
ಮಲೆನಾಡಿಗರ ಬಹುದಿನಗಳ ಕನಸಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣ (Shivamogga Airport) ಇದೀಗ ಜನಸೇವೆಗೆ ಸಜ್ಜಾಗಿದ್ದು, ಇದೇ ಫೆಬ್ರವರಿ 27ರಂದು ಉದ್ಘಾಟನೆಗೊಳ್ಳಲಿದೆ.

ಫೆಬ್ರವರಿ 27 ರಂದು ಬಿಎಸ್ ಯಡಿಯೂರಪ್ಪ ಅವರ 80ನೇ ಹುಟ್ಟುಹಬ್ಬದಂದೇ ಲೋಕಾಪರ್ಣೆ ಮಾಡುತ್ತಿರುವುದು ವಿಶೇಷ.

ಬಿಎಸ್ವೈ, ಮೋದಿ

ಸೋಗಾನೆ ಬಳಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ನಿಲ್ದಾಣದ ರನ್ ವೇ 3110 ಮೀಟರ್ ಉದ್ದ, ಅದರ ಅಗಲ 45 ಮೀಟರ್ ಇದೆ.

220 ಕೋಟಿ ರು. ವೆಚ್ಚದಲ್ಲಿ 662.38 ಎಕರೆ ಪ್ರದೇಶದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಉಡಾನ್ ಯೋಜನೆಯಡಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಇದೀಗ ಇದಕ್ಕಾಗಿ ಬಿಎಸ್ ಯಡಿಯೂರಪ್ಪ ಅವಿರತ ಪ್ರಯತ್ನ ಮಾಡಿದ್ದರು.

500 ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ 3.50 ಕಿ.ಮೀ. ರನ್‌ವೇ, ಕಾಂಪೌಂಡ್, ಕಾಂಪೌಂಡ್‌ಗೆ ಹೊಂದಿಕೊಂಡಂತೆ ರಸ್ತೆಗಳು, ನಿಲ್ದಾಣಕ್ಕೆ ಒಂದು ಕಿ.ಮೀ. ಸಂಪರ್ಕ ರಸ್ತೆ, ವಿಮಾನಗಳು ನಿಲುಗಡೆಯಾಗುವಂತಹ ಏಪ್ರಾನ್ ಹೊಂದಿದೆ

ಏರ್ ಟ್ರಾಫಿಕ್ ಕಂಟ್ರೋಲ್ನ 8 ಮಹಡಿ ಪೂರ್ಣವಾಗಿವೆ. 10 ವಾಚ್ ಟವರ್ ನಿರ್ಮಿಸಲಾಗಿದೆ. ಇನ್ನು ಎರಡು ಎಲೆಕ್ಟ್ರಿಕಲ್ ಸಬ್ ಸ್ಟೇಷನ್ ಕಾಮಗಾರಿ ಮುಕ್ತಾಯಗೊಂಡಿದೆ.

ಈ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡ ನಂತರ ಕಾತರದಿಂದ ಕಾಯುತ್ತಿರುವ ಮಲೆನಾಡಿನ ಜನರ ಸಂಚಾರಕ್ಕೆ ಆಧುನಿಕ ಸೌಕರ್ಯ ದೊರೆತಂತಾಗಲಿದೆ.

ವಿಮಾನ ನಿಲ್ದಾಣ ಉದ್ಘಾಟನೆಯ ನಂತರ ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಹಾರಾಟ ಪ್ರಾರಂಭವಾಗಲಿದೆ
Published On - 3:18 pm, Sun, 22 January 23