ನಟಿ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಎನಿಸಿಕೊಂಡಿದ್ದವರು.
ಆದರೆ ಇತ್ತೀಚೆಗೆ ತೆಲುಗು ಚಿತ್ರಗಳಲ್ಲಿ ನಟಿಸುವುದನ್ನು ಬಹುವಾಗಿ ಕಡಿಮೆ ಮಾಡಿದ್ದಾರೆ ಪೂಜಾ ಹೆಗ್ಡೆ.
ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾದಿಂದಲೂ ಈ ನಟಿ ಹೊರನಡೆದರು.
ಹಿಂದಿ ಚಿತ್ರರಂಗದ ಕಡೆಗೆ ಹೆಚ್ಚು ಗಮನ ಹರಿಸಲು ಪೂಜಾ, ತೆಲುಗು ಸಿನಿಮಾಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಪೂಜಾ ಹೆಗ್ಡೆ ಬಳಿ ಈಗ ಹೆಚ್ಚು ಸಿನಿಮಾಗಳಿಲ್ಲ. ಪ್ರಸ್ತುತ ‘ದೇವಾ’ ಹೆಸರಿನ ಒಂದು ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಪೂಜಾ ಹೆಗ್ಡೆಗೆ ಹೋಗಬೇಕಾದ ಹಲವು ಸಿನಿಮಾ ಅವಕಾಶಗಳನ್ನು ಕನ್ನಡತಿಯರಾದ ರಶ್ಮಿಕಾ ಹಾಗೂ ಶ್ರೀಲೀಲಾ ಬಾಚಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿರುವ ಪೂಜಾ ಹೆಗ್ಡೆ ಆಗಾಗ್ಗೆ ತಮ್ಮ ಹಾಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.