ಪೋಕೋ M6 ಪ್ರೊ 5G ಫೋನಿಗೆ ಭರ್ಜರಿ ಬೇಡಿಕೆ: ಹೊಸ 8GB + 256GB ರೂಪಾಂತರ ಬಿಡುಗಡೆ

|

Updated on: Dec 03, 2023 | 6:55 AM

POCO M6 Pro 5G 8GB + 256GB: ಪೋಕೋ M6 ಪ್ರೊ 5G ಫೋನಿಗೆ ಭರ್ಜರಿ ಬೇಡಿಕೆ ಇರುವ ಕಾರಣ 8GB + 256GB ರೂಪಾಂತರವನ್ನು ಬಿಡುಗಡೆ ಮಾಡಿದೆ. ನೂತನ ರೂಪಾಂತರ 8GB RAM + 256GB ಆಯ್ಕೆಗೆ 14,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

1 / 6
ಪೋಕೋ ಸಂಸ್ಥೆಯ ಸ್ಮಾರ್ಟ್​ಫೋನ್​​ಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಮುಖ್ಯವಾಗಿ ಬಜೆಟ್ ಬೆಲೆಗೆ ಆಕರ್ಷಕ ಫೀಚರ್​ಗಳ ಫೋನನ್ನು ಪರಿಚಯಿಸುತ್ತಿರುವ ಪೋಕೋ, ಇತ್ತೀಚೆಗಷ್ಟೆ ದೇಶದಲ್ಲಿ ಹೊಸ ಪೋಕೋ M6 ಪ್ರೊ ಎಂಬ 5ಜಿ ಫೋನನ್ನು ಅನಾವರಣ ಮಾಡಿತ್ತು. ಇದು ರೆಡ್ಮಿ ನೋಟ್ 12R ನ ಮರುಬ್ರಾಂಡ್ ಆಗಿದೆ.

2 / 6
ಬಿಡುಗಡೆ ಆದ ಸಮಯದಲ್ಲಿ ಈ ಸ್ಮಾರ್ಟ್​ಫೋನ್ ಕೇವಲ ಎರಡು RAM/ಸ್ಟೋರೇಜ್ ಮಾದರಿಗಳಲ್ಲಿ ಮಾತ್ರ ನೀಡಲಾಗಿತ್ತು. ಬಳಿಕ 4GB + 128GB ರೂಪಾಂತರವನ್ನು ಪರಿಚಯಿಸಿತ್ತು. ಇದೀಗ ಈ ಫೋನಿಗೆ ಭರ್ಜರಿ ಬೇಡಿಕೆ ಇರುವ ಕಾರಣ 8GB + 256GB ರೂಪಾಂತರವನ್ನು ಬಿಡುಗಡೆ ಮಾಡಿದೆ.

3 / 6
ಪೋಕೋ M6 ಪ್ರೊ 5G ಸ್ಮಾರ್ಟ್​ಫೋನ್​ನ ನೂತನ ರೂಪಾಂತರ 8GB RAM + 256GB ಆಯ್ಕೆಗೆ 14,999 ರೂ. ನಿಗದಿ ಮಾಡಲಾಗಿದೆ. ಉಳಿದ 4GB RAM + 128GB ಸ್ಟೋರೇಜ್ ಮಾದರಿಗೆ 11,999 ರೂ., 4GB RAM + 64GB ಮತ್ತು 6GB RAM + 128GB ರೂಪಾಂತರಕ್ಕೆ ಕ್ರಮವಾಗಿ 10,999 ಮತ್ತು 12,999 ರೂ. ಆಗಿದೆ.

4 / 6
ಹೊಸ ರೂಪಾಂತರವು ಈಗಾಗಲೇ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿದೆ. ಈ ಫೋನ್ ಅನ್ನು ಫಾರೆಸ್ಟ್ ಗ್ರೀನ್ ಮತ್ತು ಪವರ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದು. ಕಂಪನಿಯು HDFC ಮತ್ತು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ 2,000 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ.

5 / 6
ಪೋಕೋ M6 ಪ್ರೊ 5G ಫೋನ್ 90Hz ರಿಫ್ರೆಶ್ ರೇಟ್‌ನೊಂದಿಗೆ 6.79-ಇಂಚಿನ FHD+ ಡಿಸ್ ಪ್ಲೇ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಪಡೆದುಕೊಂಡಿದೆ. ಈ ಫೋನ್ Adreno GPU ಜೊತೆ ಜೋಡಿಸಲಾದ ಕ್ವಾಲ್ಕಂ ಸ್ನಾಪ್​ಡ್ರಾಗನ್ 4 Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.

6 / 6
ಈ ಫೋನ್ 50MP ಪ್ರಾಥಮಿಕ ಸಂವೇದಕವನ್ನು ಮತ್ತು ಹಿಂಭಾಗದಲ್ಲಿ 2MP ಡೆಪ್ತ್ ಸಂವೇದಕವನ್ನು ಹೊಂದಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಅಳವಡಿಸಲಾಗಿದೆ. 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಆಂಡ್ರಾಯ್ಡ್ 13-ಆಧಾರಿತ MIUI 14 ಕಸ್ಟಮ್ ಸ್ಕಿನ್ ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.