Pooja Gandhi: ಮದುವೆ ಬಳಿಕ ಪತಿಯ ಜೊತೆ ಕವಿಶೈಲಕ್ಕೆ ಭೇಟಿ ನೀಡಿದ ಪೂಜಾ ಗಾಂಧಿ
‘ಕವಿಶೈಲ’ ಎಂದು ಕ್ಯಾಪ್ಶನ್ ನೀಡಿ ಪತಿಯ ಜೊತೆ ಇರುವ ಫೋಟೋಗಳನ್ನು ಪೂಜಾ ಗಾಂಧಿ ಪೋಸ್ಟ್ ಮಾಡಿದ್ದಾರೆ. ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಹರಿದು ಬಂದಿದೆ. ‘ಬಾಳು ಸುಖವಾಗಿರಲಿ’ ಎಂದು ಎಲ್ಲರೂ ಹಾರೈಸಿದ್ದಾರೆ.
1 / 5
‘ಮುಂಗಾರು ಮಳೆ’ ಹುಡುಗಿ ಪೂಜಾ ಗಾಂಧಿ ಅವರು ನವೆಂಬರ್ 29ರಂದು ಸಿಂಪಲ್ ಆಗಿ ಮದುವೆ ಆಗಿದ್ದಾರೆ. ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿ ಪ್ರಕಾರ ಅವರು ಮದುವೆ ಆಗಿದ್ದರು. ಈಗ ಅವರು ಕುಪ್ಪಳ್ಳಿಗೆ ಭೇಟಿ ನೀಡಿದ್ದಾರೆ.
2 / 5
ಲಾಜಿಸ್ಟಿಕ್ ಕಂಪನಿ ಹೊಂದಿರುವ ಬೆಂಗಳೂರು ಮೂಲದ ಉದ್ಯಮಿ ವಿಜಯ್ ಅವರನ್ನು ಪೂಜಾ ಗಾಂಧಿ ವರಿಸಿದ್ದಾರೆ. ಮದುವೆ ಬಳಿಕ ಕುವೆಂಪು ಹುಟ್ಟಿ ಬೆಳೆದ ಜಾಗಕ್ಕೆ ಅವರು ಭೇಟಿ ನೀಡಿದ್ದಾರೆ ಅನ್ನೋದು ವಿಶೇಷ.
3 / 5
‘ಕವಿಶೈಲ’ ಎಂದು ಪತಿಯ ಜೊತೆ ಇರುವ ಫೋಟೋಗಳನ್ನು ಪೂಜಾ ಗಾಂಧಿ ಪೋಸ್ಟ್ ಮಾಡಿದ್ದಾರೆ. ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಹರಿದು ಬಂದಿದೆ. ‘ಬಾಳು ಸುಖವಾಗಿರಲಿ’ ಎಂದು ಎಲ್ಲರೂ ಹಾರೈಸಿದ್ದಾರೆ.
4 / 5
ಪೂಜಾ ಗಾಂಧಿ ಅವರು ಹೊರ ರಾಜ್ಯದವರು. ಅವರು ಕರ್ನಾಟಕಕ್ಕೆ ಬಂದು ಕನ್ನಡ ಕಲಿತಿದ್ದಾರೆ. ಈಗ ಅವರು ನಿರಂತರವಾಗಿ ಕನ್ನಡ ಕಲಿಯುವ ಪ್ರಕ್ರಿಯೆಗೆ ಒಳಗಾಗಿದ್ದಾರೆ. ಅವರ ಪತಿ ವಿಜಯ್ ಕೂಡ ಪೂಜಾ ಗಾಂಧಿಗೆ ಕನ್ನಡ ಕಲಿಸುತ್ತಿದ್ದಾರೆ.
5 / 5
ನವೆಂಬರ್ 1ರಂದು ಪೂಜಾ ಗಾಂಧಿ ಅವರು ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದರು. ಈಗ ಅವರು ಕನ್ನಡದ ಖ್ಯಾತ ಸಾಹಿತಿ ಕುವೆಂಪು ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿ ಕನ್ನಡದ ಕಂಪನ್ನು ಎಲ್ಲ ಕಡೆ ಹರಡುವ ಪ್ರಯತ್ನ ಮಾಡಿದ್ದಾರೆ.