Adipurush: ‘ಆದಿಪುರುಷ್​’ ಹೀರೋ ಪ್ರಭಾಸ್​ಗೆ 150 ಕೋಟಿ ರೂ. ಸಂಬಳ; ಇನ್ನುಳಿದ ಕಲಾವಿದರಿಗೆ ಸಿಕ್ಕ ಸಂಭಾವನೆ ಎಷ್ಟು?

| Updated By: ಮದನ್​ ಕುಮಾರ್​

Updated on: Jun 18, 2023 | 3:38 PM

Prabhas Remuneration: ಬಹುಕೋಟಿ ರೂಪಾಯಿ ವೆಚ್ಚದಲ್ಲಿ ‘ಆದಿಪುರುಷ್​’ ಸಿನಿಮಾ ತಯಾರಾಗಿದೆ. ಕಲಾವಿದರ ಸಂಭಾವನೆಗೆ ಸಾಕಷ್ಟು ಹಣ ಖರ್ಚಾಗಿದೆ. ಆ ಬಗ್ಗೆ ಇಲ್ಲಿದೆ ವಿವರ..

1 / 5
ಪ್ಯಾನ್ ಇಂಡಿಯಾ ಹೀರೋ ಆಗಿರುವ ಪ್ರಭಾಸ್​ ಅವರು ‘ಆದಿಪುರುಷ್​’ ಸಿನಿಮಾದಲ್ಲಿ ರಾಮನ ಪಾತ್ರ ಮಾಡಿದ್ದಾರೆ. ಅವರಿಗೆ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ವರದಿ ಆಗಿದೆ.

2 / 5
ಬಾಲಿವುಡ್​ನ ಬಹುಬೇಡಿಕೆಯ ನಟಿ ಕೃತಿ ಸನೋನ್​ ಅವರು ಸೀತೆಯ ಪಾತ್ರ ಮಾಡಿದ್ದಾರೆ. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರಿಗೆ ‘ಆದಿಪುರುಷ್​’ ನಿರ್ಮಾಪಕರು ಮೂರು ಕೋಟಿ ರೂಪಾಯಿ ನೀಡಿದ್ದಾರೆ ಎನ್ನಲಾಗಿದೆ.

3 / 5
ಸೈಫ್​ ಅಲಿ ಖಾನ್​ ಅವರು ರಾವಣನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅವರ ಮ್ಯಾನರಿಸಂ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ನಟಿಸಲು ಅವರು ಬರೋಬ್ಬರಿ 12 ಕೋಟಿ ರೂಪಾಯಿ ಸಂಬಳ ಪಡೆದಿದ್ದಾರೆ ಎಂಬ ಮಾತು ಕೇಳಿಬಂದಿದೆ.

4 / 5
ರಾಮಾಯಣದ ಕಥೆಯಲ್ಲಿ ಲಕ್ಷ್ಮಣನ ಪಾತ್ರ ಕೂಡ ಮುಖ್ಯವಾದದ್ದು. ಈ ಪಾತ್ರವನ್ನು ನಟ ಸನ್ನಿ ಸಿಂಗ್​ ಮಾಡಿದ್ದಾರೆ. ಅವರಿಗೆ 1.5 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ ಎಂದು ‘ಬಾಲಿವುಡ್​ ಬಬಲ್​’ ವರದಿ ಮಾಡಿದೆ.

5 / 5
ನಟಿ ಸೋನಲ್​ ಚೌಹಾಣ್​ ಅವರು ರಾವಣನ ಪತ್ನಿ ಮಂಡೋದರಿಯಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ಕೇವಲ ಎರಡೇ ದೃಶ್ಯದಲ್ಲಿ ಬಂದು ಹೋಗುವ ಅವರಿಗೆ 50 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ.