಶ್ವಾನ ವಿಭಾಗಕ್ಕೆ ಈಗ ಕೆಟ್ಟ ಕಾಲ. ಇತ್ತೀಚಿಗೆ ಪ್ರಸಿದ್ಧ ತುಂಗಾ ಎಂಬ ಶ್ವಾನ ಸಾವನ್ನಪ್ಪಿತ್ತು. ಈಗ ಪೂಜಾ ಎಂಬ ಮತ್ತೊಂದು ಜರ್ಮನ್ ಶೆಫರ್ಡ್ ಜಾತಿಯ ಪೊಲೀಸ್ ಶ್ವಾನ  ಸಾವನ್ನಪ್ಪಿದೆ.

Last rites of Karnataka Police dog puja held with full state honours in davangere

1 / 5
ಈ ಪೂಜಾ ಶ್ವಾನ ಹುಟ್ಟಿದ್ದು ಜನವರಿ ಒಂದು 2013. ಸೇವೆಗೆ ಹಾಜರಾಗಿದ್ದು ಜನವರಿ ಒಂದು 2014 ರಂದು. ಒಂದು ವರ್ಷದ ವಯಸ್ಸಿನಲ್ಲಿಯೇ‌ ಪೂಜಾ ಅಪರಾಧಿಗಳ ಪತ್ತೆಯ ಕಾರ್ಯ ಆರಂಭಿಸಿದ್ದಳು. ಅಂದ್ರೆ ಈ ಪೂಜಾಳ ಸೇವಾ ಅವಧಿ ಸರಾಸರಿ ಎಂಟು ವರ್ಷ. ಈ ಎಂಟು ವರ್ಷಗಳಲ್ಲಿ ಐವತ್ತು ಅಪರಾಧ ಪ್ರಕರಣಗಳ ಪತ್ತೆಯಲ್ಲಿ ಪೂಜಾ ಭಾಗವಹಿಸಿದ್ದಾಳೆ.

2 / 5
ಅಂದ್ರೆ ವರ್ಷಕ್ಕೆ ಸರಾಸರಿ ಆರು ಪ್ರಕರಣಗಳ ಪತ್ತೆಯಲ್ಲಿ ಪೂಜೆ ಕೆಲ್ಸಾ ಮಾಡಿದ್ದಾಳೆ. ಇವುಗಳಲ್ಲಿ ಸ್ವಂತ ಪೂಜಾ ಶ್ವಾನವೇ 17 ಪ್ರಕರಣಗಳನ್ನ ಪತ್ತೆ ಹಚ್ಚಿದೆ.‌ ಅಂದ್ರೆ ವರ್ಷಕ್ಕೆ ಎರಡು ಪ್ರಕರಣ ಪತ್ತೆ ಹಚ್ಚಿದ್ದು ಇವಳ ಸಾಧನೆ. ವಿಶೇಷ ಅಂದ್ರೆ ಪೂಜಾ ಪತ್ತೆ ಹಚ್ಚಿದ್ದು ಒಂಬತ್ತು ಕಳ್ಳತನ ಹಾಗೂ ಎಂಟು ಕೊಲೆ  ಪ್ರಕರಣ. ಇದರಲ್ಲಿ ಓರ್ವನಿಗೆ ಜೀವಾವಧಿ ಶಿಕ್ಷೆ ಕೂಡಾ ಆಗಿದೆ.

3 / 5
ಸದಾ ಚಟುವಟಿಕೆಯಿಂದ ಇರುತ್ತಿದ್ದ ಪೂಜಾಗೆ 2018ರ ಪೊಲೀಸ್ ಕರ್ತವ್ಯ ಕೂಟದಲ್ಲಿ ಎರಡನೇ ಬಹುಮಾನ ಹಾಗೂ 2019ರಲ್ಲಿ ಇದೇ ಕೂಟದಲ್ಲಿ ಮೂರನೇ ಸ್ಥಾನ ಪಡೆದಿದ್ದು ಪೂಜಾಳ ಸಾಧನೆಗೆ ಹಿಡಿದ ಕನ್ನಡಿ.

4 / 5
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪೂಜಾ ಎಲ್ಲರನ್ನು ಅಗಲಿದ್ದಾಳೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಸೇರಿದಂತೆ ಪ್ರಮುಖರಿಂದ ಅಂತಿಮ ನಮನ ಸಲ್ಲಿಸಲಾಗಿದ್ದು. ಪೊಲೀಸ್ ಸಶಸ್ತ್ರ ಮೀಸಲು ಪಡೆಯ‌ ಮೈದಾನದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

5 / 5

Published On - 9:17 am, Wed, 9 November 22