Flipkart Offer: ಬಿಡುಗಡೆಯಾದ ಒಂದೇ ತಿಂಗಳಲ್ಲಿ ಬೆಲೆ ಇಳಿಕೆ: ಪೋಕೋ M6 5G ಫೋನಿಗೆ ಭರ್ಜರಿ ಡಿಮ್ಯಾಂಡ್
Poco M6 5G Offer: ಪೋಕೋ M6 5G ಫೋನ್ ಡಿಸೆಂಬರ್ 26 ಕ್ಕೆ ತನ್ನ ಮಾರಾಟವನ್ನು ಶುರುಮಾಡಿತ್ತು. ಡಿಸ್ಕೌಂಟ್ ಜೊತೆಗೆ ಫ್ಲಿಪ್ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 5 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಕೂಡ ಇದೆ. ಅಲ್ಲದೆ ಭರ್ಜರಿ ಎಕ್ಸ್ಚೇಂಜ್ ಆಫರ್ ಕೂಡ ಘೋಷಣೆ ಮಾಡಲಾಗಿದ
Updated on: Feb 02, 2024 | 6:55 AM

ಒಂದು ತಿಂಗಳ ಹಿಂದೆ ಪ್ರಸಿದ್ಧ ಪೋಕೋ ಸಂಸ್ಥೆ ಭಾರತದಲ್ಲಿ ಬಿಡುಗಡೆ ಮಾಡಿದ ಹೊಸ ಪೋಕೋ M6 5G (Poco M6 5G) ಸ್ಮಾರ್ಟ್ಫೋನ್ ಈಗ ಬಂಪರ್ ಡಿಸ್ಕೌಂಟ್ನಲ್ಲಿ ಫ್ಲಿಪ್ಕಾರ್ಟ್ ಮೂಲಕ ಮಾರಾಟ ಕಾಣುತ್ತಿದೆ. ಇದು ಕೈಗೆಟುಕುವ 5G ಫೋನ್ ಆಗಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ.

ಪೋಕೋ M6 5G ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 4GB RAM + 128GB ಸ್ಟೋರೇಜ್ ಕಾನ್ಫಿಗರೇಶನ್‌ಗೆ ಫ್ಲಿಪ್ಕಾರ್ಟ್ನಲ್ಲಿ 12,999 ರೂ. ಇತ್ತು. ಆದರೀಗ ಇದು ಕೇವಲ 999,9 ರೂ. ಗೆ ಸೇಲ್ ಆಗುತ್ತಿದೆ. ಅಂತೆಯೆ ಇದರ 6GB + 128GB ಮತ್ತು 8GB + 256GB ರೂಪಾಂತವು ರೂ. 10,999 ಮತ್ತು 12,999 ರೂ. ಗೆ ಖರೀದಿಸಬಹುದು.

ಪೋಕೋ M6 5G ಫೋನ್ ಡಿಸೆಂಬರ್ 26 ಕ್ಕೆ ತನ್ನ ಮಾರಾಟವನ್ನು ಶುರುಮಾಡಿತ್ತು. ಡಿಸ್ಕೌಂಟ್ ಜೊತೆಗೆ ಫ್ಲಿಪ್ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 5 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಕೂಡ ಇದೆ. ಅಲ್ಲದೆ ಭರ್ಜರಿ ಎಕ್ಸ್ಚೇಂಜ್ ಆಫರ್ ಕೂಡ ಘೋಷಣೆ ಮಾಡಲಾಗಿದೆ.

ಪೋಕೋ M6 5G ಫೋನ್ನಲ್ಲಿ 6.74-ಇಂಚಿನ HD+ (1,600 x 720 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, 180Hz ನ ಟಚ್ ಸ್ಯಾಂಪ್ಲಿಂಗ್ ದರ ಮತ್ತು G Corning G3 3 ರಕ್ಷಣೆ ನೀಡಲಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 6100+ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, ಪೋಕೋ M6 5G 50-ಮೆಗಾಪಿಕ್ಸೆಲ್ AI-ಬೆಂಬಲಿತ ಪ್ರಾಥಮಿಕ ಮತ್ತು ಹಿಂಭಾಗದಲ್ಲಿ ಸೆಕೆಂಡರಿ ಸಂವೇದಕವನ್ನು ಹೊಂದಿದೆ. ಮುಂಭಾಗದ ಕ್ಯಾಮೆರಾವು 5-ಮೆಗಾಪಿಕ್ಸೆಲ್ ಸಂವೇದಕದಿಂದ ಕೂಡ ಕೂಡಿದೆ. 18W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಈ ಫೋನ್ ಆಂಡ್ರಾಯ್ಡ್ 13-ಆಧಾರಿತ MIUI 14 ಮೂಲಕ ರನ್ ಆಗುತ್ತದೆ. ಭದ್ರತೆಗಾಗಿ, ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಫೋನ್ 3.5 ಎಂಎಂ ಆಡಿಯೊ ಜಾಕ್ ಅನ್ನು ಸಹ ಹೊಂದಿದೆ. ಇದು 5G, 4G LTE, Wi-Fi 5, ಬ್ಲೂಟೂತ್ 5.3, GPS ಮತ್ತು USB ಟೈಪ್-C ಸಂಪರ್ಕವನ್ನು ಬೆಂಬಲಿಸುತ್ತದೆ.

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.
Read More




