ಪದ್ಮಶ್ರೀ ಪುರಸ್ಕೃತರಾದ ವೆಂಕಪ್ಪ ಅಂಬಾಜಿ ಸುಗತೇಕರ್‌​​ನ್ನು ಸನ್ಮಾನಿಸಿದ ಪ್ರಲ್ಹಾದ್ ಜೋಶಿ

Updated on: Jan 26, 2025 | 8:02 PM

76ನೇ ಗಣರಾಜ್ಯೋತ್ಸವದಂದು ಕರ್ನಾಟಕದ ಮೂವರು ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇದರಲ್ಲಿ ಬಾಗಲಕೋಟೆಯ ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗತೇಕರ್‌ ಒಬ್ಬರು. 71 ವರ್ಷಗಳ ಕಲಾಸೇವೆಗೆ ಈ ಪ್ರಶಸ್ತಿ ಲಭಿಸಿದೆ. ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರು ವೆಂಕಪ್ಪ ಅವರನ್ನು ಅಭಿನಂದಿಸಿದ್ದಾರೆ.

1 / 5
76ನೇ ಗಣರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ನಿನ್ನೆ ಘೋಷಣೆ ಮಾಡಿದ್ದು, ಇದರಲ್ಲಿ ಕರ್ನಾಟಕದ ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ ಮೂವರಿಗೆ ಪದ್ಮಶ್ರೀ ದೊರಕಿದ್ದು ಹೆಮ್ಮೆಯ ವಿಷಯ. ಮೂವರ ಪೈಕಿ ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗತೇಕರ್‌​ನ್ನು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಸನ್ಮಾನ ಮಾಡಿದ್ದಾರೆ.

76ನೇ ಗಣರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ನಿನ್ನೆ ಘೋಷಣೆ ಮಾಡಿದ್ದು, ಇದರಲ್ಲಿ ಕರ್ನಾಟಕದ ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ ಮೂವರಿಗೆ ಪದ್ಮಶ್ರೀ ದೊರಕಿದ್ದು ಹೆಮ್ಮೆಯ ವಿಷಯ. ಮೂವರ ಪೈಕಿ ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗತೇಕರ್‌​ನ್ನು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಸನ್ಮಾನ ಮಾಡಿದ್ದಾರೆ.

2 / 5

ದೆಹಲಿ ನನ್ನ ನಿವಾಸದಲ್ಲಿ 2025ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ನಮ್ಮ ರಾಜ್ಯದ ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ, ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್‌ ಅವರನ್ನು ಭೇಟಿಯಾಗುವ ಅವಕಾಶ ದೊರೆಯಿತು ಎಂದು ಪ್ರಲ್ಹಾದ್​ ಜೋಶಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

3 / 5

ವೆಂಕಪ್ಪ ಅವರು ಸಹಸ್ರಾರು ಹಾಡುಗಳನ್ನು ಜ್ಞಾಪಕ ಶಕ್ತಿಯಿಂದಲೇ, ಬಾಯಿಪಾಠದ ಮೂಲಕವೇ ಹಾಡಿ ಅಪಾರ ಜನಪ್ರಿಯತೆ ಹೊಂದಿದ್ದಾರೆ. ಅವರಿಗೆ ಇಂದು ಆತ್ಮೀಯತೆಯಿಂದ ಅಭಿನಂದಿಸಿ ಪುಟ್ಟ ಗೌರವ ನಮನವನ್ನು ಸಲ್ಲಿಸುವ ಸದಾವಕಾಶ ಒದಗಿ ಬಂದಿದ್ದು ನನಗೆ ಅತ್ಯಂತ ಸಂತೋಷ ತಂದಿದೆ ಎಂದು ಬರೆದುಕೊಂಡಿದ್ದಾರೆ.

4 / 5

ಗೊಂದಳಿ ಹಾಡಿನ ಮೂಲಕ ಸುದೀರ್ಘ ಕಲಾಸೇವೆ ಮಾಡಿಕೊಂಡಿರುವ ವೆಂಕಪ್ಪ, 71 ವರ್ಷಗಳಿಂದ ಗೊಂದಳಿ ಪದಗಳನ್ನು ಹಾಡುತ್ತಿದ್ದು, ಜನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಅವರನ್ನು ಕೊಂಡಾಡಿದ್ದರು.

5 / 5

ವೆಂಕಪ್ಪ ಅಂಬಾಜಿ ಸುಗಟೇಕರ್​ ಅವರೊಂದಿಗೆ ಕೊಪ್ಪಳ ಮೂಲದ ತೊಗಲುಗೊಂಬೆಯಾಟದ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತ, ಕಲಬುರಗಿ ಮೂಲದವರಾಗಿರುವ ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರಿಗೂ ಪ್ರಲ್ಹಾದ್​ ಜೋಶಿ ಶುಭಕೋರಿದ್ದಾರೆ. ನಿಮ್ಮ ಸಾಧನೆ ನಮ್ಮೆಲ್ಲರಿಗೂ ಅತ್ಯಂತ ಸ್ಪೂರ್ತಿದಾಯಕ, ನಿಮ್ಮ ಸಾಧನೆ ಸತತವಾಗಿ ಮುಂದುವರಿಯಲಿ ಮತ್ತು ರಾಷ್ಟ್ರಕ್ಕೆ ಪ್ರೇರಣಾದಾಯಕವಾಗಲಿ ಎಂದಿದ್ದಾರೆ.

Published On - 7:59 pm, Sun, 26 January 25

Loading...
Unable to load recommendations.
Follow Us